ಆ್ಯಪ್ನಗರ

ಅಕ್ಷಯ ಪಾತ್ರೆ ಸಂಸ್ಥೆಗೆ ಭೇಟಿ

ಹುಬ್ಬಳ್ಳಿ : ಹುಬ್ಬಳ್ಳಿ ಶಹರ ಮತ್ತು ಗ್ರಾಮೀಣ ಶೈಕ್ಷಣಿಕ ವಲಯದ ಸರಕಾರಿ, ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ವಿದ್ಯಾರ್ಥಿಗಳಿಗೆ ಅಕ್ಷರ ದಾಸೋಹ ಯೋಜನೆಯ ಬಿಸಿಯೂಟ ಮತ್ತು ಕ್ಷೀರಭಾಗ್ಯದ ಬಿಸಿಹಾಲು ಪೂರೈಸುವ ಅಕ್ಷಯ ಪಾತ್ರಾ ಫೌಂಡೇಶನ್‌ ಸಂಸ್ಥೆಗೆ ಹುಬ್ಬಳ್ಳಿ ತಾಲೂಕು ಪಂಚಾಯಿತಿ ತಂಡ ಭೇಟಿ ನೀಡಿತು.

Vijaya Karnataka 11 Nov 2019, 5:00 am
ಹುಬ್ಬಳ್ಳಿ : ಹುಬ್ಬಳ್ಳಿ ಶಹರ ಮತ್ತು ಗ್ರಾಮೀಣ ಶೈಕ್ಷಣಿಕ ವಲಯದ ಸರಕಾರಿ, ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ವಿದ್ಯಾರ್ಥಿಗಳಿಗೆ ಅಕ್ಷರ ದಾಸೋಹ ಯೋಜನೆಯ ಬಿಸಿಯೂಟ ಮತ್ತು ಕ್ಷೀರಭಾಗ್ಯದ ಬಿಸಿಹಾಲು ಪೂರೈಸುವ ಅಕ್ಷಯ ಪಾತ್ರಾ ಫೌಂಡೇಶನ್‌ ಸಂಸ್ಥೆಗೆ ಹುಬ್ಬಳ್ಳಿ ತಾಲೂಕು ಪಂಚಾಯಿತಿ ತಂಡ ಭೇಟಿ ನೀಡಿತು.
Vijaya Karnataka Web visit to akshaya warehouse organization
ಅಕ್ಷಯ ಪಾತ್ರೆ ಸಂಸ್ಥೆಗೆ ಭೇಟಿ


ಅಕ್ಷಯ ಪಾತ್ರಾ ಫೌಂಡೇಶನ್‌ ಸಂಸ್ಥೆಯು ಬಿಸಿಯೂಟ ಮತ್ತು ಕ್ಷೀರ ಭಾಗ್ಯ ತಯಾರಿಸುವಲ್ಲಿಅನುಸರಿಸುತ್ತಿರುವ ಕ್ರಮ, ಆಹಾರದ ಗುಣಮಟ್ಟ, ಬಳಕೆಯ ಪ್ರಮಾಣ, ಸರಬರಾಜು ವಿಧಾನ, ಸ್ವಚ್ಛತಾ ಕ್ರಮ, ಸುರಕ್ಷತಾ ಕ್ರಮ, ಮಿತತ್ವ ಅನುಸರಣೆ ಕುರಿತು ತಂಡದ ಸದಸ್ಯರು ಪರಿಶೀಲಿಸಿದರು.

ಈ ಸಂದರ್ಭದಲ್ಲಿಹುಬ್ಬಳ್ಳಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಚೆನ್ನಮ್ನ ಗೊರ್ಲ, ಉಪಾಧ್ಯಕ್ಷ ಗುರುಪಾದಪ್ಪ ಕಮಡೊಳ್ಳಿ, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಬಸಪ್ಪ ಬೀರನ್ನವರ, ಸದಸ್ಯರಾದ ಬಸವರಾಜ ಸಾಲಿ, ಸರೋಜಾ ಅಳಗವಾಡಿ, ಫರ್ವೇಜ್‌ ಬ್ಯಾಹಟ್ಟಿ, ಫಕೀರಮ್ಮಾ ಹುಲ್ಲುಂಬಿ, ದಾವಲಬಿ ಮಿರ್ಜಾನವರ, ಲಕ್ಷ್ಮೀ ಶಿವಳ್ಳಿ, ಜಿಲ್ಲಾಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಬಿ.ಎಸ್‌.ಮಾಯಾಚಾರ್‌, ಕಾರ್ಯನಿರ್ವಾಹಕ ಅಧಿಕಾರಿ ಎಮ್‌.ಎಮ್‌. ಸವದತ್ತಿ, ತಾಲೂಕು ಅಕ್ಷರದಾಸೋಹ ಸಹಾಯಕ ನಿರ್ದೇಶಕ ಶ್ರೀಧರ ಪತ್ತಾರ, ತಾಲೂಕು ವಿಶೇಷಚೇತನರ ಕಲ್ಯಾಣ ಸಮನ್ವಯಾಧಿಕಾರಿ ಮಹಾಂತೇಶ ಕುರ್ತಕೋಟಿ, ಮೌನೇಶ ಬಡಿಗೇರ, ದೀಪಕ್‌ ಮಾಡಗೋಳಕರ್‌ ಮತ್ತು ಅಕ್ಷಯ ಪಾತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ