ಆ್ಯಪ್ನಗರ

ಬಂಗಾರಕ್ಕಿಂತ ಅನ್ನವೇ ಶ್ರೇಷ್ಠ

ನರಗುಂದ: ಚಿನ್ನಕ್ಕಿಂತ ಅನ್ನ ಶ್ರೇಷ್ಠವಾದದ್ದು, ಪ್ರತಿವರ್ಷ ಮನೆ-ಮನೆಗೆ ತೆರಳಿ ಅಕ್ಕಿ ಸಂಗ್ರಹಿಸಿ ಅದನ್ನು ಅನಾಥಾಶ್ರಮ, ನಿರ್ಗತಿಕರ ಕುಟೀರಗಳಿಗೆ ನೀಡುವ ಮೂಲಕ ಭಾರತೀಯ ಸಂಸ್ಕೃತಿ ಪರಂಪರೆ ಪ್ರತಿಬಿಂಬಿಸುತ್ತಿರುವ ಬೈಲಹೊಂಗಲದ ಕಲ್ಪವೃಕ್ಷ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಭೈರನಹಟ್ಟಿಯ ಶಾಂತಲಿಂಗ ಸ್ವಾಮಿಗಳು ಹೇಳಿದರು.

Vijaya Karnataka 22 Jan 2020, 5:00 am
ನರಗುಂದ: ಚಿನ್ನಕ್ಕಿಂತ ಅನ್ನ ಶ್ರೇಷ್ಠವಾದದ್ದು, ಪ್ರತಿವರ್ಷ ಮನೆ-ಮನೆಗೆ ತೆರಳಿ ಅಕ್ಕಿ ಸಂಗ್ರಹಿಸಿ ಅದನ್ನು ಅನಾಥಾಶ್ರಮ, ನಿರ್ಗತಿಕರ ಕುಟೀರಗಳಿಗೆ ನೀಡುವ ಮೂಲಕ ಭಾರತೀಯ ಸಂಸ್ಕೃತಿ ಪರಂಪರೆ ಪ್ರತಿಬಿಂಬಿಸುತ್ತಿರುವ ಬೈಲಹೊಂಗಲದ ಕಲ್ಪವೃಕ್ಷ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಭೈರನಹಟ್ಟಿಯ ಶಾಂತಲಿಂಗ ಸ್ವಾಮಿಗಳು ಹೇಳಿದರು.
Vijaya Karnataka Web anna is better than gold
ಬಂಗಾರಕ್ಕಿಂತ ಅನ್ನವೇ ಶ್ರೇಷ್ಠ


ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿಮಠದಲ್ಲಿಬೈಲಹೊಂಗಲದ ಎ.ವಿ.ಡಮ್ಮನಗಿ ಸಂಸ್ಥೆಯ ಕಲ್ಪವೃಕ್ಷ ಮಾದರಿ ಶಾಲೆಯಿಂದ ಮಠದ ದೊರೆಸ್ವಾಮಿ ಉಚಿತ ಪ್ರಸಾದ ನಿಲಯಕ್ಕೆ ಕೊಡಮಾಡಿದ 8 ಕ್ವಿಂಟಾಲ್‌ ಅಕ್ಕಿ ಸ್ವೀಕರಿಸಿ ಮಾತನಾಡಿದರು. ಮಾನವೀಯ ಮೌಲ್ಯಗಳು ನಶಿಸಿ ಹೋಗುತ್ತಿರುವ ಇಂದಿನ ದಿನದಲ್ಲಿ12 ನೇ ಶತಮಾನದ ಬಸವಾದಿ ಶಿವಶರಣರ ಕಾಯಕ ದಾಸೋಹದ ಪರಿಕಲ್ಪನೆಯಂತೆ ಶಿಕ್ಷಣದ ಜತೆಗೆ ಮೌಲ್ಯ ಶಿಕ್ಷಣ ನೀಡುವುದರ ಮೂಲಕ ವಿದ್ಯಾರ್ಥಿಗಳಲ್ಲಿಸಾಮಾಜಿಕ ಸೇವೆಯ ಮನೋಭಾವನೆ ಮೂಡಿಸುತ್ತಿರುವ ಕಲ್ಪವೃಕ್ಷ ಮಹಾವಿದ್ಯಾಲಯದ ಮುಖ್ಯಸ್ಥರ ಕಾರ್ಯ ಶ್ಲಾಘನೀಯ ಎಂದರು.

ಮಾರುತಿ ಶೆಲ್ಲಿಕೇರಿ ಮಾತನಾಡಿ, ಆಧುನಿಕ ಭರಾಟೆಯಲ್ಲಿನಶಿಸುತ್ತಿರುವ ಇಂದಿನ ದಿನಮಾನದಲ್ಲಿಮಕ್ಕಳಿಗೆ ವಿದ್ಯೆಯ ಜತೆಗೆ ಸಾಮಾಜಿಕ ಕಳಕಳಿ ಮೂಡಿಸುವುದು ಅತ್ಯಗತ್ಯ. ಸಮಾಜದಲ್ಲಿಮಠ ಮಾನ್ಯಗಳು ಬಡ ವಿದ್ಯಾರ್ಥಿಗಳಿಗೆ ಅನ್ನ-ಅರಿವು ಶಿಕ್ಷಣ ನೀಡುತ್ತಿವೆ. ಅಂತಹ ಸಂಸ್ಥೆಗಳಿಗೆ ನೆರವಾಗುವುದು ನಮ್ಮ ಶಾಲೆಯ ಉದ್ದೇಶವಾಗಿದೆ ಎಂದರು.

ಮಹೇಂದ್ರ ಹೆಗಡೆ ಮಾತನಾಡಿ, ವಿದ್ಯೆಗೆ ವಿನಯವೇ ಭೂಷಣ ಎಂಬಂತೆ ಮಕ್ಕಳಿಗೆ ಕೇವಲ ಶಿಕ್ಷಣ ನೀಡಿದರೆ ಸಾಲದು ಅವರಿಗೆ ಉತ್ತಮ ಸಂಸ್ಕೃತಿ ಮತ್ತು ಮೌಲ್ಯಯುತ ಶಿಕ್ಷಣ ನೀಡಬೇಕು ಎಂದರು. ವಿದ್ಯಾರ್ಥಿ ಚಿನ್ಮಯ ಮಾತನಾಡಿದರು. ಸಂತೋಷ ವನಿಕಿ, ಭಾರತಿ ಹುಲ್ಯಾಳ, ಲಿಂಗರಾಜ ಮೊರಬದ, ಭೀಮಪ್ಪ ಮನೇನಕೊಪ್ಪ ಉಪಸ್ಥಿತರಿದ್ದರು.ಮಹಾಂತೇಶ ಹಿರೇಮಠ ನಿರೂಪಿಸಿ,ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ