ಆ್ಯಪ್ನಗರ

ಕೊರೊನಾ ಭೀತಿಯಲ್ಲೂ ಕೃಷಿ ಚಟುವಟಿಕೆ

​ಗದಗ: ಕೊರೊನಾ ಭೀತಿ ಮಧ್ಯೆಯೂ ಜಿಲ್ಲೆಯಲ್ಲಿಕೃಷಿ ಚಟುವಟಿಕೆ ಗರಿಗೆದರಿದ್ದು, ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳ ಬಿತ್ತನೆ ಕಾರ್ಯದಲ್ಲಿರೈತರು ಮಗ್ನರಾಗಿದ್ದಾರೆ. ರಾಜ್ಯಕ್ಕೆ ಮುಂಗಾರು ಪ್ರವೇಶಕ್ಕೂ ಮುನ್ನವೇ ಜಿಲ್ಲೆಯಲ್ಲಿಸುರಿದ ಮಳೆಯಿಂದ ಭೂಮಿ ತೆವಗೊಂಡು ಕೃಷಿ ಚಟುವಟಿಕೆ ಆರಂಭವಾಗಿದೆ.

Vijaya Karnataka 4 Jun 2020, 5:00 am
ಸಲೀಮ್‌ ಬಳಬಟ್ಟಿ
Vijaya Karnataka Web agricultural activity in the corona phobia
ಕೊರೊನಾ ಭೀತಿಯಲ್ಲೂ ಕೃಷಿ ಚಟುವಟಿಕೆ

ಗದಗ: ಕೊರೊನಾ ಭೀತಿ ಮಧ್ಯೆಯೂ ಜಿಲ್ಲೆಯಲ್ಲಿಕೃಷಿ ಚಟುವಟಿಕೆ ಗರಿಗೆದರಿದ್ದು, ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳ ಬಿತ್ತನೆ ಕಾರ್ಯದಲ್ಲಿರೈತರು ಮಗ್ನರಾಗಿದ್ದಾರೆ. ರಾಜ್ಯಕ್ಕೆ ಮುಂಗಾರು ಪ್ರವೇಶಕ್ಕೂ ಮುನ್ನವೇ ಜಿಲ್ಲೆಯಲ್ಲಿಸುರಿದ ಮಳೆಯಿಂದ ಭೂಮಿ ತೆವಗೊಂಡು ಕೃಷಿ ಚಟುವಟಿಕೆ ಆರಂಭವಾಗಿದೆ. ಅದರಲ್ಲೂರಾಜ್ಯದಲ್ಲಿಅತಿ ಹೆಚ್ಚು ಹೆಸರು ಬೆಳೆಯುವ ಪ್ರದೇಶಗಳಲ್ಲಿಒಂದಾಗಿರುವ ಗದಗ ಜಿಲ್ಲೆಯಲ್ಲಿಹೆಸರು ಬಿತ್ತನೆ ವೇಗ ಪಡೆದುಕೊಂಡಿದೆ.

21 ಸಾವಿರ ಹೆಕ್ಟೇರ್‌ ಬಿತ್ತನೆ
ಜಿಲ್ಲೆಯಲ್ಲಿಈ ಬಾರಿ 1 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿಹೆಸರು ಬಿತ್ತನೆ ಗುರಿ ಹೊಂದಲಾಗಿದೆ. ಅದರಂತೆ ಈವರೆಗೆ 21160 ಹೆಕ್ಟೇರ್‌ ಬಿತ್ತನೆ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ. ಜೂನ್‌ 5ರ ನಂತರ ಮುಂಗಾರು ರಾಜ್ಯವನ್ನು ಪ್ರವೇಶಿಸಲಿದ್ದು, ಅಲ್ಲಿಯವರೆಗೆ ಶೇ. 50 ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಳ್ಳುವ ವಿಶ್ವಾಸವಿದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

ಬಿತ್ತನೆ ಚುರುಕು
ಹೆಸರು ಹೊರತುಪಡಿಸಿ ಜಿಲ್ಲೆಯಲ್ಲಿಇನ್ನುಳಿದ ಬೆಳೆಗಳ ಬಿತ್ತನೆಯೂ ಚುರುಕಿನಿಂದ ನಡೆಯುತ್ತಿದೆ. ಈ ಬಾರಿ 82 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿಮೆಕ್ಕೆಜೋಳ ಬೆಳೆಯುವ ಗುರಿಯಿದೆ. ಆ ಪೈಕಿ 1170 ಹೆಕ್ಟೇರ್‌ ಬಿತ್ತನೆ ಪೂರ್ಣಗಂಡಿದೆ. ಶೇಂಗಾ 34000 ಹೆಕ್ಟೇರ್‌ ಬಿತ್ತನೆ ಗುರಿ ಹೊಂದಿದ್ದು, ಈವರೆಗೆ 2015 ಹೆಕ್ಟೇರ್‌ ಬಿತ್ತನೆಯಾಗಿದೆ. ಸೂರ್ಯಕಾಂತಿ 14 ಸಾವಿರ ಹೆಕ್ಟೇರ್‌ ಬಿತ್ತನೆ ಗುರಿ ಪೈಕಿ 127 ಹೆಕ್ಟೇರ್‌ ಮಾತ್ರ ಬಿತ್ತನೆಯಾಗಿದೆ. ಅದೇ ರೀತಿ ಹತ್ತಿ 36 ಸಾವಿರ ಹೆಕ್ಟೇರ್‌ ಬಿತ್ತನೆ ಗುರಿ ಪೈಕಿ 3229 ಹೆಕ್ಟೇರ್‌ ಬಿತ್ತನೆಯಾಗಿರುವುದು ಕೃಷಿ ಚಟುವಟಿಕೆ ಚುರುಕುಗೊಂಡಿರುವುದಕ್ಕೆ ಸಾಕ್ಷಿಯಾಗಿದೆ.

ಬೀಜದ ಕೊರತೆಯಿಲ್ಲ
ಜಿಲ್ಲೆಯಲ್ಲಿಒಟ್ಟು 10600 ಕ್ವಿಂಟಲ್‌ ಬಿತ್ತನೆ ಬೀಜದ ಬೇಡಿಕೆಯಿದೆ. ಆ ಪೈಕಿ 5800 ಕ್ವಿಂಟಲ್‌ ದಾಸ್ತಾನು ಇದೆ. 1300 ಕ್ವಿಂಟಲ್‌ ಬೀಜ ಮಾರಾಟವಾಗಿದೆ. 2500 ಕ್ವಿಂಟಲ್‌ ಹೆಸರು ಬೀಜದ ಬೇಡಿಕೆಯಿದೆ. 1 ಸಾವಿರ ಕ್ವಿಂಟಲ್‌ ಮಾರಾಟವಾಗಿದೆ. ಒಟ್ಟಾರೆ ಈ ಬಾರಿ ಬೀಜ, ರಸಗೊಬ್ಬರ ಕೊರತೆಯಾಗುವುದಿಲ್ಲಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

ಹೆಸರು ಬೀಜದ ಕೊರತೆ
ಹೆಸರು ಜಿಲ್ಲೆಯ ಪ್ರಮುಖ ಬೆಳೆ. ಆದರೆ, ಈ ಬಾರಿ ಬೀಜದ ಕೊರತೆ ಎದುರಾಗಿದೆ. ಸರಕಾರ ಕೃಷಿ ಇಲಾಖೆ ಮೂಲಕ 5 ಎಕರೆಗಿಂತ ಕಡಿಮೆ ಅಥವಾ 5 ಎಕರೆ ಪ್ರದೇಶಕ್ಕೆ ಮಾತ್ರ ಹೆಸರು ಬೀಜ ಪೂರೈಕೆ ಮಾಡುತ್ತಿದ್ದಾರೆ. ಕೆಲ ರೈತರು 10 ಎಕರೆ, 20 ಎಕರೆ ಹೆಸರು ಬಿತ್ತುವ ಯೋಚನೆಯಲ್ಲಿದ್ದಾರೆ. ಅಂಥ ರೈತರಿಗೆ ಹೆಸರು ಬಿತ್ತನೆ ಬೀಜ ಕೃಷಿ ಇಲಾಖೆ ಮೂಲಕ ದೊರೆಯುತ್ತಿಲ್ಲ. ಅಲ್ಲದೇ ಖಾಸಗಿ ಬೀಜ, ರಸಗೊಬ್ಬರ ಅಂಗಡಿಗಳಲ್ಲೂಬೀಜ ಸಿಗುತ್ತಿಲ್ಲಎಂದು ಆರೋಪಿಸುತ್ತಾರೆ ಪ್ರಗತಿಪರ ರೈತ ನಾಗರಾಜ ಕುಲಕರ್ಣಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ