ಆ್ಯಪ್ನಗರ

ಅಕ್ಷ ರ ದಾಸೋಹ ಸಿಬ್ಬಂದಿಗೆ ಊಟೋಪಚಾರ ಹೊಣೆ

ಮುಂಡರಗಿ: ಚುನಾವಣೆ ಕರ್ತವ್ಯ ನಿರತ ಪೊಲೀಸ್‌ ಸಿಬ್ಬಂದಿಗೆ ಅನುಕೂಲವಾಗುವಂತೆ ರೂಪಿಸಿದ ಮೊಬೈಲ್‌ ಶೌಚಾಲಯ ವ್ಯವಸ್ಥೆ ಬಗ್ಗೆ ಇತ್ತೀಚೆಗೆ ಓದಿದ್ದೆವು. ಗದಗ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಮತಗಟ್ಟೆ ಸಿಬ್ಬಂದಿಗೂ 'ಸಹಿ' ಸುದ್ದಿ ಬಂದಿದೆ.

Vijaya Karnataka 11 Apr 2018, 5:00 am
ಮುಂಡರಗಿ: ಚುನಾವಣೆ ಕರ್ತವ್ಯ ನಿರತ ಪೊಲೀಸ್‌ ಸಿಬ್ಬಂದಿಗೆ ಅನುಕೂಲವಾಗುವಂತೆ ರೂಪಿಸಿದ ಮೊಬೈಲ್‌ ಶೌಚಾಲಯ ವ್ಯವಸ್ಥೆ ಬಗ್ಗೆ ಇತ್ತೀಚೆಗೆ ಓದಿದ್ದೆವು. ಗದಗ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಮತಗಟ್ಟೆ ಸಿಬ್ಬಂದಿಗೂ 'ಸಹಿ' ಸುದ್ದಿ ಬಂದಿದೆ.
Vijaya Karnataka Web akshays dasoha staff are responsible for the operation
ಅಕ್ಷ ರ ದಾಸೋಹ ಸಿಬ್ಬಂದಿಗೆ ಊಟೋಪಚಾರ ಹೊಣೆ


ಮತಗಟ್ಟೆ ಸಿಬ್ಬಂದಿಗೆ ಚಹಾ, ಉಪಹಾರ, ಸಹಿ ಊಟ ಹಾಗೂ ಬೆಳಗ್ಗೆ ಮೌತ್‌ ಪ್ರೆಶ್‌ಗೆ ಬ್ರಷ್‌, ಪೇಸ್ಟ್‌ ಪೂರೈಸುವ ಹೊಣೆಯನ್ನು ಅಕ್ಷ ರ ದಾಸೋಹ ವಿಭಾಗಕ್ಕೆ ವಹಿಸಲಾಗಿದೆ. ಇದರಿಂದ ಬೇಸಿಗೆಯಲ್ಲಿ ಚುನಾವಣೆ ಕರ್ತವ್ಯ ನಿರತ ಸಿಬ್ಬಂದಿಗೆ ಅನ್ನ ನೀರು ಇಲ್ಲದೆ ಪರದಾಡು ಸ್ಥಿತಿ ದೂರಾಗಲಿದೆ.

ಈ ಸಂಬಂಧ ಎಲ್ಲ ತಾಲೂಕಿನ ಅಕ್ಷ ರ ದಾಸೋಹ ಸಹಾಯಕ ನಿರ್ದೇಶಕರು ಸಭೆ ನಡೆಸಿ ಸೂಕ್ತ ಏರ್ಪಾಡುಗಳನ್ನು ಕೈಗೊಳ್ಳುತ್ತಿದ್ದಾರೆ. ಜಿಲ್ಲಾ ಚುನಾವಣೆ ಅಧಿಕಾರಿಯೂ ಆಗಿರುವ ಜಿಲ್ಲಾಧಿಧಿಕಾರಿ ಆದೇಶದ ಮೇರೆಗೆ ಶಾಲೆ ಮುಖ್ಯಸ್ಥರು ಮತ್ತು ಅಡುಗೆ ಸಿಬ್ಬಂದಿ ಹಾಗೂ ಮತಗಟ್ಟೆ ಮಟ್ಟದ ಅಧಿಕಾರಿಗಳ (ಬಿಎಲ್‌ಒ) ಸಭೆ ನಡೆಸಿದ್ದಾರೆ. ಚುನಾವಣೆ ಕರ್ತವ್ಯ ನಿರತ ಸಿಬ್ಬಂದಿಗೆ ಆಹಾರ ಪೂರೈಸುವ ಕುರಿತು ಸೂಚನೆಗಳನ್ನು ನೀಡಿದ್ದಾರೆ.

ಮುಜುಗರ ತಪ್ಪಿಸಿಕೊಂಡ ಸಿಬ್ಬಂದಿ: ಚುನಾವಣೆ ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿಗೆ ಸ್ಥಳೀಯ ರಾಜಕೀಯ ಮುಖಂಡರು, ಕಾರ್ಯಕರ್ತರು ಊಟೋಪಚಾರ ವ್ಯವಸ್ಥೆ ಮಾಡುತ್ತಿದ್ದರು. ಈ ವೇಳೆ ಒಲ್ಲದ ಮನಸ್ಸಿನಿಂದ ಅನಿವಾರ್ಯವಾಗಿ ಅದನ್ನು ಸ್ವೀಕರಿಸಬೇಕೇ? ಬೇಡಬೇಕೇ? ಎಂಬ ಗೊಂದಲಕ್ಕೆ ಬೀಳುತ್ತಿದ್ದರು. ಕೆಲ ಸಿಬ್ಬಂದಿ ಅಟೆಂಡರ್‌ ಅವರಿಂದ ಪಾರ್ಸೆಲ್‌ ತರಿಸಿಕೊಂಡು ಸೇವಿಸಬೇಕಿತ್ತು. ಕೆಲ ಗ್ರಾಮೀಣ ಭಾಗಗಳಲ್ಲಿ ಹೋಟೆಲ್‌ ಇಲ್ಲದೆಯೂ ತೊಂದರೆ ಅನುಭವಿಸುವಂತಹ ವಾತಾವರಣ ಇದೆ. ಅಕ್ಷ ರ ದಾಸೋಹದ ಊಟದ ವ್ಯವಸ್ಥೆಯಿಂದ ಚುನಾವಣೆ ಸಿಬ್ಬಂದಿ ಗದಗ ಜಿಲ್ಲೆಯಲ್ಲಿ ನಿರಾಳರಾಗುವಂತಾಗಿದೆ.

ಏನೇನು ಕೊಡ್ತಾರೆ..: ಮೇ 11: ರಾತ್ರಿ ಊಟ, ಮೇ 12: ಬೆಳಗ್ಗೆ ಪ್ರೆಶ್‌ ಆಗಲು ಪೇಸ್ಟ್‌, ಬ್ರಷ್‌, ಕೊಬ್ಬರಿ ಎಣ್ಣೆ, ಚಹಾ ಮತ್ತು ಉಪಹಾರ, ಮಧ್ಯಾಹ್ನ ಸಿಹಿ ಊಟ, ಸಂಜೆ 4 ಕ್ಕೆ ಬಿಸ್ಕತ್‌ ಹಾಗೂ ಚಹಾ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ