ಆ್ಯಪ್ನಗರ

ಇಂದು ಕೆಎಸ್‌ಸಿಎ ಮೈದಾನದಲ್ಲಿವಿಜಯ ಮರ್ಚಂಟ್‌ ಟ್ರೋಫಿ ಕ್ರಿಕೆಟ್‌

ಹುಬ್ಬಳ್ಳಿ : ಇಲ್ಲಿನ ರಾಜನಗರ ಕೆಎಸ್‌ಸಿಎ ಕ್ರಿಕೆಟ್‌ ಮೈದಾನದಲ್ಲಿಅ.11 ರಿಂದ ಆರಂಭವಾಗಲಿರುವ ಕರ್ನಾಟಕ ಮತ್ತು ಹೈದ್ರಾಬಾದ್‌ ತಂಡದ ಅಂಡರ್‌-16 ವಿಜಯ ಮರ್ಚಂಟ್‌ ಟ್ರೋಫಿ ಪಂದ್ಯಕ್ಕೆ ವರುಣ ಅಡ್ಡಿಪಡಿಸುವ ಸಾಧ್ಯತೆಗಳು ದಟ್ಟವಾಗಿವೆ.

Vijaya Karnataka 11 Oct 2019, 5:00 am
ಹುಬ್ಬಳ್ಳಿ : ಇಲ್ಲಿನ ರಾಜನಗರ ಕೆಎಸ್‌ಸಿಎ ಕ್ರಿಕೆಟ್‌ ಮೈದಾನದಲ್ಲಿಅ.11 ರಿಂದ ಆರಂಭವಾಗಲಿರುವ ಕರ್ನಾಟಕ ಮತ್ತು ಹೈದ್ರಾಬಾದ್‌ ತಂಡದ ಅಂಡರ್‌-16 ವಿಜಯ ಮರ್ಚಂಟ್‌ ಟ್ರೋಫಿ ಪಂದ್ಯಕ್ಕೆ ವರುಣ ಅಡ್ಡಿಪಡಿಸುವ ಸಾಧ್ಯತೆಗಳು ದಟ್ಟವಾಗಿವೆ.
Vijaya Karnataka Web vijay merchant trophy cricket at ksca ground today
ಇಂದು ಕೆಎಸ್‌ಸಿಎ ಮೈದಾನದಲ್ಲಿವಿಜಯ ಮರ್ಚಂಟ್‌ ಟ್ರೋಫಿ ಕ್ರಿಕೆಟ್‌


ಕಳೆದ ಮೂರ್ನಾಲು ದಿನಗಳಿಂದ ಆಗಾಗ ಮಳೆ ಸುರಿಯುತ್ತಲಿದೆ. ಗುರುವಾರ ಮಧ್ಯಾಹ್ನ ಜೋರಾಗಿ ಮಳೆ ಬಿದ್ದ ಪರಿಣಾಮ ಕೆಲವೇ ಕ್ಷಣದಲ್ಲಿಮೈದಾನ ನೀರಿನಿಂದ ತುಂಬಿಕೊಂಡಿತು. ಇದರಿಂದ ಕರ್ನಾಟಕ ಮತ್ತು ಹೈದ್ರಾಬಾದ್‌ ತಂಡದ ಆಟಗಾರರು ಅಭ್ಯಾಸ ಮಾಡದೇ ಮರಳಿದರು.

ಮಳೆ ನಿಂತರೆ ಆಟ : ಅ.11 ರಿಂದ 13ರ ವರೆಗೆ ಕರ್ನಾಟಕ ಮತ್ತು ಹೈದ್ರಾಬಾದ್‌ ತಂಡಗಳು ಮೂರು ದಿನದ ಪಂದ್ಯದಲ್ಲಿಸೆಣಸಲಿದ್ದು, ನಿಗದಿಯಂತೆ ಶುಕ್ರವಾರ ಬೆಳಗ್ಗೆ 9.30ಕ್ಕೆ ಪಂದ್ಯ ಆರಂಭವಾಗಲಿದೆ. ಮಳೆಯಿಂದ ಮೈದಾನ ಸಂಪೂರ್ಣ ಹಸಿಯಾಗಿದ್ದು, ಶುಕ್ರವಾರ ವರಣನ ಆರ್ಭಟ ನಿಂತರೆ ಮಾತ್ರ ಪಂದ್ಯ ನಡೆಯಬಹುದು.

ಕರ್ನಾಟಕ ತಂಡವನ್ನು ಅಶ್ವಿನ್‌ ಸಂತೋಷ ಮುನ್ನಡೆಸಲಿದ್ದಾರೆ. ಬ್ಯಾಟಿಂಗ್‌, ಬೌಲಿಂಗ್‌, ಫೀಲ್ಡಿಂಗ್‌ ಮೂರು ವಿಭಾಗದಲ್ಲಿತಂಡ ಬಲಿಷ್ಠವಾಗಿದೆ. ಆದರೆ, ಮಳೆ ಬರುತ್ತಿರುವುದರಿಂದ ಪಂದ್ಯಕ್ಕೆ ಅಡ್ಡಿಯಾಗಿದ್ದು, ಪಂದ್ಯ ಆರಂಭವಾದರೆ ನಮ್ಮ ತಂಡ ಉತ್ತಮ ಪ್ರದರ್ಶನ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು ಕರ್ನಾಟಕ ತಂಡದ ಕೋಚ್‌ ಸಿ.ರಘು.

ಹುಬ್ಬಳ್ಳಿ ಕೆಎಸ್‌ಸಿಎ ಮೈದಾನದಲ್ಲಿಇತ್ತೀಚೆಗೆ ನಡೆದ ಭಾರತ-ಶ್ರೀಲಂಕಾ ಎ ತಂಡಗಳ ಅನಧಿಕೃತ ಟೆಸ್ಟ್‌ ಪಂದ್ಯಕ್ಕೂ ಮಳೆ ಅಡ್ಡಿಯಾಗಿತ್ತು. ಕೆಪಿಎಲ್‌ ಪಂದ್ಯಕ್ಕೂ ಮಳೆ ಅಡ್ಡಿಯಾಗಬಹುದು ಎಂದು ಹುಬ್ಬಳ್ಳಿಯಲ್ಲಿಈ ಬಾರಿ ಕೆಪಿಎಲ್‌ ಪಂದ್ಯ ನಡೆಯಲಿಲ್ಲ. ಈಗ ವಿಜಯ ಮರ್ಚಂಟ್‌ ಟ್ರೋಫಿಗೂ ಮಳೆ ಅಡ್ಡಿಯಾಗುತ್ತಿರುವುದರಿಂದ ಈ ಭಾಗದ ಕ್ರಿಕೆಟ್‌ ಪ್ರೇಮಿಗಳಲ್ಲಿನಿರಾಸೆ ಮೂಡಿಸಿದೆ.

ಇನ್ನು ಅ.17ರಿಂದ 19 ರವರೆಗೆ ಬೆಳಗಾವಿ ಕೆಎಸ್‌ಸಿಎ ಮೈದಾನದಲ್ಲಿನಡೆಯಲಿರುವ ಪಂದ್ಯದಲ್ಲಿಕರ್ನಾಟಕ ಮತ್ತು ಗೋವಾ ತಂಡಗಳು ಸೆಣಸಲಿವೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ