ಆ್ಯಪ್ನಗರ

ಗದಗ ಜಿಲ್ಲೆಯಲ್ಲಿ30 ಜನರಿಗೆ ಸೋಂಕು

ಗದಗ: ಜಿಲ್ಲೆಯಲ್ಲಿಕೊರೊನಾ ಮಹಾ ಸ್ಪೋಟ ಸಂಭವಿಸಿದ್ದು, ಭಾನುವಾರ ಒಂದೇ ದಿನ 30 ಜನರಿಗೆ ಸೋಂಕು ದೃಢಪಟ್ಟಿದ್ದು, ಈವರೆಗೆ ದಾಖಲಾದ ಗರಿಷ್ಠ ಸಂಖ್ಯೆ ಇದಾಗಿದೆ.

Vijaya Karnataka 29 Jun 2020, 5:00 am
ಗದಗ: ಜಿಲ್ಲೆಯಲ್ಲಿಕೊರೊನಾ ಮಹಾ ಸ್ಪೋಟ ಸಂಭವಿಸಿದ್ದು, ಭಾನುವಾರ ಒಂದೇ ದಿನ 30 ಜನರಿಗೆ ಸೋಂಕು ದೃಢಪಟ್ಟಿದ್ದು, ಈವರೆಗೆ ದಾಖಲಾದ ಗರಿಷ್ಠ ಸಂಖ್ಯೆ ಇದಾಗಿದೆ.
Vijaya Karnataka Web 30 people infected in gadag district
ಗದಗ ಜಿಲ್ಲೆಯಲ್ಲಿ30 ಜನರಿಗೆ ಸೋಂಕು


ಭಾನುವಾರ ಪತ್ತೆಯಾದ 30 ಜನರ ಪೈಕಿ ಶಿರಹಟ್ಟಿಯ 31 ವರ್ಷದ ಮಹಿಳೆಯೊಬ್ಬರಿಗೆ ಹೊರತುಪಡಿಸಿದರೆ, ಇನ್ನುಳಿದ 29 ಜನ ಮುಂಡರಗಿ ಪಟ್ಟಣಕ್ಕೆ ಸೇರಿದವರಾಗಿದ್ದು, ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದೆ. 8 ತಿಂಗಳ ಹಸುಗೂಸು ಸೇರಿದಂತೆ 2 ರಿಂದ 7 ವರ್ಷದ ಒಳಗಿನ ಮಕ್ಕಳು ಸೇರಿದಂತೆ ಒಟ್ಟು 29 ಜನ ಮುಂಡರಗಿ ನಿವಾಸಿಗಳು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ.

ಮೂಲತಃ ರೋಣ ತಾಲೂಕಿನ ಇಟಗಿ ಗ್ರಾಮದ 38 ವರ್ಷದ ಅಕೌಂಟಂಟ್‌ ಪಿ-9407 ಇವರಿಂದ ಮುಂಡರಗಿಯ 14ಕ್ಕೂ ಹೆಚ್ಚು ಜನರಿಗೆ ಸೋಂಕು ವ್ಯಾಪಿಸಿದೆ. ಈಗಾಗಲೇ ನೀರಾವರಿ ಇಲಾಖೆ ಕಚೇರಿಯನ್ನು ಸೀಲ್ಡೌನ್‌ ಮಾಡಲಾಗಿದೆ. ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿದ್ದ ಕುಟುಂಬಸ್ಥರು, ಸಹೋದ್ಯೋಗಿಗಳು ಸೇರಿದಂತೆ 100ಕ್ಕೂ ಹೆಚ್ಚು ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ಸೋಂಕಿತ 30 ಜನರನ್ನು ನಿಗದಿತ ಆಸ್ಪತ್ರೆಯಲ್ಲಿದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆ ಮೂಲಕ ಜಿಲ್ಲೆಯಲ್ಲಿಈವರೆಗೆ ಒಟ್ಟು 170 ಜನ ಕೊರೊನಾ ಸೋಂಕಿಗೆ ಒಳಗಾಗಿದ್ದು, ಅದರಲ್ಲಿ53 ಜನ ಗುಣಮುಖರಾಗಿದ್ದಾರೆ. 114 ಜನ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದಾರೆ. ಮೂವರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ