ಆ್ಯಪ್ನಗರ

ರೈತ ಸೇವಾ ಕೇಂದ್ರಕ್ಕೆ ಡಿಸಿ ಭೇಟಿ

ಧಾರವಾಡ : ಕೋವಿಡ್‌ ನಿಯಂತ್ರಣದ ಬಿಡುವಿಲ್ಲದ ಕಾರ್ಯದ ಮಧ್ಯೆಯೂ ಜಿಲ್ಲಾಧಿಕಾರಿ ದೀಪಾ ಚೋಳನ್‌ ಮಂಗಳವಾರ ಕೃಷಿ ವಿವಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ರೈತ ಸೇವಾಕೇಂದ್ರ ಹಾಗೂ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿ ಕೃಷಿಗೆ ಸಂಬಂಧಿಸಿದ ಮಾಹಿತಿ ಪಡೆದರು.

Vijaya Karnataka 7 May 2020, 5:00 am
ಧಾರವಾಡ : ಕೋವಿಡ್‌ ನಿಯಂತ್ರಣದ ಬಿಡುವಿಲ್ಲದ ಕಾರ್ಯದ ಮಧ್ಯೆಯೂ ಜಿಲ್ಲಾಧಿಕಾರಿ ದೀಪಾ ಚೋಳನ್‌ ಮಂಗಳವಾರ ಕೃಷಿ ವಿವಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ರೈತ ಸೇವಾಕೇಂದ್ರ ಹಾಗೂ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿ ಕೃಷಿಗೆ ಸಂಬಂಧಿಸಿದ ಮಾಹಿತಿ ಪಡೆದರು.
Vijaya Karnataka Web visit dc to farmer service center
ರೈತ ಸೇವಾ ಕೇಂದ್ರಕ್ಕೆ ಡಿಸಿ ಭೇಟಿ


ಕೃಷಿ ಹಾಗೂ ತೋಟಗಾರಿಕೆಗೆ ಸಂಬಂಧಿಸಿದ ವಿವಿಧ ಬೆಳೆ, ಸಂಗ್ರಹಿಸಿದ ಹೊಸ ಹೊಸ ತಳಿ, ಕೃಷಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿಬರುವಂತಹ ವಿವಿಧ ಕೀಟಗಳನ್ನು ಆಕರ್ಷಿಸಿ ಕೊಲ್ಲುವ ಬಲೆಗಳನ್ನು ವೀಕ್ಷಿಸಿದರು.

ನೇಗಿಲು, ಕುಂಟೆ, ಬದು ಸಾಧನೆ, ರೂಟರ್‌, ವಿವಿಧ ರೀತಿಯ ತೋಟಗಾರಿಕೆ, ಸಲಿಕೆ, ಗುದ್ದಲಿ, ನೀರಿನ ಬಾಣಿ, ಶೇಂಗಾ, ಸುರಳಿಪೂಚಿ ಕೀಟದ ಅಂಟು ಬಲೆ ಸೇರಿದಂತೆ ಕೃಷಿಗೆ ಸಂಬಂಧಿಸಿದ ಸಲಕರಣೆಗಳನ್ನು ವೀಕ್ಷಿಸಿದರು.

ವಿಶೇಷವಾಗಿ ಸಮುದಾಯದ ವಿಜ್ಞಾನ ಮಹಾವಿದ್ಯಾಲಯದ ವಿಜ್ಞಾನಿಗಳು ಆವಿಷ್ಕರಿಸಿದ ಕುಕ್ಕರ್‌ ಹಾಗೂ ಬಿಎಸ್‌ಸಿ ಕೃಷಿ ವಿದ್ಯಾರ್ಥಿಗಳು ತಮ್ಮ ಪ್ರಾಯೋಗಿಕ ಚಟುವಟಿಕೆಗೆ ಸಂಗ್ರಹಿಸಿದ ಚಿಟ್ಟೆ ಹಾಗೂ ವಿವಿಧ ಬಗೆಯ ಕೀಟಗಳ ಬಗ್ಗೆ ಕೃಷಿ ವಿಸ್ತರಣಾ ಮುಂದಾಳು ಗಣೇಶ ಟಿ. ಮಾಹಿತಿ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ