ಆ್ಯಪ್ನಗರ

ಉದಾಸೀನತೆ ಅಧಿಕಾರಿಗಳ ವಿರುದ್ಧ ಕ್ರಮ

ರೋಣ: ಚಿಕ್ಕ ಮಕ್ಕಳ ಜೀವಕ್ಕೆ ಮರಾಣಾಂತಿಕವಾಗಿರುವ 10 ಮಾರಕ ರೋಗಗಳ ವಿರುದ್ಧ ಪಾಲಕರು, ಪೋಷಕರು ಜಾಗೃತಿ ವಹಿಸುವುದರ ಜತೆಗೆ ಈ ವರ್ಷವೂ ತಪ್ಪದೇ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸಬೇಕು. ಎಲ್ಲಇಲಾಖೆ ಅಧಿಕಾರಿಗಳು ಪೋಲಿಯೋ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕು ಎಂದು ತಹಸೀಲ್ದಾರ ಜೆ.ಬಿ.ಜಕ್ಕನಗೌಡ್ರ ಹೇಳಿದರು.

Vijaya Karnataka 17 Jan 2020, 5:00 am
ರೋಣ: ಚಿಕ್ಕ ಮಕ್ಕಳ ಜೀವಕ್ಕೆ ಮರಾಣಾಂತಿಕವಾಗಿರುವ 10 ಮಾರಕ ರೋಗಗಳ ವಿರುದ್ಧ ಪಾಲಕರು, ಪೋಷಕರು ಜಾಗೃತಿ ವಹಿಸುವುದರ ಜತೆಗೆ ಈ ವರ್ಷವೂ ತಪ್ಪದೇ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸಬೇಕು. ಎಲ್ಲಇಲಾಖೆ ಅಧಿಕಾರಿಗಳು ಪೋಲಿಯೋ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕು ಎಂದು ತಹಸೀಲ್ದಾರ ಜೆ.ಬಿ.ಜಕ್ಕನಗೌಡ್ರ ಹೇಳಿದರು.
Vijaya Karnataka Web action against negligence officers
ಉದಾಸೀನತೆ ಅಧಿಕಾರಿಗಳ ವಿರುದ್ಧ ಕ್ರಮ


ಪಟ್ಟಣದ ಮಿನಿ ವಿಧಾನಸೌಧದ ಕಂದಾಯ ಇಲಾಖೆಯ ಸಭಾ ಭವನದಲ್ಲಿ ಗುರುವಾರ ನಡೆದ ಪಲ್ಸ್‌ ಪೋಲಿಯೋ ಕಾರ್ಯಕ್ರಮದ ತಾಲೂಕು ಮಟ್ಟದ ಟಾಸ್ಕ್‌ ಪೋರ್ಸ್‌ ಸಭೆಯ ಅಧ್ಯಕ್ಷೆ ವಹಿಸಿ ಅವರು ಮಾತನಾಡಿದರು

ಇಂತಹ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಕ್ಕೆ ಅಧಿಕಾರಿಗಳು ಉದಾಸೀನ ಮಾಡಿದ್ದು ಕೇಳಿ ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು

ಈಗಾಗಲೇ ಭಾರತದಲ್ಲಿ2011 ರಿಂದ ಯಾವುದೇ ಪೋಲಿಯೋ ಪ್ರಕರಣ ವರದಿಯಾಗಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯಿಂದ 2014 ಮಾರ್ಚ 27 ರಂದು ಪೋಲಿಯೋ ಮುಕ್ತ ದೇಶ ಎಂದು ಘೋಷಣೆಯಾಗಿರುವುದು ಸಂತಸ ಸಂಗತಿ. ಈ ನಿಟ್ಟಿನಲ್ಲಿಆರೋಗ್ಯ ಇಲಾಖೆ ಶ್ರಮ ಸಾರ್ಥಕವಾಗಿದೆ ಎಂದರು.

ತಾಪಂ ಇಒ ಸಂತೋಷಕುಮಾರ ಪಾಟೀಲ ಮಾತನಾಡಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆಯವರು ಪರಸ್ಪರ ಹೊಂದಾಣಿಕೆಯೊಂದಿಗೆ ಕೈಜೋಡಿಸಿ, ಪೋಲಿಯೋ ರೋಗ ನಿರ್ಮೂಲನೆಗೊಳಿಸಲು ಸಹಕರಿಸಬೇಕು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮೂಲಕ ಎಲ್ಲಗ್ರಾಮಗಳಲ್ಲಿಡಂಗುರ ಸಾರುವ ಮೂಲಕ ಸಾರ್ವಜನಿಕರಿಗೆ ರಾಷ್ಟ್ರೀಯ ಪಲ್ಸ್‌ ಪೋಲಿಯೋ ಕಾರ್ಯಕ್ರಮದ ಬಗ್ಗೆ ಜನಜಾಗೃತಿ ಮೂಡಿಸಲಾಗುವುದು ಎಂದರು.

ಆರೋಗ್ಯ ಶಿಕ್ಷಣಾಧಿಕಾರಿ ಕೆ.ಎ.ಹಾದಿಮನಿ ಮಾತನಾಡಿ, ರೋಣ ತಾಲೂಕಿನಲ್ಲಿರಾಷ್ಟ್ರೀಯ ಪಲ್ಸ್‌ ಕಾರ್ಯಕ್ರಮದಡಿ ಒಟ್ಟು 33,959 ಐದು ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಅದಕ್ಕಾಗಿ 182 ತಂಡ ರಚಿಲಾಗಿದೆ. ಒಟ್ಟು 44 ಅಪಾಯಕಾರಿ ಪ್ರದೇಶಗಳೆಂದು ಗುರುತಿಸಿದ್ದು 3 ಸಂಚಾರಿ ತಂಡಗಳನ್ನು ಗೊತ್ತು ಮಾಡಿ ಅಲೆಮಾರಿ ಜನಾಂಗ ಮತ್ತು ಗುಡ್ಡುಗಾಡು ಮನೆ, ತೋಟದ ಮನೆಗಳನ್ನು ಗುರುತಿಸಿ ಐದು ವರ್ಷದ ಒಳಗಿನ ಎಲ್ಲಮಕ್ಕಳಿಗೂ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದರು.

ಸಭೆಯಲ್ಲಿಸಿಡಿಪಿಓ ನಾಗನಗೌಡ ಪಾಟೀಲ, ಹೆಸ್ಕಾಂನ ಚೇತನ್‌ ಹಾದಿಮನಿ, ಆರೋಗ್ಯ ಇಲಾಖೆ ಡಾ.ಸಂಗಮೇಶ ಬಂಕದ, ಡಾ.ಅಶ್ವಿನಿ ಕೊಪ್ಪದ, ಡಾ.ರಘು ಹೊಸುರು, ಡಾ.ಪ್ರಕಾಶ ಕಮತೆ, ಡಾ.ರಾಚಪ್ಪ ಗಂಜಿಹಾಳ ಡಾ.ಸುನೀಲ ಸಾರಂಗಮಠ, ಡಾ.ಎಮ್‌.ಹೆಚ್‌.ಹೊಸಮನಿ, ತಾಲೂಕು ಹಿರಿಯ ಆರೋಗ್ಯ ಸಹಾಯಕಿ ಎಸ್‌.ಎಮ್‌.ನೂಲ್ವಿ, ಬಿ.ಆರ್‌.ಪಾಟೀಲ, ಎಸ್‌.ಎನ್‌. ಪಾಟೀಲ,ಆಯ್‌.ಎಸ್‌. ರಂಜಣಗಿ, ಘನಶ್ಯಾಮ ಹೋಳಿ, ಮನೋಹರ ಕಣ್ಣಿ, ಕುಮಾರಸ್ವಾಮಿ ಹಿರೇಮಠ, ಬಿ.ಆರ್‌.ಮಣ್ಣೇರಿ, ಎಸ್‌.ಆರ್‌ ನೀಲಗುಂದ, ಮಂಜುನಾಥ ಹಿರೇಮಠ, ದಾವಲ್‌ಮಲ್ಲೀಕ್‌ ಹುನಗುಂದ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ