ಆ್ಯಪ್ನಗರ

ಸೋಲು, ಗೆಲುವು ಸಮಾನ ಸ್ವೀಕರಿಸಿ

ರೋಣ: ಕ್ರೀಡೆ ಎಂದರೆ ಸೋಲು ಗೆಲುವು ಸಹಜ.ಅದನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಉದ್ಯಮಿ ಮುತ್ತಣ್ಣ ಜಕ್ಕಲಿ ಹೇಳಿದರು. ಪಟ್ಟಣದ ದ್ರೋಣಾಚಾರ್ಯ ತಾಲೂಕು ಕ್ರೀಡಾಂಗಣದಲ್ಲಿದ್ರೋಣಾ ಸ್ಮಾಶರ್ಸ್ ಸ್ಪೋಟ್ರ್ಸ ಕ್ಲಬ್‌ ರೋಣ ಗಣರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ಮುಕ್ತ ವಾಲಿಬಾಲ್‌ ಪಂದ್ಯಾವಳಿಗೆ ಚಾಲನೆ

Vijaya Karnataka 27 Jan 2020, 5:00 am
ರೋಣ: ಕ್ರೀಡೆ ಎಂದರೆ ಸೋಲು ಗೆಲುವು ಸಹಜ.ಅದನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಉದ್ಯಮಿ ಮುತ್ತಣ್ಣ ಜಕ್ಕಲಿ ಹೇಳಿದರು. ಪಟ್ಟಣದ ದ್ರೋಣಾಚಾರ್ಯ ತಾಲೂಕು ಕ್ರೀಡಾಂಗಣದಲ್ಲಿದ್ರೋಣಾ ಸ್ಮಾಶರ್ಸ್ ಸ್ಪೋಟ್ರ್ಸ ಕ್ಲಬ್‌ ರೋಣ ಗಣರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ಮುಕ್ತ ವಾಲಿಬಾಲ್‌ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
Vijaya Karnataka Web accept defeat victory equal
ಸೋಲು, ಗೆಲುವು ಸಮಾನ ಸ್ವೀಕರಿಸಿ


ಯುವ ಜನಾಂಗ ಕ್ರೀಡೆ ಹಾಗೂ ಧಾರ್ಮಿಕ ಕಾರ್ಯಗಳಲ್ಲಿಪಾಲ್ಗೊಳ್ಳುವದರಿಂದ ಉತ್ತಮ ಸಂಸ್ಕಾರಗೊಳೊಂದಿಗೆ ಸದೃಢ ಆರೋಗ್ಯ, ಚಂಚಲ ಮನಸ್ಸು ಹೊಂದಬಹುದು ಎಂದರು.

ನಿವೃತ್ತ ಕ್ರೀಡಾಪಟು ಈಶ್ವರ ಬಾಲಿಕಾಯಿ ಮಾತನಾಡಿ, ಕ್ರೀಡಾ ಚಟುವಟಿಕೆಗಳ ಮೂಲಕ ಬದುಕು ಕಟ್ಟುವ ಕಾಯಕ ಆಗಬೇಕಿದೆ.ಆತ್ಮವಿಶ್ವಾಸದ ಬದುಕಿಗೆ ಮತ್ತು ಜೀವನ ಪ್ರೀತಿಗೆ ಕ್ರೀಡೆ ಸಹಕಾರಿ ಎಂದರು.

ಡಾ.ಸಂಜಯ ರಡ್ಡೇರ ಮಾತನಾಡಿ, ಕ್ರೀಡೆ ಹಾಗೂ ಓದು ಎರಡನ್ನೂ ಸಮಾನವಾಗಿ ಪ್ರೀತಿಸಿ ಶ್ರದ್ಧೆಯಿಂದ ಶೈಕ್ಷಣಿಕ ಅವಧಿ ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.

ಸ್ಪೋಟ್ರ್ಸ ಕ್ಲಬ್‌ ಅಧ್ಯಕ್ಷ ಅಭಿಷೇಕ ನವಲಗುಂದ ಮಾತನಾಡಿ, ಕ್ರೀಡೆ ಹಾಗೂ ಕಲಿಕೆ ಒಂದು ನಾಣ್ಯದ ಎರಡು ಮುಖಗಳಿದ್ದಂತೆ.ಕ್ರೀಡಾ ಮನೋಭಾವದಿಂದ ಸ್ಪರ್ಧೆಗಳಲ್ಲಿಪಾಲ್ಗೊಂಡು ಉತ್ತಮ ಸಾಧನೆ ಮಾಡಬೇಕು ಎಂದರು.

ಅಶೋಕ ದೇಶಣ್ಣವರ,ಅಭಿಷೇಕ ಜಿಡ್ಡಿಬಾಗಿಲ, ಅನೀಲ ನವಲಗುಂದ, ವಿರೇಶ ಸಂಕನಗೌಡ್ರ, ಅಜ್ಜು ಬೇಪಾರಿ, ವಿ.ವಿ.ಪತ್ತಾರ, ಕುಮಾರ ಚಿತ್ರಗಾರ, ಶಂಕರಗೌಡ ಅಪಾತಿಗೌಡ್ರ, ಸಿದ್ದು ಮಿಸ್ಕೀನ ಎಸ್‌.ಬಿ.ವಡ್ಡಟ್ಟಿ, ಮಂಜುನಾಥ ರಡ್ಡೇರ, ರಾಜು ನವಲಗುಂದ, ಉದಯಕುಮಾರ,ಜೆ.ಎಂ.ಬೂದಿಹಾಳ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ