Please enable javascript.ವಿಶ್ವಕರ್ಮಜರು ಸಂಘಟಿತರಾಗಲು ಕೆ.ಪಿ.ನಂಜುಂಡಿ ಕರೆ - ವಿಶ್ವಕರ್ಮಜರು ಸಂಘಟಿತರಾಗಲು ಕೆ.ಪಿ.ನಂಜುಂಡಿ ಕರೆ - Vijay Karnataka

ವಿಶ್ವಕರ್ಮಜರು ಸಂಘಟಿತರಾಗಲು ಕೆ.ಪಿ.ನಂಜುಂಡಿ ಕರೆ

ವಿಕ ಸುದ್ದಿಲೋಕ 8 Sep 2013, 5:00 am
Subscribe

ಶಿರಹಟ್ಟಿ :ವಿಶ್ವಕರ್ಮ ಸಮಾಜ ಉಳಿಯಬೇಕು ಅಂತಾ ದೊಡ್ಡ ದೊಡ್ಡ ವೇದಿಕೆಯಲ್ಲಿ ಎಲ್ಲ ಜನಪ್ರತಿನಿಧಿಗಳು ಹೇಳುತ್ತಾರೆ ಆದರೆ ಉಳಿಸುವವರಾರು ? 800 ವರ್ಷಗಳ ಹಿಂದೆ

ವಿಶ್ವಕರ್ಮಜರು ಸಂಘಟಿತರಾಗಲು ಕೆ.ಪಿ.ನಂಜುಂಡಿ ಕರೆ
ಶಿರಹಟ್ಟಿ :ವಿಶ್ವಕರ್ಮ ಸಮಾಜ ಉಳಿಯಬೇಕು ಅಂತಾ ದೊಡ್ಡ ದೊಡ್ಡ ವೇದಿಕೆಯಲ್ಲಿ ಎಲ್ಲ ಜನಪ್ರತಿನಿಧಿಗಳು ಹೇಳುತ್ತಾರೆ ಆದರೆ ಉಳಿಸುವವರಾರು ? 800 ವರ್ಷಗಳ ಹಿಂದೆ ಬೇಲೂರು-ಹಳೇಬೀಡುಗಳಲ್ಲಿ ಚನ್ನಕೇಶವನಂತಹ ಹಲವಾರು ದೇವಸ್ಥಾನಗಳನ್ನು ಕಲ್ಲಿನಲ್ಲಿ ಕೆತ್ತಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟ ಜಕಣಾಚಾರಿ ಹೆಸರನ್ನು ಎಲ್ಲಿಯಾದರೂ ಬರೆದಿದ್ದಾರಾ ? ವಿಶ್ವಕರ್ಮ ಸಮಾಜದವರು ಬೆವರನ್ನು ಸುರಿಸುತ್ತಾರೆ, ರಕ್ತವನ್ನು ಸುರಿಸುತ್ತಾರೆ ನಾವೇ ದೇವಸ್ಥಾನಗಳನ್ನು ಕಟ್ಟದೇ ಇದ್ದರೇ ನೀವೆಲ್ಲಾ ಯಾರನ್ನ ಪೂಜೆ ಮಾಡುತ್ತೀರಿ ? ವಿಶ್ವಕರ್ಮದಲ್ಲಿ 67ಜನ ಪೀಠಾಧಿಪತಿಗಳಿದ್ದಾರೆ ಅದರಲ್ಲಿ ಒಬ್ಬರನ್ನಾದರೂ ಯಾವ ವೇದಿಕೆಯಲ್ಲಿ ಕರೆದು ಗೌರವಿಸಿದ್ದೀರಾ ? 5 ಕಸಬುಗಳಲ್ಲಿ ಒಂದನ್ನು ವಿಶ್ವಕರ್ಮದವರು ನಿಲ್ಲಿಸಿದರೇ ಏನ ಮಾಡ್ತೀರಿ ? ಎಂದು ಮಾರ್ಮಿಕವಾಗಿ ನೆರೆದ ಸಹಸ್ರಾರು ವಿಶ್ವಕರ್ಮ ಸಮಾಜದವರಿಗೆ ಸಂಘಟಿತರಾಗದೇ ಇದ್ದಲ್ಲಿ ಅಭಿವದ್ಧಿ ಹೊಂದುವುದು ಅಸಾಧ್ಯ ಎಂದು ರಾಜ್ಯ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ಕೆ.ಪಿ.ನಂಜುಂಡಿ ಹೇಳಿದರು. ಅವರು ಶುಕ್ರವಾರ ತಾಲೂಕಿನ ಸುಕ್ಷೇತ್ರ ವರವಿಯ ವೌನೇಶ್ವರ ಜಾತ್ರಾ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಯಾವುದಾದರೂ ಸಭೆಯಲ್ಲಾಗಲಿ, ವೇದಿಕೆಯಲ್ಲಾಗಲೀ, ವಿಧಾನಸೌಧದಲ್ಲಾಗಲೀ, ವಿಧಾನ ಪರಿಷತ್‌ನಲ್ಲಾಗಲೀ, ಲೋಕಸಭೆಯಲ್ಲಾಗಲೀ ನಮ್ಮ ಸಮಾಜದ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ ಹಂಪೆ ಉತ್ಸವದಲ್ಲಿ ಕನಿಷ್ಠ ಸಮಾಜದ ಒಬ್ಬ ವ್ಯಕ್ತಿಯನ್ನಾದರೂ ಗೌರವಿಸಿದ್ದೀರಾ, ಇದು ನ್ಯಾಯಾನಾ ? ನಮ್ಮ ಸಮುದಾಯವು ಇನ್ನು ಎಷ್ಟು ದಿವಸ ನಿಮ್ಮ ದೌರ್ಜನ್ಯವನ್ನು ತಡೆಯಬೇಕು. ಏನೂ ಪಾಪ ಮಾಡಿದ್ದೇವೆ. ಗ್ರಾಮೀಣ ಪ್ರದೇಶದಲ್ಲಿ ಕಬ್ಬಿಣ ಚುಚ್ಚಿಕೊಂಡೇ ಸಾಯಬೇಕಾ, ದೇವರನ್ನು ಮಾಡಿಕೊಡುವ ಸಮಾಜ ನಮ್ಮದು, ಜಾತ್ಯತೀತವಾಗಿ ಹಿಂದೂ-ಮುಸ್ಲಿಂ-ಕ್ರೆಸ್ತ ಎಲ್ಲ ಸಮಾಜಗಳಲ್ಲೂ ವಿಶ್ವಕರ್ಮರು ಇದ್ದಾರೆ. ದುರದಷ್ಟಕರವೆಂದರೆ ನಮ್ಮ ಸಮಾಜದ ವತಿಯಿಂದ ಜಿಲ್ಲಾ ಪಂಚಾಯತಿ ಸದಸ್ಯರೂ ಕೂಡ ಇಲ್ಲಾ, ಇದಕ್ಕೆಲ್ಲಾ ಬಲಿಷ್ಠ ಸಮಾಜದವರು ನಮ್ಮನ್ನು ಶೋಷಣೆಗೆ ಒಳಪಡಿಸುತ್ತಿದ್ದಾರೆ. ಬ್ರಹ್ಮಾಂಡದ ಸಷ್ಟಿಕರ್ತ ವಿಶ್ವಕರ್ಮನ ಜಯಂತಿಗೆ ಸರ್ಕಾರಿ ರಜೆ ಘೋಷಣೆಗೆ 13 ವರ್ಷಗಳ ಹೋರಾಟ ಮಾಡಿದರೂ ಇಲ್ಲಿಯವರೆಗೂ ಸಾಧ್ಯವಾಗುತ್ತಿಲ್ಲಾ, ಬಸವಜಯಂತಿಗೆ, ಕನಕಜಯಂತಿಗೆ, ಮಹಾವೀರ ಜಯಂತಿಗೆ, ವಾಲ್ಮೀಕಿ ಜಯಂತಿಗೆ ಬಂದಂತಹ ಎಲ್ಲಾ ಸರ್ಕಾರಗಳು ರಜಾ ಘೋಷಿಸಿವೆ ಆದರೆ ನಮ್ಮ ಸಮಾಜಕ್ಕೆ ಇಲ್ಲಿಯವರೆಗೂ ಯಾಕೆ ನೀಡಿಲ್ಲಾ ಎಂದು ತಮ್ಮ ಅಂತರಾಳದ ಮಾತನ್ನು ಹೊರ ಹಾಕಿದರು. ಶಾಸಕ ರಾಮಕಷ್ಣ ದೊಡ್ಡಮನಿ ಮಾತನಾಡಿ, ರೆತರ ಕೆ ಬಲಪಡಿಸುವ ಗ್ರಾಮೀಣ ಪ್ರದೇಶದ ಜನತೆಗೆ ಕಮ್ಮಾರಿಕೆ, ಬಡಿಗತನ ಉದ್ಯೋಗ ಮಾಡಿ ಅವರಿಗೆ ನಿತ್ಯವೂ ಪರಿಕರಗಳನ್ನು ಸಿದ್ಧಮಾಡಿಕೊಡುವ ಸಮಾಜ ಇದಾಗಿದ್ದು, ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಸಂಘಟನೆಯ ಮುಖಾಂತರ ರಾಜಕೀಯ ಚುಕ್ಕಾಣಿ ಹಿಡಿಯಬೇಕೆಂದರು. ರಾಜ್ಯ ಕೆಪಿಸಿಸಿಯ ಎಸ್‌ಸಿ/ಎಸ್‌ಟಿ ಘಟಕದ ಅಧ್ಯಕ್ಷ ಟಿ.ಈಶ್ವರ ಮಾತನಾಡಿ, ಕಲ್ಲಿಗೆ ರೂಪ ಕೊಡುವ ಸಮಾಜ ಇದಾಗಿದ್ದು, ರಾಜಕೀಯವಾಗಿ ಅವನತಿಯಲ್ಲಿದ್ದು, ಸಮಾಜದ ಮುಖ್ಯವಾಹಿನಿಗೆ ಬರುವುದು ಅವಶ್ಯವಿದೆ, ಇದಕ್ಕೆ ಶೆಕ್ಷಣಿಕ ಕ್ರಾಂತಿ ಆಗಬೇಕು ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಮಠದ ವಿಕಾಸ ಕಮೀಟಿ ಟ್ರಸ್ಟ ಅಧ್ಯಕ್ಷ ಚಂದ್ರಕಾಂತ ಸೋನಾರ, 1970ರಿಂದ ಟ್ರಸ್ಟ ನಿತ್ಯವೂ ಅನ್ನಸಂತರ್ಪಣೆ, ಉಚಿತ ಉಪನಯನ, ವಿದ್ಯಾರ್ಥಿಗಳಿಗೆ ಶಿಬಿರ ಏರ್ಪಡಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ, ಈ ಬಾರಿ ಬೆಳ್ಳಿ ಪಲ್ಲಕ್ಕಿ, ಗರ್ಭಗುಡಿಯ ದ್ವಾರಕ್ಕೆ ಬಂಗಾರದ ಕವಚ ಸಮರ್ಪಣೆ ಮಾಡಲಾಗಿದೆ, ಲೋಕಕಲ್ಯಾಣಕ್ಕಾಗಿ ಅತಿರುದ್ರ ಯಾಗವನ್ನು 11ಜನ ಅರ್ಚಕರಿಂದ ವಿಶೇಷ ಪೂಜೆ ಸಧ್ಯದಲ್ಲಿಯೇ ನಡೆಯಲಿದೆ ಎಂದರು. ಕಾರ್ಯಕ್ರಮದಲ್ಲಿ ವರವಿಯ ವಿರುಪಾಕ್ಷ ಸ್ವಾಮೀಜಿ, ಯಾದಗಿರಿಯ ಗುರುನಾಥೇಂದ್ರ ಸ್ವಾಮೀಜಿ, ಅರೆಮಾದನಹಳ್ಳಿಯ ಗುರುಶಿವಸುಜ್ಞಾನ ತೀರ್ಥ ಸ್ವಾಮೀಜಿ, ಶಹಾಪೂರದ ಕಾಳಹಸ್ತೇಂದ್ರ ಸ್ವಾಮೀಜಿ, ಜಾತ್ರಾ ಮಹೋತ್ಸವದ ಅಧ್ಯಕ್ಷ ಶಂಕರ ಕಡ್ಲಿಕೊಪ್ಪ, ಶಿರಸಂಗಿಯ ಪ್ರೋ ಪಿ.ಬಿ.ಬಡಿಗೇರ, ವೌನೇಶ ಸುಳ್ಳದ, ಬಸವರಾಜ ಪಂಚಾಳ, ನರಸಿಂಗರಾವ ಹೇಮನೂರ, ಮಹೇಶ ಹುಲಬಜಾರ, ಬನ್ನಪ್ಪ ವಿಶ್ವಕರ್ಮ, ಮನೋಹರ ಕಡ್ಲಿಕೊಪ್ಪ, ಜಿಪಂ ಸದಸ್ಯೆ ಕಮಲಮ್ಮ ಸಜ್ಜನರ, ಮಾಜಿ ಶಾಸಕ ರಾಮಣ್ಣ ಲಮಾಣಿ,ದೇವಪ್ಪ ಲಮಾಣಿ, ಮೋಹನ ನರಗುಂದ, ಗಂಗಪ್ಪ ಬಡಿಗೇರ, ಎಂ.ಜಿ.ಗೌಡ ಮುಂತಾದವರು ಉಪಸ್ಥಿತರಿದ್ದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ