ಆ್ಯಪ್ನಗರ

ಖಾಲಿ ಬಾಟಲಿ ನಂಬಿದವರೂ ಬೀದಿಪಾಲು

​ಗದಗ: ಮದ್ಯದ ಬಾಟಲಿ ಕೇವಲ ವ್ಯಸನಿಗಳು ಮತ್ತು ಅವರ ಕುಟುಂಬದವರ ಬದುಕನ್ನು ಮಾತ್ರವಲ್ಲ, ಬಾಟಲಿ ವ್ಯವಹಾರ ನಂಬಿಕೊಂಡಿದ್ದ ನೂರಾರು ಕುಟುಂಬಗಳನ್ನೂ ಬೀದಿಗೆ ತಳ್ಳಿದೆ.

Vijaya Karnataka 12 Oct 2019, 5:00 am
ಸಲೀಮ್‌ ಬಳಬಟ್ಟಿ
Vijaya Karnataka Web 10SALIM10B_25
ಮರುಬಳಕೆಗೆ ಸಿದ್ಧವಾಗಿರುವ ಖಾಲಿ ಬಾಟಲಿಗಳು.

ಗದಗ: ಮದ್ಯದ ಬಾಟಲಿ ಕೇವಲ ವ್ಯಸನಿಗಳು ಮತ್ತು ಅವರ ಕುಟುಂಬದವರ ಬದುಕನ್ನು ಮಾತ್ರವಲ್ಲ, ಬಾಟಲಿ ವ್ಯವಹಾರ ನಂಬಿಕೊಂಡಿದ್ದ ನೂರಾರು ಕುಟುಂಬಗಳನ್ನೂ ಬೀದಿಗೆ ತಳ್ಳಿದೆ.

ಗಾಜಿನ ಬಾಟಲಿಗಳಲ್ಲಿಬರುತ್ತಿದ್ದ ಮದ್ಯ ಈಗ ಟೆಟ್ರಾ ಪ್ಯಾಕ್‌ನಲ್ಲಿಬರುತ್ತಿದೆ. ಇದರಿಂದ ಖಾಲಿ ಬಾಟಲಿಗಳ ಸಂಗ್ರಹ ಮಾಡುವವರು, ಸ್ವಚ್ಛ ಮಾಡಿ ಮರುಬಳಕೆಗೆ ಕಳುಹಿಸುವ ಮಹಿಳಾ ಕಾರ್ಮಿಕರು, ಬಾಟಲಿ ಸಾಗಿಸುವ ವಾಹನ ಮಾಲೀಕರು, ಚಾಲಕರು...ಹೀಗೆ ಖಾಲಿ ಬಾಟಲಿ ನಂಬಿ ಬದುಕು ಕಂಡುಕೊಂಡವರೂ ಈಗ ದಿಕ್ಕೆಟ್ಟಿದ್ದಾರೆ.

ದಶಕಗಳಿಂದ ಖಾಲಿ ಬಾಟಲಿ ನಂಬಿಕೊಂಡು ಗದಗ ನಗರವೊಂದರಲ್ಲಿಯೇ 100ಕ್ಕೂ ಹೆಚ್ಚು ಕುಟುಂಬಗಳು ಜೀವನ ನಡೆಸುತ್ತಿದ್ದವು. ಎಂಟು ವರ್ಷಗಳಿಂದ ಈಚೆಗೆ ಬಾಟಲಿ ಜಾಗವನ್ನು ಟೆಟ್ರಾ ಪ್ಯಾಕ್‌ಗಳು ಅಕ್ರಮಿಸಿಕೊಂಡ ಕಾರಣ ಉದ್ಯೋಗ ಕಡಿತವಾಗಲು ಆರಂಭವಾಯಿತು. ಅಂತಿಮವಾಗಿ ಮೂರ್ನಾಲ್ಕು ಜನ ಮಾತ್ರ ಈಗಲೂ ಬಾಟಲಿ ಮೇಲೆಯೇ ಬದುಕು ಕಂಡುಕೊಳ್ಳುವ ಹೆಣಗಾಡುತ್ತಿದ್ದಾರೆ.

ಮಹಿಳೆಯರಿಗೆ ಉದ್ಯೋಗ ನಷ್ಟ
ಎಂಟು ವರ್ಷದ ಹಿಂದೆ ಗದಗ ಜಿಲ್ಲೆಯೊಂದರಲ್ಲೇ ಪ್ರತಿ ದಿನ ಒಂದು ಲಕ್ಷ ಖಾಲಿ ಕ್ವಾಟರ್‌ ಬಾಟಲಿಗಳನ್ನು ಸಂಗ್ರಹ ಮಾಡಿಕೊಂಡು ತರಲಾಗುತ್ತಿತ್ತು. ಎರಡ್ಮೂರು ವಾಹನಗಳ ಮೂಲಕ ಜಿಲ್ಲೆಯಲ್ಲಿಸಂಚರಿಸಿ ಮದ್ಯದಂಗಡಿಗಳು, ಖಾಲಿ ಬಾಟಲಿ ಸಂಗ್ರಹ ಮಾಡುವವರಿಂದ ಖರೀದಿಸಿ ತರಲಾಗುತ್ತಿತ್ತು. ಅಂಥ ಬಾಟಲಿಗಳನ್ನು 35ರಿಂದ 40 ಜನ ಮಹಿಳಾ ಕಾರ್ಮಿಕರು ನಿತ್ಯವೂ ಸ್ವಚ್ಛಗೊಳಿಸುತ್ತಿದ್ದರು. ಸರಿಯಾಗಿ ಪ್ಯಾಕ್‌ ಮಾಡಿ ಮತ್ತೆ ಮದ್ಯದ ಕಂಪನಿಗಳಿಗೆ ಕಳಿಸಲಾಗುತ್ತಿತ್ತು. ನೂರಾರು ಜನರಿಗೆ ಕೆಲಸ ಸಿಗುತ್ತಿತ್ತು. ಆದರೆ ಈಗ ನಿತ್ಯ ಒಂದು ಸಾವಿರ ಬಾಟಲಿಗಳು ಸಂಗ್ರಹ ಆಗುವುದು ಕಷ್ಟವಾಗಿದೆ. ಇನ್ನು ಕೆಲಸಗಾರರನ್ನು ಇಟ್ಟುಕೊಂಡು ಖಾಲಿ ಬಾಟಲಿ ಉದ್ಯೋಗ ನಡೆಸುವುದು ಹೇಗೆ ಎಂದು ಪ್ರಶ್ನಿಸುತ್ತಾರೆ ಬಾಟಲಿ ವ್ಯವಹಾರ ನಡೆಸುವ ಗುತ್ತಿಗೆದಾರರು.

ಅಗ್ಗದ ಮದ್ಯವೇ ಟಾರ್ಗೆಟ್‌
ಅಗ್ಗದ ಬೆಲೆಯ ವಿವಿಧ ಬ್ರಾಂಡ್‌ನ 180 ಎಂಎಲ್‌ ಮದ್ಯ ಮೊದಲೆಲ್ಲಗಾಜಿನ ಬಾಟಲಿಯಲ್ಲಿಬರುತ್ತಿದ್ದವು. ಮಧ್ಯಮ ಮತ್ತು ಬಡ ವರ್ಗದ ಜನ ಅಂಥ ಬ್ರಾಂಡ್‌ಗಳ ಕಾಯಂ ಗ್ರಾಹಕರು. ಆದರೆ ಈಚೆಗೆ ಮದ್ಯ ಟೆಟ್ರಾ ಪ್ಯಾಕ್‌ನಲ್ಲಿಬರಲು ಆರಂಭಿಸಿತು. ಸದ್ಯ ಬಿಯರ್‌ ಹೊರತುಪಡಿಸಿ, ಎಲ್ಲವೂ ಟೆಟ್ರಾ ಪ್ಯಾಕ್‌ನಲ್ಲಿಯೇ ಬರುತ್ತಿವೆ. ಹೀಗಾಗಿ ಖಾಲಿ ಬಾಟಲಿ ಉದ್ಯಮ ಖಾಲಿ ಖಾಲಿ ಆಗಿದೆ. ದುಬಾರಿ ಬೆಲೆಯ ಮದ್ಯ ಈಗಲೂ ಗಾಜಿನ ಬಾಟಲಿಯಲ್ಲಿಬರುತ್ತಿವೆ. ಆದರೆ ಅವು ಮರುಬಳಕೆ ಆಗುವುದಿಲ್ಲ. ಅವುಗಳನ್ನು ಯಾರೂ ಖರೀದಿಸುವುದಿಲ್ಲಎನ್ನುತ್ತಾರೆ 40 ವರ್ಷಗಳಿಂದ ಖಾಲಿ ಬಾಟಲಿ ವ್ಯವಹಾರ ನಡೆಸುತ್ತಿರುವ ಬಾಟ್ಲಿಬಾಬು (ಪಾಂಡುರಂಗಸಾ ಭಾಂಡಗೆ).

ಟೆಟ್ರಾ ಪ್ಯಾಕ್‌ ನಿಷೇಧಿಸಿ
ರಾಜ್ಯದಲ್ಲಿಮದ್ಯ ಮಾರಾಟ ನಿಷೇಧ ಮಾಡಲು ಸರಕಾರಕ್ಕೆ ಆಗದ ಕೆಲಸ. ಕನಿಷ್ಟ ಟೆಟ್ರಾ ಪ್ಯಾಕ್‌ಗಳನ್ನು ನಿಷೇಧಿಸಿ, ಮೊದಲಿನಂತೆ ಗಾಜಿನ ಬಾಟಲಿಯಲ್ಲಿಮದ್ಯ ಮಾರಾಟ ಮಾಡಲು ಆದೇಶ ಹೊರಡಿಸಬೇಕು. ಮಹಾರಾಷ್ಟ್ರದಲ್ಲಿಈಗಲೂ ಗಾಜಿನ ಬಾಟಲಿಯಲ್ಲೆಮದ್ಯ ಮಾರಾಟವಾಗುತ್ತಿದೆ. ಕರ್ನಾಟಕದಲ್ಲೂಅದೇ ಮಾದರಿ ಅನುಸರಿಸಬೇಕು ಎನ್ನುತ್ತಾರೆ ಖಾಲಿ ಬಾಟಲಿ ವ್ಯಾಪಾರಸ್ಥರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ