ಆ್ಯಪ್ನಗರ

ವಿರಾಜ್‌ ಚಲನಚಿತ್ರ 14ರಂದು ಬಿಡುಗಡೆ

ಹುಬ್ಬಳ್ಳಿ : ಈಗಾಗಲೇ 3.25 ಲಕ್ಷ ಜನರು ಟೀಸರ್‌ ವಿಕ್ಷಿಸಿ ಸದ್ದು ಮಾಡಿದ ವಿರಾಜ್‌ ಚಿತ್ರ ಡಿ.14ರಂದು ಪ್ರಪಂಚದ್ಯಾಂತ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡಗಡೆಯಾಗಲಿದೆ ಚಿತ್ರದ ನಾಯಕ ನಟ ವಿದ್ಯಾಭರಣ ಹೇಳಿದರು.

Vijaya Karnataka 9 Dec 2018, 5:00 am
ಹುಬ್ಬಳ್ಳಿ : ಈಗಾಗಲೇ 3.25 ಲಕ್ಷ ಜನರು ಟೀಸರ್‌ ವಿಕ್ಷಿಸಿ ಸದ್ದು ಮಾಡಿದ ವಿರಾಜ್‌ ಚಿತ್ರ ಡಿ.14ರಂದು ಪ್ರಪಂಚದ್ಯಾಂತ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡಗಡೆಯಾಗಲಿದೆ ಚಿತ್ರದ ನಾಯಕ ನಟ ವಿದ್ಯಾಭರಣ ಹೇಳಿದರು.
Vijaya Karnataka Web viraj movie released on 14th
ವಿರಾಜ್‌ ಚಲನಚಿತ್ರ 14ರಂದು ಬಿಡುಗಡೆ


ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾನವ ಸಂಬಂಧಗಳು ಮತ್ತು ಮಾನವೀಯ ಮೌಲ್ಯಗಳನ್ನು ಇಟ್ಟುಕೊಂಡು ನಿರ್ಮಿಸಿರುವ ಚಿತ್ರಕ್ಕೆ ನಾಗೇಶ ನಾರದಾಸಿ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಉದ್ಯಮಿ ಎಂ.ಮಂಜುನಾಥ ಸ್ವಾಮಿ ಹೇರಂಭಾ ಕಂಬೈನ್ಸ್‌ ಮೂಲಕ ಈ ಚಿತ್ರಕ್ಕೆ ಬಂಡವಾಳ ಹಾಕಿ ನಿರ್ಮಿಸಿದ್ದಾರೆ ಎಂದರು.

3.5ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಚಿತ್ರದಲ್ಲಿ 6 ಹಾಡುಗಳಿವೆ. ಮೈಸೂರು, ಹಾಸನ, ಬೆಂಗಳೂರು, ಸಕಲೇಶಪುರ ಸುತ್ತಮುತ್ತಲಿನ ಪ್ರದೇಶಗಳಲ್ಲಿ 54 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಚಿತ್ರ ಉತ್ತಮವಾಗಿ ಮೂಡಿಬಂದಿದೆ ಎಂದರು.

ಚಿತ್ರಕ್ಕೆ ಹಾಕಿರುವ ಬಂಡವಾಳಕ್ಕಿಂತ ಹೆಚ್ಚು ಹಣ ಗಳಿಕೆಯಾದರೆ ಅದರಲ್ಲಿ ರೈತರಿಗೆ ಖರ್ಚು ಮಾಡಲಾಗುವುದು. ಚಿತ್ರದಲ್ಲಿ ರೈತರಿಗೆ, ಕಾರ್ಮಿಕರಿಗೆ ಗೌರವ ನೀಡಬೇಕು ಎಂಬುವುದನ್ನು ತಿಳಿಸಲಾಗಿದೆ ಎಂದು ಹೇಳಿದರು.

ಎರಡು ಕುಟುಂಬಗಳ ನಡುವೆ ನಡೆಯುವ ಕಥಾಹಂದರ ಈ ಚಿತ್ರದಲ್ಲಿದೆ. ಒಂದು ಚಿಕ್ಕ ಕಾರಣದಿಂದ ಈ ಕುಟುಂಬಗಳ ನಡುವೆ ಮನಸ್ತಾಪ ಉಂಟಾಗಿ ನಂತರ ಹೇಗೆ ಒಂದಾದರು ಎನ್ನುವುದೇ ವಿರಾಜ್‌ ಚಿತ್ರದ ಕಥೆ. ಚಿತ್ರದ ಶೀರ್ಷಿಕೆಯಲ್ಲಿ ಡಾ.ರಾಜ್‌ಕುಮಾರ ಅವರ ಹೆಸರು ಬರಬೇಕೆಂದೇ ವಿರಾಜ್‌ ಎಂಬ ಶೀರ್ಷಿಕೆಯನ್ನು ಚಿತ್ರತಂಡ ಇಟ್ಟಿದೆ ಎಂದು ವಿವರಿಸಿದರು.

ಚಿತ್ರದಲ್ಲಿ ದೇವರಾಜ್‌, ವಿನಯ ಪ್ರಸಾದ್‌, ಜೈಜಗದೀಶ, ಸ್ವಾತಿ, ಸಿದ್ಲಿಂಗು ಶ್ರೀಧರ್‌, ಉಗ್ರಂಶರತ್‌, ಉಗ್ರಂಮಂಜು, ರಾಜ್‌ ದೀಪಕ್‌ಶೆಟ್ಟಿ, ಟೆನ್ನಿಸ್‌ ಕೃಷ್ಣ, ಕುರಿಸುನಿಲ್‌ ಸೇರಿದಂತೆ ಅನೇಕ ತಾರಾಬಳಗವನ್ನು ಒಳಗೊಂಡಿದೆ ಎಂದರು. ಜೀವನ್‌, ರವಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ