ಆ್ಯಪ್ನಗರ

ಸಂತ್ರಸ್ತರಿಗೆ 200 ಮನೆ

ಗದಗ/ಕೊಣ್ಣೂರು : ಇನ್ಫೋಸಿಸ್‌ ಪ್ರತಿಷ್ಠಾನಯಿಂದ 20 ಕೋಟಿ ಮೊತ್ತದಲ್ಲಿ ನೆರೆ ಸಂತ್ರಸ್ತರಿಗೆ 200 ಹೊಸ ಮನೆ ಕಟ್ಟಿಕೊಡುವ ಉದ್ದೇಶ ಹೊಂದಲಾಗಿದೆ ಎಂದು ಇನ್ಫೋಸಿಸ್‌ ಫೌಂಡೇಶನ್‌ ಮುಖ್ಯಸ್ಥೆ ಸುಧಾಮೂರ್ತಿ ಹೇಳಿದರು.

Vijaya Karnataka 31 Aug 2019, 5:00 am
ಗದಗ/ಕೊಣ್ಣೂರು : ಇನ್ಫೋಸಿಸ್‌ ಪ್ರತಿಷ್ಠಾನಯಿಂದ 20 ಕೋಟಿ ಮೊತ್ತದಲ್ಲಿ ನೆರೆ ಸಂತ್ರಸ್ತರಿಗೆ 200 ಹೊಸ ಮನೆ ಕಟ್ಟಿಕೊಡುವ ಉದ್ದೇಶ ಹೊಂದಲಾಗಿದೆ ಎಂದು ಇನ್ಫೋಸಿಸ್‌ ಫೌಂಡೇಶನ್‌ ಮುಖ್ಯಸ್ಥೆ ಸುಧಾಮೂರ್ತಿ ಹೇಳಿದರು.
Vijaya Karnataka Web GDG-30RUDRAGOUD1A


ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿ ಪ್ರವಾಹ ಪೀಡಿತ ಸಂತ್ರಸ್ತರ ಕಷ್ಟ ಆಲಿಸಿ ನಂತರ ಮಾತನಾಡಿದರು. ಇನ್ಫೋಸಿಸ್‌ ಪ್ರತಿಷ್ಠಾನದ ವತಿಯಿಂದ ಈಗಾಗಲೇ ಹಲವು ನೆರೆಪೀಡಿತ ಪ್ರದೇಶಗಳಲ್ಲಿನೂತನ ಮನೆಗಳನ್ನು ನಿರ್ಮಿಣ ಮಾಡಲಾಗಿದೆ. ಅದೇ ರೀತಿ ಗದಗ ಜಿಲ್ಲೆಯಲ್ಲೂ ಪ್ರವಾಹ ಪೀಡಿತರಿಗೆ ಮನೆಗಳನ್ನು ಕಟ್ಟಿಕೊಡಲು ಸಿದ್ಧರಿದ್ದೇವೆ. ಸರಕಾರ ಎಷ್ಟು ಬೇಗ ಜಾಗ ಗುರುತಿಸಿ ನಮಗೆ ನೀಡುತ್ತದೆಯೋ ಅಷ್ಟು ತುರ್ತಾಗಿ ಮನೆ ನಿರ್ಮಾಣ ಮಾಡಲಾಗುತ್ತಿದೆ. ಜತೆಗೆ ಅಲ್ಲಿನ ನಿವಾಸಿಗಳು ಮನೆಯಲ್ಲಿವಾಸಿಸುವ ಭರವಸೆ ನೀಡಬೇಕು. ಮೊದಲ ಹಂತದಲ್ಲಿ10 ಕೋಟಿಯಲ್ಲಿ100 ಮನೆ, ನಂತರ 2ನೇ ಹಂತದಲ್ಲಿ100 ಮನೆ ನಿರ್ಮಾಣ ಮಾಡಲಾಗುತ್ತಿದೆ. ನಮ್ಮ ಸಂಸ್ಥೆಯ ಎಂಜನಿಯರ್‌ ಮೂಲಕ 1 ಮನೆಗೆ 10 ಲಕ್ಷ ರೂ. ಖರ್ಚು ಮಾಡಿ ಮನೆ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಹಾಳಾದ ಮನೆ ವೀಕ್ಷಣೆ:
ನರಗುಂದ ತಾಲೂಕಿನ ಕೊಣ್ಣೂರು ಗ್ರಾಮದಲ್ಲಿಪ್ರವಾಹಕ್ಕೆ ಸಿಕ್ಕು ಕುಸಿದು ಬಿದ್ದ ಮನೆಗಳನ್ನು ಸುಧಾಮೂರ್ತಿ ವೀಕ್ಷಣೆ ಮಾಡಿದರು. ಪದೇ ಪದೇ ಪ್ರವಾಹಕ್ಕೊಳಗಾಗುವ ಇಂತಹ ಗ್ರಾಮಗಳನ್ನು ಸರಕಾರ ಗುರುತಿಸಿ ಬೇರೆ ಕಡೆ ನಿರ್ಮಿಸಬೇಕು. ಜತೆಗೆ ಮಣ್ಣಿನ ಮನೆಗಳು ಮಳೆ ನೀರಿಗೆ ಕುಸಿಯುತ್ತಿವೆ. ಆದ್ದರಿಂದ ಸರಕಾರ ಇಂತಹ ಸ್ಥಳವನ್ನು ಕೂಡಲೇ ಸ್ಥಾಳಾಂತರ ಮಾಡಬೇಕು. ಅಲ್ಲದೇ ನಮ್ಮ ಇನ್ಫೋಸಿಸ್‌ ಪ್ರತಿಷ್ಠಾನದಿಂದ ಈಗಾಗಲೇ ಹಲವು ನೆರೆಪೀಡಿತ ಪ್ರದೇಶಗಳಲ್ಲಿನೂತನ ಮನೆ ನಿರ್ಮಾಣ ಮಾಡಲಾಗಿದೆ. ಅದೇ ಮಾದರಿಯಲ್ಲಿಕೊಣ್ಣೂರು ಗ್ರಾಮದಲ್ಲಿಮನೆ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಐದು ಕೋಟಿ ಕಿಟ್‌ ವಿತರಣೆ:
ಐದು ಕೋಟಿ ಮೊತ್ತದಲ್ಲಿಸಂತ್ರಸ್ತರಿಗೆ ದಿನನಿತ್ಯದ ಸಾಮಾಗ್ರಿಗಳ ಕಿಟ್‌ ತಯಾರಿಸಿ ವಿತರಣೆ ಮಾಡಲಾಗಿದೆ. ಕೊಣ್ಣೂರು ಗ್ರಾಮಸ್ಥರಿಗೆ ಬೇಕಾಗಿರುವ ಸಾಮಗ್ರಿಗಳು ಹಾಗೂ ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಮಾಡಲಾಗಿದೆ. ಒಂದು ಕುಟುಂಬಕ್ಕೆ ಅಗತ್ಯವಿರುವ ವಸ್ತುಗಳಾದ ಚಾಪೆ, ರಗ್ಗು, ಸೀರೆ, ಮಕ್ಕಳ ಬಟ್ಟೆಗಳು, ಅಡುಗೆಗೆ ಬೇಕಾಗುವ ವಸ್ತುಗಳು, ಪಾತ್ರೆಗಳು, ಇನ್ನೀತರ ವಸ್ತುಗಳನ್ನೊಳಗೊಂಡ ಸುಮಾರು 10 ಸಾವಿರ ಕಿಟ್‌ಗಳನ್ನು ಮಾಡಿ ಹಚ್ಚಲಾಗಿದೆ. ಜತೆಗೆ ಜಾನುವಾರಗಳಿಗೆ ನಾಲ್ಕು ಲಾರಿಗಳ ಮೇವನ್ನು ಸಹ ವಿತರಣೆ ಮಾಡಲಾಗಿದೆ ಎಂದರು.

ಜಿಪಂ ಸದಸ್ಯ ರಾಜುಗೌಡ ಕೆಂಚನಗೌಡ್ರ, ತಾಪಂ ಸದಸ್ಯ ಟಿ.ಬಿ.ಶಿರಿಯಪ್ಪಗೌಡ್ರ, ಎಸ್‌.ಬಿ.ಯಲ್ಲಪ್ಪಗೌಡ್ರ, ಇನ್ಫೋಸಿಸ್‌ ಸಂಸ್ಥೆಯ ಅಮುಲ ಕುಲಕರ್ಣಿ, ವಿಜಯಕರ್ಣನ್‌, ರಮೇಶರಡ್ಡಿ, ದಿನೇಶ, ಕೊಣ್ಣೂರಿನ ಸುವರ್ಣಾ ಪಾಟೀಲ, ಎಸ್‌.ಜಿ.ಚೌಡರಡ್ಡಿ, ಇಸಾಕ ಮಸೂತಿಮನಿ ಇದ್ದರು.

ಸ್ವಚ್ಛತೆಗೆ ಹೆಚ್ಚು ಗಮನ ಹರಿಸಿ:
ಕೊಣ್ಣೂರು ಗ್ರಾಮದ ಎಪಿಎಂಸಿ ಆವರಣದಲ್ಲಿಜಿಲ್ಲಾಡಳಿತದಿಂದ ನಿರ್ಮಾಣ ಮಾಡಲಾಗಿರುವ ತಾತ್ಕಾಲಿಕ ತಗಡಿನಿ ಶೆಡ್‌ ವೀಕ್ಷಣೆ ಮಾಡಿದರು. ನಂತರ ಅಲ್ಲಿನ ಸಂತ್ರಸ್ತರೊಂದಿಗೆ ಚರ್ಚಿಸಿದರು. ಜತೆಗೆ ಅವರಿಗೆ ನೀಡಿರುವ ಸೌಲಭ್ಯ ಪರಿಶೀಲಿಸಿದರು. ಸಂತ್ರಸ್ತರು ವಾಸಿಸುವ ಜೋಪಡಿ ಸುತ್ತ ಪಾರ್ಥೇನಿಯಂ ಕಸ, ಮುಳ್ಳುಕಂಟಿಗಳಿರುವುದನ್ನು ಕಂಡು ಸ್ವಚ್ಛತೆ ಇಲ್ಲದೆ ಹೋದರೆ ರೋಗಗಳು ಹೆಚ್ಚಾಗುತ್ತದೆ. ಮೂರು ಹೊತ್ತು ಊಟ ಸಿಗುತ್ತದೆ. ಸುಮ್ಮನೆ ಕುಳಿತುಕೊಳ್ಳುವ ಬದಲು ಜೋಪಡಿ ಸುತ್ತಲಿರುವ ಕಸ ತೆಗೆದು ಸ್ವಚ್ಛವಾಗಿ ಇಟ್ಟಿಕೊಳ್ಳುವುದರಿಂದ ರೋಗಗಳು ಬರುವುದಿಲ್ಲಎಂದು ಸಂತ್ರಸ್ತ ಮಹಿಳೆಯರಿಗೆ ಕಿವಿ ಮಾತು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ