ಆ್ಯಪ್ನಗರ

ಕ್ಯಾಂಪಸ್‌ ಸಂದರ್ಶನದಲ್ಲಿ 91 ಜನ ಆಯ್ಕೆ

ಗದಗ: ಮುಂಡರಗಿಯ ಸರಕಾರಿ ಕೈಗಾರಿಕೆ ಸಂಸ್ಥೆ ಹಾಗೂ ಜಿಲ್ಲಾಉದ್ಯೋಗ ವಿನಿಮಯ ಕಚೇರಿ ಸಹಯೋಗದಲ್ಲಿಮಂಗಳವಾರ ನಡೆದ ಕ್ಯಾಂಪಸ್‌ ಸಂದರ್ಶನದಲ್ಲಿ91 ಜನ ಉದ್ಯೋಗ ಅವಕಾಶ ಪಡೆದಿದ್ದಾರೆ.

Vijaya Karnataka 30 Jan 2020, 5:00 am
ಗದಗ: ಮುಂಡರಗಿಯ ಸರಕಾರಿ ಕೈಗಾರಿಕೆ ಸಂಸ್ಥೆ ಹಾಗೂ ಜಿಲ್ಲಾಉದ್ಯೋಗ ವಿನಿಮಯ ಕಚೇರಿ ಸಹಯೋಗದಲ್ಲಿಮಂಗಳವಾರ ನಡೆದ ಕ್ಯಾಂಪಸ್‌ ಸಂದರ್ಶನದಲ್ಲಿ91 ಜನ ಉದ್ಯೋಗ ಅವಕಾಶ ಪಡೆದಿದ್ದಾರೆ.
Vijaya Karnataka Web 91 people selected for campus interview
ಕ್ಯಾಂಪಸ್‌ ಸಂದರ್ಶನದಲ್ಲಿ 91 ಜನ ಆಯ್ಕೆ


ಮುಂಡರಗಿಯ ಸರಕಾರಿ ಕೈಗಾರಿಕೆ ಕಾಲೇಜಿನಲ್ಲಿನಡೆದ ಆಯ್ಕೆ ಪ್ರಕ್ರಿಯೆಯಲ್ಲಿ250ಕ್ಕೂ ಹೆಚ್ಚು ಯುವಕ, ಯುವತಿಯರು ಸಂದರ್ಶನದಲ್ಲಿಭಾಗವಹಿಸಿದ್ದರು. ಎಲ್‌ಎಂ ವಿಂಡ್‌ ಪಾವರ್‌ ಇಂಡಿಯಾ ಪ್ರೈ.ಲಿ. ತುಮಕೂರು ಹಾಗೂ ಹಿಮತ್ಸಿಂಗ ಹಾಸನ ಕಂಪನಿಗಳ ಮಾನವ ಸಂಪನ್ಮೂಲ ಅಧಿಕಾರಿಗಳು ಭಾಗಿಯಾಗಿ 91 ಜನ ಅರ್ಹರನ್ನು ಆಯ್ಕೆ ಮಾಡಿಕೊಂಡು ಸ್ಥಳದಲ್ಲಿಯೇ ಉದ್ಯೋಗಕ್ಕೆ ಹಾಜರಾಗಲು ಕಂಪನಿಯ ನೇಮಕಾತಿ ಆದೇಶ ನೀಡಿದಲ್ಲದೇ, 45 ಅಭ್ಯರ್ಥಿಗಳನ್ನು ಮುಂದಿನ ಹಂತಕ್ಕೆ ಕಾಯ್ದಿರಿಸಿದ್ದಾರೆ.

ಕ್ಯಾಂಪಸ್‌ ಸಂದರ್ಶನ ಸಮಾರಂಭವನ್ನು ಜಿಲ್ಲಾಕೌಶಲ್ಯಾಭಿವೃದ್ಧಿ ಅಧಿಕಾರಿ ಬಸವರಾಜ ಮಲ್ಲೂರು ಉದ್ಘಾಟಿಸಿದರು. ತರಬೇತಿ ಅಧಿಕಾರಿ ಈರಪ್ಪ ವಟ್ನಾಳ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಉದ್ಯೋಗ ವಿನಿಮಯ ಅಧಿಕಾರಿ ತನುಜಾ ರಾಮಪುರೆ, ನಾರಾಯಣಪ್ಪ ಇಲ್ಲೂರು, ಮಲ್ಲಿಕಾರ್ಜುನ, ಮಹಮ್ಮದಲಿ, ತಿಪ್ಪೇಸ್ವಾಮಿ ಇದ್ದರು. ಸುರೇಶ ದಾವಣಗೇರಿ ಸ್ವಾಗತಿಸಿದರು. ಸಾತಪುತೆ ವಂದಿಸಿದರು. ನಾಗರಾಜ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ