ಆ್ಯಪ್ನಗರ

ಸಭೆಗೆ ಸಂಪೂರ್ಣ ಮಾಹಿತಿ ನೀಡಿ

ಮುಂಡರಗಿ : ಇಲಾಖೆಗೆ ಸಂಬಂಧಿಸಿದ ಏನೇ ಕೇಳಿದರೂ ಸಂಪೂರ್ಣ ಮಾಹಿತಿ ನೀಡಬೇಕು ಎಂದು ತಾಪಂ ಅಧ್ಯಕ್ಷೆ ರೇಣುಕಾ ಕೊರ್ಲಹಳ್ಳಿ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿ, ಸಭೆಗೆ ಸಂಪೂರ್ಣ ಮಾಹಿತಿ ನೀಡುವಂತೆ ಆದೇಶಿಸಿದರು.

Vijaya Karnataka 12 Jun 2020, 5:00 am
ಮುಂಡರಗಿ : ಇಲಾಖೆಗೆ ಸಂಬಂಧಿಸಿದ ಏನೇ ಕೇಳಿದರೂ ಸಂಪೂರ್ಣ ಮಾಹಿತಿ ನೀಡಬೇಕು ಎಂದು ತಾಪಂ ಅಧ್ಯಕ್ಷೆ ರೇಣುಕಾ ಕೊರ್ಲಹಳ್ಳಿ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿ, ಸಭೆಗೆ ಸಂಪೂರ್ಣ ಮಾಹಿತಿ ನೀಡುವಂತೆ ಆದೇಶಿಸಿದರು.
Vijaya Karnataka Web news/gadaga
ಸಭೆಗೆ ಸಂಪೂರ್ಣ ಮಾಹಿತಿ ನೀಡಿ


ಇಲ್ಲಿನ ಸಾಮರ್ಥ್ಯ ಸೌಧದಲ್ಲಿನಡೆದ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿಕಂದಾಯ ಇಲಾಖೆಗೆ ಸಂಬಂಧಿಸಿದ ವಿಷಯಗಳ ಕುರಿತು ನಡೆದ ಚರ್ಚೆಯಲ್ಲಿಅವರು ಮಾತನಾಡಿ, ಟಾಸ್ಕ್‌ಫೋರ್ಸ್‌ ಸಭೆಗೆ ಸಂಬಂಧಿಸಿದ್ದು, ಬೆಳೆಹಾನಿ ಪರಿಹಾರ ಕುರಿತು ಏನೇ ವಿಷಯ ಇದ್ದರೂ ಸರಿಯಾಗಿ ಮಾಹಿತಿ ನೀಡಬೇಕು ಎಂದರು.

ನಂತರ ಕೊರ್ಲಹಳ್ಳಿ ಸದಸ್ಯ ರುದ್ರಗೌಡ ಪಾಟೀಲ, ''ತುಂಗಭದ್ರಾ ನದಿ ತೀರದ ಭಾಗದಲ್ಲಿಈವರೆಗೆ ಮರಳು ಗುತ್ತಿಗೆ ಪಡೆದಿರುವ ಮರಳು ಸಂಗ್ರಹ ಘಟಕ ಎಷ್ಟಿವೆ. ಅಕ್ರಮ ಮರಳು ಸಂಗ್ರಹ ಮಾಡಿದವರ ಮೇಲೆ ಟಾಸ್ಕ್‌ಫೋರ್ಸ್‌ ಕಮೀಟಿಯಿಂದ ಯಾವ ರೀತಿ ಕ್ರಮ ಕೈಗೊಂಡಿದ್ದೀರಿ?'' ಎಂದು ಶಿರಸ್ತೇದಾರ ಎಸ್‌.ಎಸ್‌.ಬಿಚ್ಚಾಲಿ ಅವರನ್ನು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಬಿಚ್ಚಾಲಿ ''ಫಾಸ್ಕ್‌ಫೋರ್ಸ್‌ ಸಭೆಯಲ್ಲಿಅಕ್ರಮ ಮರಳು ಗಣಿಗಾರಿಕೆ ತಡೆಯುವ ಕುರಿತು ಚರ್ಚಿಸಲಾಗಿದೆ. ಈ ಕುರಿತು ಸಂಪೂರ್ಣ ಮಾಹಿತಿ ನೀಡಲಾಗುತ್ತದೆ'' ಎಂದು ತಿಳಿಸಿದರು.

''ತುಂಗಭದ್ರಾ ನದಿ ಭಾಗದ ಮರಳು ಸಂಗ್ರಹ ಘಟಕಗಳಿಂದ ಆಯಾ ಭಾಗದ ಗ್ರಾಪಂಗೆ ರಾಜಧನ ತುಂಬಬೇಕು. ಆದರೆ ಕಳೆದ 3 ವರ್ಷದಿಂದ ಸರಕಾರಕ್ಕೆ ಯಾವುದೇ ಹಣ ತುಂಬಿಲ್ಲ. ಹೀಗಾಗಿ ಈ ಬಗ್ಗೆ ಕ್ರಮ ಜರುಗಿಸಬೇಕು ಹಾಗೂ ಹಣ ತುಂಬಿಸಬೇಕು'' ಎಂದು ರುದ್ರಗೌಡ ಪಾಟೀಲ ತಿಳಿಸಿದರು.

ವೈದ್ಯರಿಲ್ಲ, ಸ್ವಚ್ಛತೆ ಮರೀಚಿಕೆ : ಹಿರೇವಡ್ಡಟ್ಟಿ ಆರೋಗ್ಯ ಕೇಂದ್ರದಲ್ಲಿವೈದ್ಯರಿಲ್ಲ. ಸ್ವಚ್ಛತೆ ಮರೀಚಿಕೆಯಾಗಿದೆ. ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ತಾಪಂ ಸದಸ್ಯ ವೆಂಕಪ್ಪ ಬಳ್ಳಾರಿ ಅವರು ಆರೋಗ್ಯ ವೈದ್ಯಾಧಿಕಾರಿ ಡಾ.ಬಸವರಾಜ ಅವರನ್ನು ಪ್ರಶ್ನಿಸಿದರು. ಆಗ ''ವಿಜಯಪುರ ಜಿಲ್ಲೆಯಲ್ಲಿಕರೊನಾ ಪ್ರಕರಣ ಹೆಚ್ಚಾಗಿ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿನಮ್ಮ ಭಾಗದಿಂದ ಜಿಲ್ಲಾಧಿಕಾರಿ ಆದೇಶ ಮೇರೆಗೆ ಹಿರೇವಡ್ಡಟ್ಟಿ ವೈದ್ಯರು ಸೇರಿ ಕೆಲ ಸಿಬ್ಬಂದಿಯನ್ನು ಕಳುಹಿಸಲಾಗಿದೆ. ಹಿರೇವಡ್ಡಟ್ಟಿಗೆ ಬೇರೆ ಕೇಂದ್ರದ ವೈದ್ಯರನ್ನು ನೇಮಿಸಲಾಗಿದೆ. ಸ್ವಚ್ಛತೆಗೆ ಆದ್ಯತೆ ನೀಡುತ್ತೇವೆ'' ಎಂದು ಡಾ.ಬಸವರಾಜ ತಿಳಿಸಿದರು.

ಸಮೀಕ್ಷೆ ಬಾಕಿ : ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ವೈ.ಎಚ್‌.ಜಾಲವಾಡಗಿ ''ಅಕಾಲಿಕವಾಗಿ ನಷ್ಟವಾದ ಹೂವು ಬೆಳೆಗಾರರಿಗೆ ಹೆಕ್ಟೇರ್‌ಗೆ 25 ಸಾವಿರ, ಹಣ್ಣು, ತರಕಾರಿ ಬೆಳೆ ನಷ್ಟವಾದರೆ ಹೆಕ್ಟೇರ್‌ಗೆ 15 ಸಾವಿರ ರೂ. ಪರಿಹಾರ ನೀಡುವ ಕುರಿತು ಸಮೀಕ್ಷೆಯನ್ನು ಮಾಡಲಾಗುತ್ತಿದೆ. ಸಮೀಕ್ಷೆಯನ್ನು ಕದಾಂಪೂರ, ಡೋಣಿ, ಡಂಬಳದಲ್ಲಿಮಾಡುವುದು ಬಾಕಿ ಇದೆ'' ಎಂದರು.

ಸಭೆಯಲ್ಲಿಬಿಇಒ ಗಂಗಾಧರ ಅಣ್ಣಿಗೇರಿ, ಹಿಂದುಳಿದ ವರ್ಗಗಳ ಇಲಾಖೆ ಡಾ.ಬಸವರಾಜ ಬಳ್ಳಾರಿ, ಪಶುಸಂಗೋಪನಾ ಇಲಾಖೆ, ಡಾ.ಎಸ್‌.ವಿ.ತಿಗರಿಮಠ, ಲೋಕೋಪಯೋಗಿ ಅಭಿಯಂತರ ಉಮಾಪತಿ ಶೆಟ್ಟರ್‌, ಸಮಾಜ ಕಲ್ಯಾಣ ಇಲಾಖೆ ಉದಯಕುಮಾರ ಎಲಿವಾಳ, ಜಿಪಂ ಅಭಿಯಂತರ ಡಿ.ರಮೇಶ, ವೈ.ಎಸ್‌.ಕುದರಿ, ನಾನಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ತಾಪಂ ಇಒ ಎಸ್‌.ಎಸ್‌.ಕಲ್ಮನಿ, ತಾಪಂ ಉಪಾಧ್ಯಕ್ಷೆ ಹೇಮಾವತಿ ಕನ್ನಾರಿ, ಕುಸುಮಾ ಮೇಟಿ, ಪುಷ್ಪಾ ಪಾಟೀಲ, ಲಲಿತಾ ಎಲಿಗಾರ, ಬಸಪ್ಪ ಮಲ್ಲನಾಯ್ಕರ, ಭರಮಪ್ಪ ನಾಗನೂರ, ತಿಪ್ಪವ್ವ ಕಾರಬಾರಿ ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ