ಆ್ಯಪ್ನಗರ

ಅಬ್ಬಯ್ಯರಿಂದ ಹಾನಿಯಾದ ಮನೆಗಳ ವೀಕ್ಷ ಣೆ

ಹುಬ್ಬಳ್ಳಿ : ಕಳೆದೆರೆಡು ದಿನಗಳಿಂದ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದ ಕ್ಷೇತ್ರ ವ್ಯಾಪ್ತಿಯ ವಿವಿಧೆಡೆ ಹಾನಿಗೊಳಗಾದ ಪ್ರದೇಶಗಳು ಹಾಗೂ ಮನೆಗಳಿಗೆ ಬುಧವಾರ ಶಾಸಕ ಪ್ರಸಾದ ಅಬ್ಬಯ್ಯ ಅವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Vijaya Karnataka 8 Aug 2019, 5:00 am
ಹುಬ್ಬಳ್ಳಿ : ಕಳೆದೆರೆಡು ದಿನಗಳಿಂದ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದ ಕ್ಷೇತ್ರ ವ್ಯಾಪ್ತಿಯ ವಿವಿಧೆಡೆ ಹಾನಿಗೊಳಗಾದ ಪ್ರದೇಶಗಳು ಹಾಗೂ ಮನೆಗಳಿಗೆ ಬುಧವಾರ ಶಾಸಕ ಪ್ರಸಾದ ಅಬ್ಬಯ್ಯ ಅವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Vijaya Karnataka Web view of homes damaged by abbayya
ಅಬ್ಬಯ್ಯರಿಂದ ಹಾನಿಯಾದ ಮನೆಗಳ ವೀಕ್ಷ ಣೆ


ಕ್ಷೇತ್ರ ವ್ಯಾಪ್ತಿಯ ಹಳೇ ಹುಬ್ಬಳ್ಳಿ ಭಾಗದ ಇಸ್ಲಾಂಪುರ, ಕಟಗರ ಓಣಿ, ಸದರಸೋಫಾ, ಮಸ್ತಾನಸೋಫಾ, ಬೀರಬಂದ ಓಣಿ, ಕೃಷ್ಣಾಪುರ ಓಣಿ, ಅಕ್ಕಿಪೇಟೆ, ಗಾರ್ಡನಪೇಟೆ, ಮಾಲ್ದಾರಗಲ್ಲಿ, ದೇಸಾಯಿ ಓಣಿ, ವೀರಾಪುರ ಓಣಿ, ಕೆ.ಕೆ. ನಗರ, ದಿವಾನ್‌ ಶಾ ನಗರ, ಗಬ್ಬೂರು, ಗಣೇಶಪೇಟೆ ಸೇರಿದಂತೆ ಆಧಿಕಾರಿಗಳೊಂದಿಗೆ 30ಕ್ಕೂ ಹೆಚ್ಚು ಕುಸಿದ ಮನೆಗಳಿಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಮಳೆಯಿಂದ ಕ್ಷೇತ್ರ ವ್ಯಾಪ್ತಿಯ ಬಹುತೇಕ ಭಾಗದಲ್ಲಿ ಮನೆಗಳು ಕುಸಿದಿದ್ದು, ಜನರು ಸಂಕಷ್ಟಕ್ಕೀಡಾಗಿದ್ದಾರೆ. ಸಂಪೂರ್ಣ ಹಾಗೂ ಭಾಗಶಃ ನೆಲಸಮಗೊಂಡ ಮನೆಗಳ ಮಾಲೀಕರನ್ನು ಕೂಡಲೇ ಸಮೀಪದ ಸಮುದಾಯ ಭವನಗಳಿಗೆ ಸ್ಥಳಾಂತರಿಸುವಂತೆ ಹಾಗೂ ಶಿಥಿಲಾವಸ್ಥೆಯಲ್ಲಿರುವ ಮನೆಗಳ ಮಾಲೀಕರಿಗೆ ಬೇರೆಡೆ ಸ್ಥಳಾಂತರಗೊಳ್ಳಲು ಪಾಲಿಕೆಯಿಂದ ನೋಟೀಸ್‌ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ತಹಸೀಲ್ದಾರ್‌ ಶಶಿಧರ ಮಾಡ್ಯಾಳ, ನೋಡಲ್‌ ಅಧಿಕಾರಿ ರಮೇಶ ದೇಸಾಯಿ, ಪಾಲಿಕೆ ಇಇ ರಮೇಶ ಚವ್ಹಾಣ್‌, ತಲಾಟಿಗಳಾದ ಪರಮಾನಂದ ಶಿವಳ್ಳಿಮಠ, ಗುರುನಾಥ ಸುಣಗಾರ, ಗಿರೀಶ ಬಾರದ್ವಾಡ, ಪಾಲಿಕೆ ಮಾಜಿ ಸದಸ್ಯ ವಿಜುನಗೌಡ ಪಾಟೀಲ, ಮುಖಂಡರಾದ ಪ್ರಭು ಪ್ರಭಾಕರ, ಮೆಹಮೂದ್‌ ಕೋಳೂರು, ಅಜೀಜುಲ್ಲಾ ಪಟ್ಟಣಕಾರಿ, ಕುಮಾರ ಕುಂದನಹಳ್ಳಿ, ಅಬ್ಬು ಬಿಜಾಪುರ, ಸೈಯದ್‌ ಅಹ್ಮದ್‌ ಮದನ್‌, ಬಾಗಣ್ಣ ಬಿರಾಜದಾರ್‌, ಪಾಲಿಕೆ ಅಧಿಕಾರಿಗಳಾದ ಆನಂದ ಕಾಂಬ್ಳೆ, ಬಸವರಾಜ ಲಮಾಣಿ, ಗಣಾಚಾರಿ, ಇತರರು ಇದ್ದರು.

ಕುಸಿದ ಮನೆಗಳ ವೀಕ್ಷ ಣೆ ವೇಳೆ ಕಣ್ಣೀರಿಡುತ್ತಿದ್ದ ಮನೆಗಳ ಮಾಲೀಕರ ಸಂಕಷ್ಟಕ್ಕೆ ಮರುಗಿದ ಶಾಸಕ ಪ್ರಸಾದ ಅಬ್ಬಯ್ಯ ಅವರು ವೈಯಕ್ತಿಕವಾಗಿ ತಲಾ 5 ಸಾವಿರ ರೂ. ಪರಿಹಾರ ಧನ ನೀಡಿ, ನಿರಾಶ್ರಿತರಿಗೆ ಆತ್ಮಸ್ಥೈರ್ಯ ತುಂಬಿದರು. ಅಲ್ಲದೇ, ಸರ್ಕಾರದಿಂದ ಹೆಚ್ಚಿನ ಪರಿಹಾರ ಧನ ಮಂಜೂರು ಮಾಡಿಸಿಕೊಡುವುದಾಗಿ ಭರವಸೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ