Please enable javascript.ಲಕ್ಕುಂಡಿಯಲ್ಲಿ ಅಂತರ್ಜಲ ಕುಸಿತ - ಗದಗ, ಲಕ್ಕುಂಡಿ, ಮಳೆ, ಕೊರತೆ, ಅಂತರ್ಜಲ, ಕುಸಿತ, Gadag, Lakkundi, rain, a lack of groundwater, crash - Vijay Karnataka

ಲಕ್ಕುಂಡಿಯಲ್ಲಿ ಅಂತರ್ಜಲ ಕುಸಿತ

ವಿಕ ಸುದ್ದಿಲೋಕ 2 Nov 2013, 4:15 am
Subscribe

ಸತತ ಮೂರು ವರ್ಷಗಳಿಂದ ಐತಿಹಾಸಿಕ ಲಕ್ಕುಂಡಿ ಗ್ರಾಮಕ್ಕೆ ಆಶ್ಚರ್ಯವೆಂಬಂತೆ ವರುಣನ ಅವಕಪೆಯಿಂದ ಅಂತರ್ಜಲ ಸಂಪೂರ್ಣ ಕಡಿಮೆಯಾಗಿ ಕೆರೆ ಭಾವಿಗಳು ಭತ್ತಿದ್ದು ರೈತ ಸಮೂಹ ಕಂಗಾಲಾಗಿದ್ದಾರೆ.

 gadag lakkundi rain a lack of groundwater crash
ಲಕ್ಕುಂಡಿಯಲ್ಲಿ ಅಂತರ್ಜಲ ಕುಸಿತ
ವೀರಣ್ಣ ಕುಂಬಾರ ಲಕ್ಕುಂಡಿ

ಸತತ ಮೂರು ವರ್ಷಗಳಿಂದ ಐತಿಹಾಸಿಕ ಲಕ್ಕುಂಡಿ ಗ್ರಾಮಕ್ಕೆ ಆಶ್ಚರ್ಯವೆಂಬಂತೆ ವರುಣನ ಅವಕಪೆಯಿಂದ ಅಂತರ್ಜಲ ಸಂಪೂರ್ಣ ಕಡಿಮೆಯಾಗಿ ಕೆರೆ ಭಾವಿಗಳು ಭತ್ತಿದ್ದು ರೈತ ಸಮೂಹ ಕಂಗಾಲಾಗಿದ್ದಾರೆ.

ದೇಶಾದ್ಯಂತ ಎಲ್ಲಿ ನೋಡಿದರಲ್ಲಿ ಮಳೆಯ ಅರ್ಭಟದಿಂದ ಅತಿವಷ್ಟಿ ಸಷ್ಟಿಯಾಗಿದ್ದು, ದೂರದ ಮಾತಾಗಿದ್ದರೇ,ಗ್ರಾಮದ ಅಕ್ಕ ಪಕ್ಕದ ಊರುಗಳಲ್ಲಿ ಕೆರೆ ಕಟ್ಟೆಗಳು ಒಡೆದು ಹೋಗುವಂತಹ ಮಳೆ ಸುರಿದಿದೆ. ಆದರೆ ಲಕ್ಕುಂಡಿ ಗ್ರಾಮಕ್ಕೆ ಮಾತ್ರ ಮಳೆಗಾಲ ಆರಂಭವಾದಾಗಿನಿಂದ ಆಗೊಮ್ಮೆ ಈಗೊಮ್ಮೆ ಮಳೆ ಬಿದ್ದಿದ್ದು, ಅದು ಕೂಡ ಕೇವಲ ಐದರಿಂದ ಹತ್ತು ನಿಮೀಷ ಜಿಟಿ ಜಿಟಿ ಮಳೆ ಮಾತ್ರ. ದೊಡ್ಡ ಮಳೆ ಬರುವ ನಂಬಿಕೆಯಿಂದ ರೈತ ಹೊಲದಲ್ಲಿ ಬೀಜ ಬಿತ್ತಿ ಬಂದು ಮತ್ತೆ ಮಳೆ ಬರುತ್ತದೆ ಎಂದು ಮೋಡವನ್ನು ನೋಡುತ್ತ ಮುಂಗಾರು ಮಳೆ ನಂಬಿ ಹಾನಿಗೊಳಗಾಗಿದ್ದಾನೆ. ಈಗ ಹಿಂಗಾರು ಸಮಯ ಮುಗಿಯುತ್ತ ಬಂದಿದ್ದು ಈಗಲೂ ಕೂಡ ಸ್ವಲ್ಪ ಮಳೆ ಬಿದ್ದಿದ್ದು ಮತ್ತೆ ಸಾಲ ಮಾಡಿ ಬೀಜ ಗೊಬ್ಬರ ಖರೀದಿಸಿ ಭೂಮಿಗೆ ಹಾಕಿ ಮೋಡದತ್ತ ಮುಖ ಮಾಡಿ ನಿಂತಿದ್ದಾನೆ.

ಮಳೆಯ ಪ್ರಮಾಣ: ಕಳೆದ 2010 ರಲ್ಲಿ ಅಧಿಕವಾಗಿ ಮೇ ದಿಂದ ಅಕ್ಟೋಬರವರೆಗೂ ಸಮಾರು 571 ಮಿ.ಮೀ. ಮಳೆ ಸುರಿದು ಅತಿವಷ್ಟಿಯಾಗಿ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಬೆಳೆದ ಫಸಲು ಮಳೆಯ ರಭಸಕ್ಕೆ ಹಾನಿಗೊಳಗಾಯಿತು. ಇದನ್ನು ಹೊರತುಪಡಿಸಿದರೆ 2011ರಲ್ಲಿ ಮೇ ದಿಂದ ಆಗಷ್ಟ ವರೆಗೂ ಕೇವಲ 195 ಮಿ. ಮೀ ಮಳೆ ಸುರಿದು ಮುಂದೆ ವರುಣನ ದರ್ಶನವೇ ಆಗಲಿಲ್ಲ.2012 ರಲ್ಲಿ ಮೇ ದಿಂದ ಅಕ್ಟೋಬರ ವರೆಗೂ ಆಗೊಮ್ಮೆ ಈಗೊಮ್ಮೆ ಮಳೆ ಬಂದು ಕೇವಲ 165 ಮಿ ಮೀ ಮಳೆ ಸುರಿದು ಆ ವರ್ಷವು ಕೂಡ ಮುಂದೆ ಮಳೆಯ ಕಪೆಯಾಗಲಿಲ್ಲ. ಇನ್ನೂ ಈ ವರ್ಷ ಮುಂಗಾರಿನಿಂದ ಇಲ್ಲಿಯವರೆಗೂ ಕೇವಲ ಅತ್ಯಂತ ಕಡಿಮೆ ಪ್ರಮಾಣ 140 ಮಿ ಮೀ ಮಳೆ ಸುರಿಯಿತು.ಮಳೆಯಿಲ್ಲದ್ದರಿಂದ ಬಾವಿಗಳು, ಕೊಳೆವೆ ಬಾವಿಗಳು, ಕೆರೆಗಳು ಸಂಪೂರ್ಣ ಬತ್ತಿ ಹೋಗಿವೆ.

ಬಾಡಿದ ಹೂವು: ಐತಿಹಾಸಿಕವಾಗಿ ಪ್ರಸಿದ್ಧಿ ಪಡೆದಿರುವ ಲಕ್ಕುಂಡಿ ಗ್ರಾಮ ನೂರೂಂದು ಗುಡಿ ಬಾವಿಗಳನ್ನು ಹೊಂದಿದ್ದು ಹೂವು ಬೆಳೆಯುವ ಕಣಜವೆಂದೆ ಪ್ರಸಿದ್ದವಾಗಿದೆ. ಇಲ್ಲಿ 765 ಕ್ಕೂ ಹೆಚ್ಚು ತೋಟಗಳು ಇದ್ದು, ಕಳೆದ 40 ವರ್ಷಗಳಿಂದಲೇ ಹೂವು ಕಷಿ ಆರಂಭವಾಗಿದೆ. ಪ್ರತಿ ತೋಟದಲ್ಲಿ ಸೇವಂತಿಗೆ, ಮಲ್ಲಿಗೆ, ಅಬಾಲಿ ಹೂವುಗಳನ್ನು ಬೆಳೆದ ರೈತರು ಇದನ್ನೇ ವಾಣಿಜ್ಯ ಕಷಿಯನ್ನಾಗಿ ಮಾಡಿಕೊಂಡು ಇಲ್ಲಿಯ ಹೂವನ್ನು ಪುಣೆ,ಮುಂಬಯಿ,ಸೋಲ್ಲಾಪುರ, ಬೆಳಗಾವಿ, ಹುಬ್ಬಳ್ಳಿ,ಬಾಗಲಕೋಟ,ವಿಜಾಪುರ,ಉಡುಪಿ,ಮಂಗಳೂರ,ಕುಮಟಾ ಸೇರಿದಂತೆ ರಾಜ್ಯದ ಮೂಲೆಗಳಲ್ಲಿ ಮಾರಾಟ ಮಾಡುತ್ತಿದ್ದರು. ಇದರಿಂದ ಆರ್ಥಿಕವಾಗಿಯೂ ಸಹ ಸಬಲರಾಗಿದ್ದರು. ಆದರೆ ಕಳೆದ ಮೂರು ವರ್ಷಗಳ ಕಾಲ ಮಳೆರಾಯನ ಅವಕಪೆಯಿಂದ ಕೆರೆ ಭಾವಿಗಳು ಬತ್ತಿ ಹೂವಿನಂತೆ ರೈತನ ಮುಖ ಬಾಡಿದೆ.

ಬೌಗೋಳಿಕ ಕ್ಷೇತ್ರ: ಗ್ರಾಮದಲ್ಲಿ ಭೌಗೋಳಿಕವಾಗಿ ಕಷಿ ಕ್ಷೇತ್ರ 14220 ಎಕರೆ 35 ಗುಂಟೆ ಹೊಂದಿದೆ. ಇದರಲ್ಲಿ 13703 ಎಕರೆ ಸಾಗುವಳಿಯಾಗುತ್ತಿದ್ದು, ಇದರಲ್ಲಿ 765 ಎಕರೆಗಿಂತಲೂ ಹೆಚ್ಚು ನೀರಾವರಿ ಕ್ಷೇತ್ರವಾಗಿದೆ. ಮುಂಗಾರಿನಲ್ಲಿ 8825 ಎಕರೆ ಬಿತ್ತನೆಯಾದರೆ 11300 ಎಕರೆ ಹಿಂಗಾರಿನಲ್ಲಿ ಬಿತ್ತನೆಯಾಗಿದೆ. ಮುಖ್ಯವಾಗಿ ಇಲ್ಲಿ ಜೋಳ,ಹತ್ತಿ,ಸೂರ್ಯಕಾಂತಿ,ಕಡಲೆ,ಶೇಂಗಾ,ಗೋಧಿ,ಗೋವಿನ ಜೋಳ, ಹೆಸರು ಬೆಳೆಯಲಾಗುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಈ ಬೆಳೆಗಳು ಬರಲಾರದೇ ರೈತ ತನ್ನ ಮನೆತನದ ಉಪಯೋಗಕ್ಕೂ ಸಹ ಆಹಾರ ಧಾನ್ಯಗಳು ದೊರೆಯಲಾರದೇ ಮಾರುಕಟ್ಟೆಯಿಂದ ತಂದು ಜೀವನ ನೆಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮಳೆ ಹಿನ್ನಡೆಗೆ ಕಾರಣ: ಕಳೆದ ಐವತ್ತು ವರ್ಷಗಳಿಂದ ಇಲ್ಲಿ ನೀರಾವರಿ ಮಾಡುತ್ತ ಬಂದಿರುವ ರೈತರು ಪ್ರತಿಸಲ ಬಂಪರ್ ಬೆಳೆ ತೆಗೆದಿದ್ದಾರೆ. ಗ್ರಾಮದಲ್ಲಿ ಮೊದಲು ಶೇ. 25 ರಷ್ಟು ಬಾವಿಗಳು ಮಾತ್ರ ಇದ್ದವು. ಕ್ರಮೇಣ ವರ್ಷ ಕಳೆದಂತೆಲ್ಲ ನೀರಾವರಿ ಭೂಮಿ ಕೂಡ ಹೆಚ್ಚಾಯಿತು. ಕೊಳೆವೆ ಬಾವಿಗಳು ಅಧಿಕವಾದವು.ಅವು ಎಷ್ಟು ಕೊಳೆವೆ ಬಾವಿಗಳು ಹುಟ್ಟಿಕೊಂಡವೇಂದರೆ ಪ್ರತಿ 100 ಮೀಟರ್‌ನಲ್ಲಿ ಒಂದು ಕೊಳೆವೆಬಾವಿಗಳು ತೆರೆದುಕೊಂಡವು. ಇದರಿಂದ ಕ್ರಮೇಣ ಭೂಮಿಯಲ್ಲಿ ನೀರಿನ ಅಂಶ ಕಡಿಮೆಯಾಗುತ್ತ ಬಂದು ತಂಪು ಪ್ರದೇಶವೇ ಮಾಯಾವಾದಂತಾಯಿತು.ಮಳೆ ಆಕರ್ಷಿಸಿಸಲು ತಂಪು ಪ್ರದೇಶ ಇಲ್ಲದಂತಾಗಿದೆ. ಗ್ರಾಮ ಹಾಗೂ ಜಮೀನುಗಳಲ್ಲಿ ಅರಣ್ಯ ಸಸಿಗಳ ಕೊರತೆ ಇದೆ. ಗ್ರಾಮದ ಭೂಮಿಯತ್ತ ಬರುತ್ತಿರುವ ಮೋಡಗಳು ಅರಣ್ಯ ಪ್ರದೇಶವಿರುವ ಕಡೆ ಹೋಗುತ್ತಿವೆ. ಮುಖ್ಯವಾಗಿ ಮಳೆ ಆಕರ್ಷಿಸಿಸಲು ತಂಪು ಭೂಮಿ ಕಡಿಮೆಯಾಗುತ್ತ ಬಂದಿರುವುದು ಮತ್ತು ಅರಣ್ಯೀಕರಣ ಇಲ್ಲದಿರುವುದು ಎಂದು ವೈಜ್ಞಾನಿಕವಾಗಿ ಹೇಳಲಾಗುತ್ತಿದೆ.ಇನ್ನೂ ಆಶ್ಚರ್ಯವೆಂದರೆ ಗ್ರಾಮದ ಸುತ್ತಲಿನ ಹಳ್ಳಿಗಳಲ್ಲಿ ಅಂದರೆ ಕೇವಲ 5 ಕಿಮೀ ವ್ಯಾಪ್ತಿಯೊಳಗೆ ರಭಸವಾಗಿ ಮಳೆ ಬಿದ್ದರೂ ಕೂಡ ಇಲ್ಲಿ ಆಗೊಂದು ಈಗೊಂದು ಹನಿ ಬಿದ್ದು, ಲಕ್ಕುಂಡಿ ಗ್ರಾಮ ಮಳೆಯ ನೆರಳಿನ ಪ್ರದೇಶವಾಗುತ್ತಿರುವುದು ಕಳವಳದ ಸಂಗತಿಯಾಗಿದೆ ಎಂದು ಭೌಗೋಳಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮರಗಳನ್ನು ಬೆಳೆಸುವುದು ಸೂಕ್ತ: ಇನ್ನೂ ಮುಂದಾದರೂ ಗ್ರಾಮದ ಜಮೀನುಗಳಲ್ಲಿ ಅರಣ್ಯ ಸಸಿಗಳನ್ನು ಹೆಚ್ಚಾಗಿ ಹಚ್ಚುವುದು ಪ್ರತಿಯೊಬ್ಬರ ಹಕ್ಕಾಗಬೇಕು. ಅಧಿಕ ಪ್ರಮಾಣದಲ್ಲಿ ಕೊಳೆವೆ ಭಾವಿಗಳಿಂದ ಅಂತರ್ಜಲ ಬಳಕೆಯಾಗುತ್ತಿದ್ದು ಮಳೆಗಾಲದಲ್ಲಿ ಹರಿದು ಪೋಲಾಗುತ್ತಿರುವ ನೀರನ್ನು ಕೂಳವೆ ಬಾವಿ ಪಕ್ಕದಲ್ಲಿ ಇಂಗು ಗುಂಡಿ ನಿರ್ಮಾಣ ಮಾಡಬೇಕು. ಸಾಧ್ಯವಾದಷ್ಟು ಹೆಚ್ಚಿನ ಪ್ರಮಾಣದಲ್ಲಿ ಕಷಿ ಹೊಂಡ ನಿರ್ಮಾಣ ಮಾಡುವುದರ ಮೂಲಕ ಅಂತರ್ಜಲ ಮಟ್ಟ ಕಾಯ್ದುಕೊಳ್ಳಲು ಪ್ರತಿಯೊಬ್ಬರೂ ಮುಂದಾಗಬೇಕು.

ಪ್ರತಿಯೊಬ್ಬ ರೈತರು ತಮ್ಮ ಜಮೀನಿನಲ್ಲಿ ಇದು ನಮ್ಮ ಕರ್ತವ್ಯವೆಂಬಂತೆ ಕಷಿ ಹೊಂಡ ನಿರ್ಮಿಸಿ ಅಂತರ್ಜಲ ಹೆಚ್ಚಿಸಲು ಮುಂದಾದರೆ ಸಾಕು ಇದೇ ಗ್ರಾಮಕ್ಕೆ ಮಾಡಿದ ಪುಣ್ಯವಾಗುತ್ತದೆ. ಬಿ.ಬಿ.ಮಾಡಲಗೇರಿ, ರೈತ

ಲಕ್ಕುಂಡಿ ಗ್ರಾಮ ಬಯಲು ಪ್ರದೇಶವಾಗಿರುವುದರಿಂದ ಅಧಿಕ ಸಂಖ್ಯೆಯಲ್ಲಿ ಅರಣೀಕರಣ ನಡೆಯಬೇಕು. ಅವುಗಳನ್ನು ಜವಾಬ್ದಾರಿಯಿಂದ ಮರವಾಗಿ ಬೆಳೆಸಿದರೆ ಮಾತ್ರ ಪ್ರತಿ ವರ್ಷ ಸಮರ್ಪಕವಾಗಿ ಮಳೆ ಬರಲು ಸಾಧ್ಯವಾಗಬಹುದು. —ಸಿ.ಪಿ.ಮುಡಲತೋಟ,ಕಷಿ ಸಹಾಯಕರು ಲಕ್ಕುಂಡಿ
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ