ಆ್ಯಪ್ನಗರ

ಜನಮನ ಸೆಳೆದ ಜಾನಪದ ಸಂಜೆ

ಶಿರಹಟ್ಟಿ: ತಾಲೂಕಿನ ಹಡಗಲಿ ಗಾಮದಲ್ಲಿಇತ್ತೀಚಿಗೆ ಜರುಗಿದ ಜಾನಪದ ಸಂಜೆ ಕಾರ್ಯಕ್ರಮ ಜನಮನ ಸೆಳೆಯಿತು.

Vijaya Karnataka 17 Sep 2019, 5:00 am
ಶಿರಹಟ್ಟಿ: ತಾಲೂಕಿನ ಹಡಗಲಿ ಗಾಮದಲ್ಲಿಇತ್ತೀಚಿಗೆ ಜರುಗಿದ ಜಾನಪದ ಸಂಜೆ ಕಾರ್ಯಕ್ರಮ ಜನಮನ ಸೆಳೆಯಿತು.
Vijaya Karnataka Web
ಜನಮನ ಸೆಳೆದ ಜಾನಪದ ಸಂಜೆ


ವೀರಭದ್ರೇಶ್ವರ ಜಾತ್ರಾ ಮಹೋತ್ಸವದಂಗವಾಗಿ ಜಿಪಂ ಗದಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿಜಾನಪದ ಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಲಕ್ಕುಂಡಿಯ ಜಾನಪದ ಶ್ರೀ ಪ್ರಶಸ್ತಿ ಪುರಸಕೃತ ಬಸವರಾಜ ಹಡಗಲಿ ನೇತೃತ್ವದ ಗುರು ಶಿಷ್ಯೆ ಪರಂಪರೆಯ ಜಾನಪದ ಕಲಾ ತಂಡ ಹಾಗೂ ಕೊತಬಾಳದ ಶಂಕ್ರಪ್ಪ ಸಂಕಣ್ಣವರ ನೇತೃತ್ವದ ಅರಣೋದಯ ಕಲಾ ತಂಡದ ಕಲಾವಿದರು ಭಾಗವಹಿಸಿದ್ದರು. ಬಸವರಾಜ ಹಡಗಲಿ ಹಾಗೂ ಹುಲಿಗೆವ್ವ ಹೊಸಳ್ಳಿ ಅವರ ಗೀಗೀ ಪದಗಳ ಜುಗಲಬಂದಿ ಮನಸೆಳೆಯಿತು. ಜಾನಪದ ನೃತ್ಯ, ಸುಗ್ಗಿ ಹಾಡು, ಲಾವಣಿ ಪದಗಳ ಕಾರ್ಯಕ್ರಮ ನಡೆಯಿತು. ಬನ್ನಿಕೊಪ್ಪ ಬ್ರಹ್ಮನಮಠದ ಸುಜ್ಞಾನದೇವ ಶಿವಾಚಾರ್ಯ ಮಹಾಸ್ವಾಮಿಗಳು ಇತರರು ಪಾಲ್ಗೊಂಡಿದ್ದರು.

ಇದಕ್ಕೂ ಪೂರ್ವ ವೀರಭದ್ರೇಶ್ವರ ರಥೋತ್ಸವ, ಪಲ್ಲಕ್ಕಿ ಉತ್ಸವ, ಅಗ್ನಿ ಪ್ರವೇಶ, ಧರ್ಮಸಭೆ ಹಾಗೂ ಕಡುಬಿನ ಕಾಳಗ ಕಾರ್ಯಕ್ರಮಗಳು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರುಗಿದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ