ಆ್ಯಪ್ನಗರ

ಅರಣ್ಯ ಸಂಪತ್ತು ಕಾಪಾಡಲು ಸಲಹೆ

ಲಕ್ಷ್ಮೇಶ್ವರ : ಜೀವ ಸಂಕುಲದ ಉಳಿವಿಗಾಗಿ ನೆಲ, ಜಲ, ಅರಣ್ಯ ಸಂಪತ್ತು ಕಾಪಾಡಿ ಉಳಿಸಿ ಬೆಳೆಸದಿದ್ದರೆ ಭವಿಷ್ಯದಲ್ಲಿಮುಂದಿನ ಪೀಳಿಗೆ ಸಂಕಷ್ಟ ಎದುರಿಸಬೇಕಾಗುತ್ತದೆ. ಪ್ರತಿಯೊಬ್ಬರೂ ಗಿಡ ಬೆಳೆಸುವ ಮತ್ತು ಪರಿಸರ ಕಾಳಜಿ ಪ್ರಜ್ಞೆ ಮೂಡಿಸುವ ಕಾರ್ಯ ಮಾಡಬೇಕು ಎಂದು ತಹಸೀಲ್ದಾರ ಭ್ರಮರಾಂಬ ಗುಬ್ಬಿಶೆಟ್ಟಿ ಹೇಳಿದರು.

Vijaya Karnataka 11 Jun 2020, 5:00 am
ಲಕ್ಷ್ಮೇಶ್ವರ : ಜೀವ ಸಂಕುಲದ ಉಳಿವಿಗಾಗಿ ನೆಲ, ಜಲ, ಅರಣ್ಯ ಸಂಪತ್ತು ಕಾಪಾಡಿ ಉಳಿಸಿ ಬೆಳೆಸದಿದ್ದರೆ ಭವಿಷ್ಯದಲ್ಲಿಮುಂದಿನ ಪೀಳಿಗೆ ಸಂಕಷ್ಟ ಎದುರಿಸಬೇಕಾಗುತ್ತದೆ. ಪ್ರತಿಯೊಬ್ಬರೂ ಗಿಡ ಬೆಳೆಸುವ ಮತ್ತು ಪರಿಸರ ಕಾಳಜಿ ಪ್ರಜ್ಞೆ ಮೂಡಿಸುವ ಕಾರ್ಯ ಮಾಡಬೇಕು ಎಂದು ತಹಸೀಲ್ದಾರ ಭ್ರಮರಾಂಬ ಗುಬ್ಬಿಶೆಟ್ಟಿ ಹೇಳಿದರು.
Vijaya Karnataka Web advice to preserve forest wealth
ಅರಣ್ಯ ಸಂಪತ್ತು ಕಾಪಾಡಲು ಸಲಹೆ


ಪುರಸಭೆ, ಪೊಲೀಸ್‌, ಆರೋಗ್ಯ ಇಲಾಖೆಯಿಂದ ಕೈಗೊಂಡ ಸಾರ್ವಜನಿಕ ಸ್ಥಳಗಳಲ್ಲಿಸಸಿ ನೆಡುವ ಕಾರ್ಯಕ್ರಮದಲ್ಲಿಮಾತನಾಡಿದರು. ಸುತ್ತಮುತ್ತಲಿನ ಪರಿಸರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿಗಿಡಮರ ಉಳಿಸಿ ಬೆಳೆಸುವ ಕರ್ತವ್ಯ ಎಲ್ಲರೂ ಮಾಡುವುದು ಅವಶ್ಯ. ಪÜರಿಸರ ನಮ್ಮನ್ನು ರಕ್ಷಿಸುತ್ತದೆಯೂ ಆ ಪರಿಸರ ಸಂರಕ್ಷಿಸದಿದ್ದರೆ ಇಡೀ ಮನುಕುಲಕ್ಕೆ ಗಂಡಾಂತರ ತಪ್ಪಿದ್ದಲ್ಲಎಂದರು.

ಎಪಿಎಂಸಿ ನೂತನ ಅಧ್ಯಕ್ಷ ನೀಲಪ್ಪ ಹತ್ತಿ ಮಾತನಾಡಿ, ಪರಿಸರ ಸಂರಕ್ಷಣೆಯಲ್ಲಿಎಲ್ಲರ ಪಾತ್ರವಿದೆ ಎನ್ನುವ ಅರಿವು ಇಲಾಖೆಗಳು ಮೂಡಿಸುತ್ತಿದ್ದು, ಪರಿಸರ ರಕ್ಷಣೆ ಮಾಡುವ ನಿಟ್ಟಿನಲ್ಲಿಖಾಲಿ ಜಾಗಗಳಲ್ಲಿಸಸಿ ನೆಟ್ಟು ಅವುಗಳನ್ನು ಪಾಲನೆ ಪೋಷಣೆ ಮಾಡಬೇಕು ಎಂದರು.

ಪಿಎಸ್‌ಐ ಶಿವಯೋಗಿ ಲೋಹಾರ, ಶಿವಾನಂದ ಕಾರಜೋಳ, ಎಪಿಎಂಸಿ ಕಾರ್ಯದರ್ಶಿ ಎನ್‌.ಎ.ಲಕ್ಕುಂಡಿ, ಪುರಸಭೆ ಮುಖ್ಯಾಧಿಕಾರಿ ಆರ್‌.ಎಂ.ಪಾಟೀಲ, ಬಿಜೆಪಿ ಮಂಡಳ ಅಧ್ಯಕ್ಷ ಫಕ್ಕೀರೇಶ ರಟ್ಟಿಹಳ್ಳಿ, ಮಹೇಶ ಲಮಾಣಿ, ಗಂಗಾಧರ ಮೆಣಸಿನಕಾಯಿ, ಪುರಸಭೆ ಸದಸ್ಯೆ ವಾಣಿ ನೀಲಪ್ಪ ಹತ್ತಿ, ನೀಲಪ್ಪ ಕರ್ಜೆಕಣ್ಣವರ, ದುಂಡೇಶ ಕೊಟಗಿ, ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ