ಆ್ಯಪ್ನಗರ

ಎಸಿಬಿ ಅಧಿಕಾರಿಗಳು ತಾಲೂಕು ಕೇಂದ್ರಕ್ಕೆ ಭೇಟಿ

ಗದಗ : ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಿಗೆ ಎಸಿಬಿ ಘಟಕದ ಅಧಿಕಾರಿಗಳು ಪ್ರತಿ ತಿಂಗಳು ಭೇಟಿ ನೀಡುವ ಕಾರ್ಯಕ್ರಮ ನಿಗದಿ ಪಡಿಸಲಾಗಿದೆ. ಭ್ರಷ್ಟಾಚಾರ ನಿಗ್ರಹ ದಳದ ರಚನೆ, ಕಾರ್ಯ ವ್ಯಾಪ್ತಿ, ಕಾರ್ಯ ನಿರ್ವಹಿಸುವ ವಿಧಾನ ಭ್ರಷ್ಟಾಚಾರ ನಿಗ್ರಹ ಕಾಯ್ದೆ-1988 ರೂಪು-ರೇಷೆಗಳನ್ನು ನಾಗರಿಕರಿಗೆ ತಿಳಿಸಿ, ಭ್ರಷ್ಟಾಚಾರ ನಿಗ್ರಹ ಹಾಗೂ ನಿಯಂತ್ರಣದ ಬಗ್ಗೆ ಅರಿವು ಮೂಡಿಸುವುದು ಭೇಟಿಯ ಉದ್ದೇಶವಾಗಿದೆ.

Vijaya Karnataka 23 Mar 2019, 5:00 am
ಗದಗ : ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಿಗೆ ಎಸಿಬಿ ಘಟಕದ ಅಧಿಕಾರಿಗಳು ಪ್ರತಿ ತಿಂಗಳು ಭೇಟಿ ನೀಡುವ ಕಾರ್ಯಕ್ರಮ ನಿಗದಿ ಪಡಿಸಲಾಗಿದೆ. ಭ್ರಷ್ಟಾಚಾರ ನಿಗ್ರಹ ದಳದ ರಚನೆ, ಕಾರ್ಯ ವ್ಯಾಪ್ತಿ, ಕಾರ್ಯ ನಿರ್ವಹಿಸುವ ವಿಧಾನ ಭ್ರಷ್ಟಾಚಾರ ನಿಗ್ರಹ ಕಾಯ್ದೆ-1988 ರೂಪು-ರೇಷೆಗಳನ್ನು ನಾಗರಿಕರಿಗೆ ತಿಳಿಸಿ, ಭ್ರಷ್ಟಾಚಾರ ನಿಗ್ರಹ ಹಾಗೂ ನಿಯಂತ್ರಣದ ಬಗ್ಗೆ ಅರಿವು ಮೂಡಿಸುವುದು ಭೇಟಿಯ ಉದ್ದೇಶವಾಗಿದೆ.
Vijaya Karnataka Web acb officials visit the taluk center
ಎಸಿಬಿ ಅಧಿಕಾರಿಗಳು ತಾಲೂಕು ಕೇಂದ್ರಕ್ಕೆ ಭೇಟಿ

ಭೇಟಿ ನೀಡಿದಾಗ ದೂರು ಅರ್ಜಿ ಸ್ವೀಕರಿಸಲಾಗುವುದು ಹಾಗೂ ಹಿಂದಿನ ದೂರು ಅರ್ಜಿಗಳ ವಿಚಾರಣಾ ಪ್ರಗತಿ ಬಗ್ಗೆ ದೂರುದಾರರಿಗೆ ಮಾಹಿತಿ ಒದಗಿಸಲಾಗುವುದು. ಯಾವುದೇ ಅಧಿಕಾರಿ ಅಥವಾ ಸಿಬ್ಬಂದಿ ಕೆಲಸ ಮಾಡಿಕೊಡಲು ಅನಗತ್ಯ ವಿಳಂಬ, ಕಿರುಕುಳ ನೀಡಿದರೆ, ಲಂಚಕ್ಕಾಗಿ ಒತ್ತಾಯಿಸುವ ಬಗ್ಗೆ ಮಾಹಿತಿ ಇದ್ದರೆ ಜನರಿಗೆ ಲಿಖಿತ ರೂಪದ ದೂರು ಪಡೆಯಲಾಗುವುದು. ಯಾವುದೇ ಸರಕಾರಿ ಅಧಿಕಾರಿಯು ತನ್ನ ನಿಗದಿತ ಆದಾಯಕ್ಕಿಂತ ಹೆಚ್ಚಿನ ಅಕ್ರಮ ಸಂಪತ್ತು ಗಳಿಸಿರುವ ಬಗ್ಗೆ ಸಾರ್ವಜನಿಕರಿಂದ (ದೂರುದಾರರ ವಿವರ ಬಹಿರಂಗಗೊಳ್ಳದಂತೆ ಗೌಪ್ಯವಾಗಿ) ಮಾಹಿತಿ ಪಡೆಯಲಾಗುವುದು.

ಭೇಟಿ ವಿವರ :

ಮುಂಡರಗಿ ತಾಪಂ: ಮಾ.25ರಂದು ಬೆಳಗ್ಗೆ 11ರಿಂದ 1ರ ವರೆಗೆ, ಶಿರಹಟ್ಟಿ ತಾಪಂ: 25ರಂದು ಮಧ್ಯಾಹ್ನ 3ರಿಂದ 5ರ ವರೆಗೆ, ರೋಣ ತಾಪಂ: 26ರಂದು ಬೆಳಗ್ಗೆ 11ರಿಂದ 1ರ ವರೆಗೆ, ನರಗುಂದ ತಾಪಂ: 26ರಂದು ಮಧ್ಯಾಹ್ನ 3 ರಿಂದ 5ರ ವರೆಗೆ, ಗದಗ ತಾಪಂ: 27ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ಭೇಟಿ ನೀಡುವರು. ಜಿಲ್ಲೆಯ ನಾಗರಿಕರು, ಉಪ-ವಿಭಾಗಾಧಿಕಾರಿ ಕಚೇರಿಯ (ಹಳೆ ಜಿಪಂ ಬಿಲ್ಡಿಂಗ್‌ ಗದಗ) ಕಟ್ಟಡದಲ್ಲಿರುವ ಎಸಿಬಿ ಕಚೇರಿಗೆ ನೇರವಾಗಿ ಭೇಟಿ ನೀಡಿ ತಮ್ಮ ಅಹವಾಲು ಸಲ್ಲಿಸಬಹುದು. ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ವನ್ನು ದೂ. 08372-232566 ಮೂಲಕ ಸಂಪರ್ಕಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ