ಆ್ಯಪ್ನಗರ

4 ರಿಂದ ಪುಲಿಗೆರೆ ಉತ್ಸವ

ಲಕ್ಷ್ಮೇಶ್ವರ : ಪಟ್ಟಣದ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಬೆಂಗಳೂರಿನ ಇನ್ಫೋಸಿಸ್‌ ಪ್ರತಿಷ್ಠಾನದಿಂದ ಶ್ರೀ ಸೋಮೇಶ್ವರ ದೇವಸ್ಥಾನ ಭಕ್ತರ ಸೇವಾ ಟ್ರಸ್ಟ್‌ ಹಾಗೂ ಭಾರತೀಯ ವಿದ್ಯಾಭವನ ಸಹಯೋಗದಲ್ಲಿ ಜ 4, 5 ಮತ್ತು 6ರಂದು ಪುಲಿಗೆರೆ ಉತ್ಸವ ಸಂಗೀತ, ನೃತ್ಯ, ಚಿತ್ರ ಸಂಭ್ರಮ ಕಾರ್ಯಕ್ರಮ ನಡೆಯಲಿವೆ ಎಂದು ಟ್ರಸ್ಟ್‌ ಅಧ್ಯಕ್ಷ ಶಿವಣ್ಣ ನೆಲವಿಗಿ ಹೇಳಿದರು.

Vijaya Karnataka 1 Jan 2019, 5:00 am
ಲಕ್ಷ್ಮೇಶ್ವರ : ಪಟ್ಟಣದ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಬೆಂಗಳೂರಿನ ಇನ್ಫೋಸಿಸ್‌ ಪ್ರತಿಷ್ಠಾನದಿಂದ ಶ್ರೀ ಸೋಮೇಶ್ವರ ದೇವಸ್ಥಾನ ಭಕ್ತರ ಸೇವಾ ಟ್ರಸ್ಟ್‌ ಹಾಗೂ ಭಾರತೀಯ ವಿದ್ಯಾಭವನ ಸಹಯೋಗದಲ್ಲಿ ಜ 4, 5 ಮತ್ತು 6ರಂದು ಪುಲಿಗೆರೆ ಉತ್ಸವ ಸಂಗೀತ, ನೃತ್ಯ, ಚಿತ್ರ ಸಂಭ್ರಮ ಕಾರ್ಯಕ್ರಮ ನಡೆಯಲಿವೆ ಎಂದು ಟ್ರಸ್ಟ್‌ ಅಧ್ಯಕ್ಷ ಶಿವಣ್ಣ ನೆಲವಿಗಿ ಹೇಳಿದರು.
Vijaya Karnataka Web news/gadaga
4 ರಿಂದ ಪುಲಿಗೆರೆ ಉತ್ಸವ

ಅವರು ಪಟ್ಟಣದಲ್ಲಿ ಪುಲಿಗೆರೆ ಉತ್ಸವ ಕುರಿತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, 3 ದಿನಗಳ ಕಾಲ ನಡೆಯುವ ಕಾರ್ಯಕ್ರಮ ವ್ಯವಸ್ಥಿತವಾಗಿ ನಡೆಸುವ ಉದ್ದೇಶದಿಂದ ವಿವಿಧ ಸಮಿತಿ ರಚಿಸಿ ಜವಾಬ್ದಾರಿ ನೀಡಲಾಗಿದೆ. ಪುಲಿಗೆರೆ ಸಂಗೀತೋತ್ಸವದಲ್ಲಿ ರಾಷ್ಟ್ರಮಟ್ಟದ ಶ್ರೇಷ್ಠ ಕಲಾವಿದರು, ಸಂಗೀತಕಾರರು, ನೃತ್ಯಪಟುಗಳು ಅದ್ಬುತವಾದ ಕಲಾ ಪ್ರದರ್ಶನ ನೀಡಲಿದ್ದಾರೆ. ಬರುವ ಕಲಾವಿದರಿಗೆ ಊಟೋಪಚಾರ, ವಸತಿ, ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಪೂರ್ವ ಸಿದ್ಧತೆ ಮಾಡಲಾಗಿದೆ ಎಂದರು. ಜ.4ರಂದು ಬೆಳಿಗ್ಗೆ 6ಕ್ಕೆ ಇನ್ಫೋಸಿಸ್‌ನ ಸಿಇಒ ಮತ್ತು ಎಂಡಿ ಅನಂತ ರಾಧಾಕೃಷ್ಣನ್‌ ಅವರು ಪುಲಿಗೆರೆ ಉತ್ಸವಕ್ಕೆ ಚಾಲನೆ ನೀಡುವರು. ಬೆಳಗ್ಗೆ 6.30ಕ್ಕೆ ಉದಯರಾಗ-1 ಸಂಗೀತ ಕಾರ್ಯಕ್ರಮ ನೆರವೇರುವುದು. ಅಂದು ಮಧ್ಯಾಹ್ನ 3ಕ್ಕೆ ಬಾದಾಮಿ ಜಾನಪದ ಹಲಗೆ ಮೇಳ ಮತ್ತು ಸಕಲ ವಾಧ್ಯವೈಭವಗಳೊಂದಿಗೆ ಶ್ರೀಸೋಮೇಶ್ವರ ದೇವರ ಪಲ್ಲಕ್ಕಿ ಉತ್ಸವ ಜರುಗುವುದು. ಬಳಿಕ ಸಂಜೆ 6ಕ್ಕೆ ಸಂಗೀತ, ನಾಟ್ಯ ಕಾರ್ಯಕ್ರಮ ಜರುಗುವುದು. ಜ.5 ಮತ್ತು 6ರಂದು ನಿತ್ಯ ಸಂಜೆ 6.30 ರಿಂದ ಮತ್ತು ಸಂಧ್ಯಾಕಾಲ 6ರಿಂದ ಸಂಗೀತ, ಸಂಜೆ ನೃತ್ಯ ಕಲಾವಿದರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ