ಆ್ಯಪ್ನಗರ

ಆತ್ಮವಿಶ್ವಾಸ ಬೆಳೆಸಿದ ಕವಿ ಕುವೆಂಪು

ನರಗುಂದ: ಕನ್ನಡಿಗರಿಗೆ ರಾಮಾಯಣ ದರ್ಶನ ಮಾಡಿಸಿ ಕನ್ನಡ ತಾಯಿ ಭುವನೇಶ್ವರಿಯ ಮುಡಿಗೆ ಪ್ರಥಮವಾಗಿ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಈ ನಾಡು ಕಂಡ 20 ನೇ ಶತಮಾನ ಪ್ರತಿಭೆ ರಾಷ್ಟ್ರಕವಿ ಕುವೆಂಪು ಎಂದು ತಹಸೀಲ್ದಾರ ಎ.ಎಚ್‌.ಮಹೇಂದ್ರ ಹೇಳಿದರು.

Vijaya Karnataka 2 Jan 2020, 5:00 am
ನರಗುಂದ: ಕನ್ನಡಿಗರಿಗೆ ರಾಮಾಯಣ ದರ್ಶನ ಮಾಡಿಸಿ ಕನ್ನಡ ತಾಯಿ ಭುವನೇಶ್ವರಿಯ ಮುಡಿಗೆ ಪ್ರಥಮವಾಗಿ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಈ ನಾಡು ಕಂಡ 20 ನೇ ಶತಮಾನ ಪ್ರತಿಭೆ ರಾಷ್ಟ್ರಕವಿ ಕುವೆಂಪು ಎಂದು ತಹಸೀಲ್ದಾರ ಎ.ಎಚ್‌.ಮಹೇಂದ್ರ ಹೇಳಿದರು.
Vijaya Karnataka Web a confident poet is great
ಆತ್ಮವಿಶ್ವಾಸ ಬೆಳೆಸಿದ ಕವಿ ಕುವೆಂಪು


ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿತಾಲೂಕು ಕಸಾಪ ಹಾಗೂ ಸಾಂಸ್ಕೃತಿಕ ವೇದಿಕೆ, ಸರಕಾರಿ ಪ್ರೌಢಶಾಲೆ ಆಶ್ರಯದಲ್ಲಿನಡೆದ ಕುವೆಂಪು ಜನ್ಮದಿನ ಅಂಗವಾಗಿ ವಿಶ್ವಮಾನವ ದಿನಾಚರಣೆ ಹಾಗೂ ವೀರಯೋಧ ಸುಬೇದಾರ ವೀರೇಶ ಕುರಹಟ್ಟಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿಮಾತನಾಡಿದರು. ಕನ್ನಡ ಸಾರಸ್ವತ ಲೋಕಕ್ಕೆ ಯತೇಚ್ಚ ಸಾಹಿತ್ಯ ಭಂಡಾರ ಕಟ್ಟಿಕೊಟ್ಟ ಅವರ ಸಾಹಿತ್ಯ ಕೃತಿ ಓದಿದರೆ 20 ನೇ ಶತಮಾನದ ಸಾಹಿತ್ಯವನ್ನೆಲ್ಲಓದಿದಂತಹ ಅನುಭೂತಿಯಾಗುತ್ತದೆ. ಶೂದ್ರ ಶಕ್ತಿ ಮತ್ತು ಆತ್ಮವಿಶ್ವಾಸ ಬೆಳೆಸಿ ಕನ್ನಡ ಅಸ್ಮೀತೆಯನ್ನು ನಮಗೆಲ್ಲರಿಗೆ ತೋರಿಸಿಕೊಟ್ಟ ನಾಡಿನ ಶ್ರೇಷ್ಠ ಕವಿ ಕುವೆಂಪು ಎಂದರು.

ತಮ್ಮ ಸಾಹಿತ್ಯದ ಮೂಲಕ ವಿಶ್ವಸಂದೇಶ ನೀಡಿ ವಿಶ್ವಮಾನವರಾದ ಕುವೆಂಪುರವರ ದೈಹುಜ ಚಿತ್ರಣ ನೋಡಲಾಗದು. ಆದರೆ ಅವರಗೆ ಸ್ಫೂರ್ತಿ ನೀಡಿದ ಊರು. ಬೆಟ್ಟ, ಗುಡ್ಡಗಳ ಸಾಲನ್ನು ಹಾಗೂ ಅವರು ಹುಟ್ಟಿ ಬೆಳದ ಪರಿಸರವನ್ನು ಪ್ರತಿಯೊಬ್ಬರು ನೋಡಲೆಬೇಕು.

ಶಾಂತಲಿಂಗ ಸ್ವಾಮಿಗಳು ಸಾನ್ನಿಧ್ಯವಹಿಸಿ,ಕುವೆಂಪು ಅವರ ವ್ಯಕ್ತಿತ್ವಕ್ಕೆ ಸರಿಸಾಟಿ ಯಾರು ಇಲ್ಲ. ಸಾಹಿತ್ಯ ಕ್ಷೇತ್ರದಲ್ಲಿಅವರು ಕಾಲಿಡದ ಪ್ರಕಾರಗಳೇ ಇಲ್ಲ. ಕಥೆ, ಕಾದಂಬರಿ, ಕಾವ್ಯ, ಸಂಶೋಧನೆ ಹೀಗೆ ಪ್ರತಿಯೊಂದು ರಂಗದಲ್ಲಿಯೂ ತಮ್ಮದೆಯಾದ ಕೊಡುಗೆ ನೀಡಿದ್ದಾರೆ. ಕನ್ನಡತಾಯಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಪ್ರಥಮ ಪುತ್ರ ರಾಷ್ಟ್ರಕವಿ ಕುವೆಂಪುರವರ ಸಾಹಿತ್ಯ ಅಜರಾಮರ.

ಕನಸಿನ ಕೂಸಾದ ಮಾನಸ ಗಂಗೋತ್ರಿ ವಿಶ್ವವಿದ್ಯಾಲಯವನ್ನು ಕಟ್ಟಿ ಬೆಳೆಸಿದ ಕೀರ್ತಿ ಕುವೆಂಪುರವರಿಗೆ ಸಲ್ಲುತ್ತದೆ. ಮಂತ್ರ ಮಾಂಗಲ್ಯ ಎಂಬ ಸರಳವಿವಾಹ ಪದ್ಧತಿಯನ್ನು ರೂಢಿಗೆ ತಂದು ಅದ್ಧೂರಿ ವಿವಾಹಕ್ಕೆ ಕಡಿವಾಣ ಹಾಕಿದ ಅವರ ಕವನಗಳಲ್ಲಿಯಾರೂ ಮೇಲಲ್ಲಯಾರೂ ಕೀಳಲ್ಲಎಲ್ಲರೂ ಸಮಾನರೆಂಬ ಭಾವನೆ ಕಾಣುತ್ತದೆ ಎಂದು ಹೇಳಿದರು.

ಕಸಾಪ ಅಧ್ಯಕ್ಷೆ ಮಂಗಳಾ ಪಾಟೀಲ, ಎಸ್‌.ಎಲ್‌.ಹಿರೇಕುಂಬಿ ಮಾತನಾಡಿದರು. ಪೇಜಾವರಶ್ರೀಗಳಿಗೆ ಹಾಗೂ ವೀರಮರಣವನ್ನಪ್ಪಿದ ಕರಮುಡಿಯ ಹುತಾತ್ಮ ವೀರಯೋಧ ಸುಬೇದಾರ ವೀರೇಶ ಕುರಹಟ್ಟಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಭೈರನಹಟ್ಟಿ ಪ್ರೌಢ ಶಾಲೆ ಮುಖ್ಯ ಶಿಕ್ಷಕ ಎಸ್‌.ಎಸ್‌.ಹಿರೇಮಠ, ಬಿ.ಆರ್‌.ಪಟ್ಟಣಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ಪ್ರೊ.ಆರ್‌.ಕೆ. ಐನಾಪೂರ ನಿರೂಪಿಸಿದರು. ಮಹಾಂತೇಶ ಹಿರೇಮಠ ಸ್ವಾಗತಿಸಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ