ಆ್ಯಪ್ನಗರ

ನೆರೆ ಪ್ರದೇಶದ ವ್ಯಾಪಾರಿಗಳಿಗೆ ನೀಡಲು ಮನವಿ

ಹೊಳೆಆಲೂರ: ಪ್ರವಾಹಕ್ಕೆ ಒಳಗಾದ ಗ್ರಾಮಗಳ ರೈತರ ಜತೆಗೆ ಇಲ್ಲಿನ ವಿವಿಧ ವ್ಯಾಪಾರಸ್ಥರು ಹಾನಿ ಅನುಭವಿಸಿದ್ದು,ಸೂಕ್ತ ಪರಿಶೀಲನೆ ಮಾಡಿ,ಅವರಿಗೂ ಪರಿಹಾರ ನೀಡಬೇಕು ಎಂದು ಹೊಳೆಆಲೂರ ತಾಲೂಕು ಹೋರಾಟ ಸಮಿತಿಯಿಂದ ಉಪ ತಹಸೀಲ್ದಾರಗೆ ಮನವಿ ಸಲ್ಲಿಸಲಾಯಿತು.

Vijaya Karnataka 11 Sep 2019, 5:00 am
ಹೊಳೆಆಲೂರ: ಪ್ರವಾಹಕ್ಕೆ ಒಳಗಾದ ಗ್ರಾಮಗಳ ರೈತರ ಜತೆಗೆ ಇಲ್ಲಿನ ವಿವಿಧ ವ್ಯಾಪಾರಸ್ಥರು ಹಾನಿ ಅನುಭವಿಸಿದ್ದು,ಸೂಕ್ತ ಪರಿಶೀಲನೆ ಮಾಡಿ,ಅವರಿಗೂ ಪರಿಹಾರ ನೀಡಬೇಕು ಎಂದು ಹೊಳೆಆಲೂರ ತಾಲೂಕು ಹೋರಾಟ ಸಮಿತಿಯಿಂದ ಉಪ ತಹಸೀಲ್ದಾರಗೆ ಮನವಿ ಸಲ್ಲಿಸಲಾಯಿತು.
Vijaya Karnataka Web appeal to the traders in the flood
ನೆರೆ ಪ್ರದೇಶದ ವ್ಯಾಪಾರಿಗಳಿಗೆ ನೀಡಲು ಮನವಿ


ವಾಣಿಜ್ಯೋಧ್ಯಮ ಸಂಸ್ಥೆಯ ಉಪಾಧ್ಯಕ್ಷ ಮಹೇಂದ್ರಗೌಡ ಪಾಟೀಲ ಮಾತನಾಡಿ ಮಲಪ್ರಭಾ ನದಿಯ ಪ್ರವಾಹಕ್ಕೆ ಇಲ್ಲಿನ ರೈತರ ಜತೆಗೆ ಇಲ್ಲಿನ ವ್ಯಾಪರಸ್ಥರು ಎಲ್ಲಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಆದ್ದರಿಂದ ಸರಕಾರ ಇಲ್ಲಿಹಾನಿಗೊಳಗಾದ ವಿವಿಧ ಅಂಗಡಿಗಳನ್ನು ಸಮೀಕ್ಷೆ ಮಾಡಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಕಾರ್ಯದರ್ಶಿ ಶ್ರೀಕಾಂತ ಲಮಾಣಿ,ಎಲ್ಲರಿಗೂ ಸಮವಾಗಿ ಪರಿಹಾರ ವಿತರಣೆ ಮಾಡಬೇಕು ಎಂದರು. ಉಪ ತಹಸೀಲ್ದಾರ ಆರ್‌.ಸಿ.ಬಾರಕೇರಿ ಮನವಿ ಸ್ವೀಕರಿದರು.

ಮೌಲಾಸಾಬ ಅಂಗಡಗೇರಿ, ಮೃಬು ಖಾಜಿ, ಮೌಲಾಸಾಬ ಗೋರವಬಕೊಳ್ಳ, ಮಾಯಪ್ಪ ಹಾಲನ್ನವರ, ವೀರಣ್ಣ ರೇಷ್ಮೆ, ಮಹಾತೇಶ ಕೊರೆಗಣ್ಣವರ, ಶಿವನಗೌಡ ಪಾಟೀಲ, ವೀರೇಶ ವಸ್ತ್ರದ, ರಾಜು ಶಿಸುನಾಳ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ