ಆ್ಯಪ್ನಗರ

ದೇಶಕ್ಕೆ ಮೋದಿ ಮತ್ತು ಅಮಿತ್‌ ಶಾ ರಾಹು ಕೇತು ಇದ್ದಂತೆ: ವಿಎಸ್ ಉಗ್ರಪ್ಪ

“ಪಂಕ್ಚರ್‌ ಹಾಕೋದು ಕೂಡ ಒಂದು ಕರ್ತವ್ಯ. ಚಹಾವಾಲಾ ಪ್ರಧಾನಿ ಆಗ್ತಾನೆ ಅಂತೀರಿ. ಆದರೆ ಪಂಕ್ಚರ್ ಹಾಕೋರ ಬಗ್ಗೆ ಮಾತನಾಡುತ್ತೀರಿ? ನಿಮಗೆ ಮನುಷ್ಯತ್ವ ಇದೆಯಾ?” ಎಂದು ಬಿಜೆಪಿಯವರ ವಿರುದ್ಧ ಉಗ್ರಪ್ಪ ಹರಿಹಾಯ್ದಿದ್ದಾರೆ.

Vijaya Karnataka 26 Dec 2019, 6:14 pm

ಧಾರವಾಡ: ಪೌರತ್ವ ತಿದ್ದುಪಡಿ ಕಾಯಿದೆ ವಿರೋಧದ ಪ್ರತಿಭಟನೆ ಎರಡನೇ ಸ್ವಾತಂತ್ರ್ಯ ಸಂಗ್ರಾಮವಾಗಿದೆ. ದೇಶಕ್ಕೆ ಮೋದಿ ಮತ್ತು ಅಮಿತ್‌ ಶಾ ರಾಹು ಕೇತು ಇದ್ದಂತೆ ಎಂದು ಕಾಂಗ್ರೆಸ್ ಮುಖಂಡ ವಿಎಸ್ ಉಗ್ರಪ್ಪ ಹೇಳಿದರು.
Vijaya Karnataka Web VS Ugrappa


ನಗರದಲ್ಲಿ ‘ಸಂವಿಧಾನ ಬಚಾವೋ, ದೇಶ ಬಚಾವೋ’ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ಮೊದಲ ಸ್ವಾತಂತ್ರ್ಯ ಸಂಗ್ರಾಮ ವಿದೇಶಿಗರ ವಿರುದ್ಧ ನಡಿದಿತ್ತು. ಇವತ್ತು ಮತಿಯವಾದಿಗಳ ವಿರುದ್ಧ ನಡೀತಾ ಇರೋದು ಎರಡನೆಯ ಸ್ವಾತಂತ್ರ್ಯ ಸಂಗ್ರಾಮವಾಗಿದೆ ಎಂದು ಉಗ್ರಪ್ಪ ಬಣ್ಣಿಸಿದರು.

ಈಗ ಸೂರ್ಯಗ್ರಹಣ ಬಿಟ್ಟಿದೆ. ಮೋದಿ ಮತ್ತು ಅಮಿತ್‌ ಶಾ ರಾಹು ಕೇತು ಇದ್ದಂತೆ. ಅವರಿಬ್ಬರಿಂದ ದೇಶಕ್ಕೆ ಗ್ರಹಣ ಹಿಡಿದಿದೆ. ಪ್ರಧಾನಿ ಎಚ್ಚರಗೊಳ್ಳದಿದ್ದರೆ ಬಿಜೆಪಿಗೆ ಹಾನಿಯಾಗುತ್ತೆ ಅಂತ ಸುಬ್ರಹ್ಮಣ್ಯಸ್ವಾಮಿಯೇ ಹೇಳಿದ್ದಾರೆ ಎಂದರು.

ಮೋದಿ, ಅಮಿತ್ ಶಾ ಸರ್ವಾಧಿಕಾರ ನಡೆಸಲು ಹೊರಟಿದ್ದಾರೆ: ರಮೇಶ್‌ ಕುಮಾರ್‌ ವಾಗ್ದಾಳಿ

ದೇಶದ ರಕ್ಷಣೆ ಮಾಡುವ ಸೈನಿಕರಿಗೆ ಕೊಡುವ ಅನುದಾನದಲ್ಲಿ 1 ಲಕ್ಷ ಕೋಟಿ ರೂಪಾಯಿ ಕಡಿಮೆ ಮಾಡಿದ್ದಾರೆ ಎಂದು ಹೇಳಿದ ಅವರು, “ಪಂಕ್ಚರ್‌ ಹಾಕೋದು ಕೂಡ ಒಂದು ಕರ್ತವ್ಯ. ಚಹಾವಾಲಾ ಪ್ರಧಾನಿ ಆಗ್ತಾನೆ ಅಂತೀರಿ. ಆದರೆ ಪಂಕ್ಚರ್ ಹಾಕೋರ ಬಗ್ಗೆ ಮಾತನಾಡುತ್ತೀರಿ? ನಿಮಗೆ ಮನುಷ್ಯತ್ವ ಇದೆಯಾ?” ಎಂದು ಉಗ್ರಪ್ಪ ಕಿಡಿಕಾರಿದರು.

“ಮನುಷ್ಯನನ್ನು ಮನುಷ್ಯನಾಗಿ ನೋಡುವ ದೃಷ್ಟಿ ಇಲ್ಲ. ಸಂವಿಧಾನವನ್ನು ಕಿತ್ತು ಒಗೆಯುವ ವ್ಯವಸ್ಥಿತ ಸಂಚು ನಡೆಯುತ್ತಿದೆ. ಅಮಿತಾ ಶಾ, ಮೋದಿ ಏನಾದ್ರೂ ಸಂವಿಧಾನ ಓದಿದ್ದಾರಾ?” ಎಂದು ಪ್ರಶ್ನಿಸಿದರು.

“ಮೋದಿ ಮತ್ತು ಅಮಿತಾ ಶಾ ದೇಶದ ಏಕತೆ, ಆರ್ಥಿಕತೆ ಕಾಪಾಡುವಲ್ಲಿ ವಿಫಲವಾಗಿದ್ದಾರೆ. ದೇಶದ ರಕ್ಷಣೆ ಮಾಡುವ ಬದ್ಧತೆ ಇವರಿಗಿಲ್ಲ,” ಎಂದು ಹರಿಹಾಯ್ದ ಅವರು, “ಸ್ವಾತಂತ್ರ್ಯ ಹೋರಾಟದಲ್ಲಿ ಸಂಘ ಪರಿವಾರದವರು ಬ್ರಿಟಿಷರ ಜೊತೆ ಇದ್ದರು,” ಎಂದು ಆರೋಪಿಸಿದರು.

ಮೋದಿಗೆ ಹೇಳಿ ತುರ್ತು ಪರಿಸ್ಥಿತಿ ಹೇರಿ, ನಮ್ಮನ್ನೆಲ್ಲ ಜೈಲಿಗೆ ಹಾಕಿ: ಸಿದ್ದರಾಮಯ್ಯ ವ್ಯಂಗ್ಯ

ದೇಶದಲ್ಲಿ ಮಾತು ಎತ್ತಿದರೆ ಸಾಕು ಮೋದಿ ಅಂತಾರೆ. ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇನೆ ಅಂತ ಹೇಳಿದ್ದರು. ಆದರೆ ದೇಶದ ಯುವಕರು ಮೋದಿ ಮತ್ತು ಅಮಿತ್ ಶಾ ರಾಷ್ಟ್ರ ಮಾಡಲು ಹೊರಟಿದ್ದಾರೆ. ವಿವಿಧತೆಯಲ್ಲಿ ಏಕತೆ ಕಾಣುವಂತಹ ಸಂವಿಧಾನವನ್ನು ಅಂಬೇಡ್ಕರ್ ಕೊಟ್ಟಿದ್ದಾರೆ. ಆದರೆ ಇವರು ಮನು ಧರ್ಮ ಶಾಸ್ತ್ರ ಜಾರಿಗೆ ತರಲು ಹೊರಟಿದ್ದಾರೆ ಎಂದು ಟೀಕಿಸಿದರು.

ಒಂದೊಮ್ಮೆ ಮೋದಿ, ಅಮಿತ ಶಾಗೆ ಬದ್ಧತೆ ಇದ್ದಲ್ಲಿ ಎನ್‌ಆರ್‌ಸಿ, ಸಿಎಎನಂಥಹ ಕಾನೂನು ತರುವ ಕಾರ್ಯ ಮಾಡಿದ್ದಕ್ಕೆ ದೇಶದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ ಅವರು, “ಕೇಂದ್ರ ಸರ್ಕಾರ ಈ ಕಾನೂನು ವಾಪಸ್ ಪಡೆಯಬೇಕು. ಈ ಹೋರಾಟಗಳು ಅಂತ್ಯವಲ್ಲ ಇದು ಆರಂಭ,” ಎಂದು ಎಚ್ಚರಿಕೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ