ಆ್ಯಪ್ನಗರ

ದತ್ತ ಜಯಂತಿ ಅಂಗವಾಗಿ ಬುತ್ತಿ ಪೂಜೆ

ಹುಬ್ಬಳ್ಳಿ : ಹೊಸ ಹುಬ್ಬಳ್ಳಿಯ ಕಿಲ್ಲೆಯಲ್ಲಿರುವ ಪುರಾತನವಾದ ದತ್ತಾತ್ರೇಯ ದೇವಸ್ಥಾನದಲ್ಲಿಶ್ರೀದತ್ತ ಜಯಂತಿ ಉತ್ಸವದ ಅಂಗವಾಗಿ ಶುಕ್ರವಾರ ಬುತ್ತಿ ಪೂಜೆ ಮಾಡಲಾಯಿತು.

Vijaya Karnataka 15 Dec 2019, 5:00 am
ಹುಬ್ಬಳ್ಳಿ : ಹೊಸ ಹುಬ್ಬಳ್ಳಿಯ ಕಿಲ್ಲೆಯಲ್ಲಿರುವ ಪುರಾತನವಾದ ದತ್ತಾತ್ರೇಯ ದೇವಸ್ಥಾನದಲ್ಲಿಶ್ರೀದತ್ತ ಜಯಂತಿ ಉತ್ಸವದ ಅಂಗವಾಗಿ ಶುಕ್ರವಾರ ಬುತ್ತಿ ಪೂಜೆ ಮಾಡಲಾಯಿತು.
Vijaya Karnataka Web SHREEDATTA-HBL 13061024
ಹೊಸ ಕಿಲ್ಲೆಯಲ್ಲಿರುವ ದತ್ತಾತ್ರೇಯ ದೇವಸ್ಥಾನದಲ್ಲಿಜಯಂತಿ ಅಂಗವಾಗಿ ಭಜನಾ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.


ಸುತ್ತಲಿನ ನಾಗರಿಕರು 50 ವರ್ಷಗಳಿಂದ ಈ ಉತ್ಸವವನ್ನು ಆಚರಣೆ ಮುಂದುವರಿಸಿಕೊಂಡು ಬಂದಿದ್ದಾರೆ. ಬುತ್ತಿ ಪೂಜೆಯ ಮಹಾಪ್ರಸಾದ ದಲ್ಲಿಜೋಳದ ರೊಟ್ಟಿ ಮತ್ತು ತೊಗರಿಬೇಳೆ ಬಾಜಿ ಮಾಡುವುದು ವಿಶೇಷ.

ಸಾವಿರಾರು ಭಕ್ತರು ಗುರುದತ್ತ ಮಹಾರಾಜರ ದರ್ಶನ ಪಡೆದು ಪುನೀತರಾದರು. ಸಂಜೆ ಭಕ್ತರಿಂದ ಭಜನಾ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು.

ದೇವಸ್ಥಾನದ ಪೂಜಾರಿಗಳಾದ ವಿಠಲ ಪಾತಕ , ದತ್ತ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ರಾಜು ದಿಕ್ಷಿತ್‌, ಮಾಜಿ ಮೇಯರ್‌ ಸುಧೀರ ಸರಾಫ , ಹಿರಿಯರಾದ ಸುಧೀಂದ್ರ ಕೊರವಾರ, ಸತೀಶ್‌ ಬಂಧಿಷ್ಠಿ , ರೋಹಿತ್‌ ಹುದ್ದಾರ, ರಾಜು ಹುದ್ದಾರ, ಸತೀಶ್‌ ದಿಕ್ಷಿತ್‌, ಶಾರದಾ ಬಂಧಿಷ್ಠಿ, ಶಕುಂತಲಾ ಪಾಠಕ, ರಮಾಬಾಯಿ ಕರಿ, ಭಾಸ್ಕರ ಬಂಧಿಷ್ಠಿ, ಶರದ್‌ ಕರಿ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ