ಆ್ಯಪ್ನಗರ

ಮತಯಂತ್ರ ಬಳಕೆ ಕಾರ‍್ಯಕ್ರಮ

ಅಳ್ನಾವರ : ಬರುವ ಲೋಕಸಭಾ ಚುನಾವಣೆ ಪ್ರಯುಕ್ತ ಮತಯಂತ್ರದ ಮೂಲಕ ಮತ ಚಲಾವಣೆ ಹೇಗೆ ಮಾಡಬೇಕು ಎಂದು ಇಲ್ಲಿನ ಬಸ್‌ ನಿಲ್ದಾಣದಲ್ಲಿ ಶನಿವಾರ ಸಾರ್ವಜನಿಕರಿಗೆ ತಿಳಿವಳಿಕೆ ನೀಡುವ ಕಾರ್ಯಕ್ರಮ ನಡೆಯಿತು.

Vijaya Karnataka 24 Feb 2019, 5:00 am
ಅಳ್ನಾವರ : ಬರುವ ಲೋಕಸಭಾ ಚುನಾವಣೆ ಪ್ರಯುಕ್ತ ಮತಯಂತ್ರದ ಮೂಲಕ ಮತ ಚಲಾವಣೆ ಹೇಗೆ ಮಾಡಬೇಕು ಎಂದು ಇಲ್ಲಿನ ಬಸ್‌ ನಿಲ್ದಾಣದಲ್ಲಿ ಶನಿವಾರ ಸಾರ್ವಜನಿಕರಿಗೆ ತಿಳಿವಳಿಕೆ ನೀಡುವ ಕಾರ್ಯಕ್ರಮ ನಡೆಯಿತು.
Vijaya Karnataka Web DRW-23 ALN PHOTO 4
ಅಳ್ನಾವರದ ಬಸ್‌ ನಿಲ್ದಾಣದಲ್ಲಿ ಶನಿವಾರ ಮತಯಂತ್ರ ಬಳಕೆ ಬಗ್ಗೆ ಸಾರ್ವಜನಿಕರಿಗೆ ಪಪಂ ಮುಖ್ಯಾಧಿಕಾರಿ ವೈ.ಜಿ.ಗದ್ದಿಗೌಡರ ಮಾಹಿತಿ ನೀಡಿದರು. ಎನ್‌.ಬಿ.ನಿಡುವಣಿ, ನಾಗರಾಜ ಗುರ್ಲಹುಸೂರ ಇದ್ದರು.


ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವೈ.ಜಿ.ಗದ್ದಿಗೌಡರ ಮಾತನಾಡಿ, ಪ್ರತಿಯೊಬ್ಬರು ತಪ್ಪದೆ ಮತ ಹಾಕಬೇಕು. ಮತದಾನ ಪವಿತ್ರವಾದದ್ದು. ಮತ ಯಂತ್ರದಲ್ಲಿ ಮತವನ್ನು ಹೇಗೆ ಚಲಾವಣೆ ಮಾಡಬೇಕು ಎಂದು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.

ಅಳ್ನಾವರದ ರೈಲು ನಿಲ್ದಾಣ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜ್‌ ಮತ್ತು ಅಕ್ಕ ಪಕ್ಕದ ಗ್ರಾಮಗಳಲ್ಲಿ ಮಾಹಿತಿ ನೀಡಲಾಗಿದೆ ಎಂದು ಗದ್ದಿಗೌಡರ ತಿಳಿಸಿದರು. ನಾಗರಾಜ ಗುರ್ಲಹುಸೂರ, ಎನ್‌.ಬಿ.ನಿಡುವಣಿ, ಮಂಜು ಹಕ್ಕಿ, ಮಾರುತಿ, ಎಸ್‌.ಆರ್‌.ಹಿರೇಹಾಳ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ