ಆ್ಯಪ್ನಗರ

ಕಾಯಂ ಪಿಡಿಒ ನೇಮಿಸಿ ಗ್ರಾಮ ಸಭೆ ನಡೆಸಿ

ಲಕ್ಕುಂಡಿ: ಗ್ರಾಮದಲ್ಲಿಸಮರ್ಪಕ ಕುಡಿಯುವ ನೀರು ಪೂರೈಕೆ ಹಾಗೂ ಕಾಯಂ ಪಿಡಿಒ ನೇಮಿಸಿ ಗ್ರಾಮ ಸಭೆ ನಡೆಸಬೇಕು ಎಂಬ ಗ್ರಾಮಸ್ಥರ ಒತ್ತಾಯಕ್ಕೆ ಮಣಿದ ಅಧಿಕಾರಿಗಳು ಗ್ರಾಮ ಸಭೆ ಮುಂದೂಡಿದರು.

Vijaya Karnataka 19 Nov 2020, 5:00 am
ಲಕ್ಕುಂಡಿ: ಗ್ರಾಮದಲ್ಲಿಸಮರ್ಪಕ ಕುಡಿಯುವ ನೀರು ಪೂರೈಕೆ ಹಾಗೂ ಕಾಯಂ ಪಿಡಿಒ ನೇಮಿಸಿ ಗ್ರಾಮ ಸಭೆ ನಡೆಸಬೇಕು ಎಂಬ ಗ್ರಾಮಸ್ಥರ ಒತ್ತಾಯಕ್ಕೆ ಮಣಿದ ಅಧಿಕಾರಿಗಳು ಗ್ರಾಮ ಸಭೆ ಮುಂದೂಡಿದರು.
Vijaya Karnataka Web 18LKD1_25
ಲಕ್ಕುಂಡಿಯಲ್ಲಿಗ್ರಾಮಸ್ಥರ ಒತ್ತಾಯದ ಮೇರೆಗೆ ಗ್ರಾಮ ಪಂಚಾಯಿತಿಯ ಗ್ರಾಮ ಸಭೆ ಮುಂದೂಡಲಾಯಿತು.


ಇಲ್ಲಿಯ ಅನ್ನದಾನೀಶ್ವರ ಸಮುದಾಯ ಭವನದಲ್ಲಿನಡೆದ ರಾಷ್ಟ್ರೀಯ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಹಾಗೂ 14 ನೇ ಹಣಕಾಸು ಯೋಜನೆಯಲ್ಲಿಜರುಗಿದ ಕಾಮಗಾರಿಗಳ ಸಾಮಾಜಿಕ ಲೆಕ್ಕ ಪರಿಶೋಧನೆ ಹಾಗೂ ನಮ್ಮ ಗ್ರಾಮ ನಮ್ಮ ಯೋಜನೆ ಸಿದ್ಧಪಡಿಸುವ ಗ್ರಾಮ ಸಭೆ ಸ್ವಾಗತ ಕಾರ್ಯಕ್ರಮ ಮುಗಿದ ತಕ್ಷಣವೇ ಗ್ರಾಮದಲ್ಲಿಕುಡಿಯುವ ನೀರು ಸರಬರಾಜಿನಲ್ಲಿಆಗುತ್ತಿರುವ ಸಮಸ್ಯೆ ಹಾಗೂ ಕಾಯಂ ಪಿಡಿಒ ನೇಮಿಸಿ ಗ್ರಾಮ ಸಭೆ ನಡೆಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಉದ್ಯೋಗ ಖಾತ್ರಿ ಯೋಜನೆಯಲ್ಲಿನಡೆದ ಕಾಮಗಾರಿಗಳ ಲೆಕ್ಕ ಪರಿಶೋಧನೆ ಕಾಮಗಾರಿ ನಡೆದಿರುವ ಜಮೀನು, ವಸತಿ, ಫಲಾನುಭವಿಗಳನ್ನು ಸಭೆಗೆ ಕರೆದು ಸಭೆ ನಡೆಸುವದರಿಂದ ಪರಿಶೋಧನೆ ಎಲ್ಲರಿಗೂ ತಿಳಿಯುತ್ತದೆ. ಗ್ರಾಮದಲ್ಲಿರುವ 26 ಸಾವಿರ ಜನಸಂಖ್ಯೆಯಲ್ಲಿ 26 ಜನರು ಗ್ರಾಮ ಸಭೆಯಲ್ಲಿಪಾಲ್ಗೊಂಡಿಲ್ಲ. ಅಧಿಕಾರಿಗಳ ನಿರ್ಲಕ್ಷತ್ರ್ಯಕ್ಕೆ ಜನರು ಬೇಸತ್ತಿದ್ದಾರೆ ಎಂದು ತಾಪಂ ಮಾಜಿ ಅಧ್ಯಕ್ಷ ಎಂ.ಎನ್‌.ಉಮಚಿಗಿ ತರಾಟೆಗೆ ತೆಗೆದುಕೊಂಡು ಸಭೆ ಮುಂದೂಡಬೇಕೆಂದರು.

ಕಳೆದ ಆರು ತಿಂಗಳಿಂದ ಪಂಚಾಯಿತಿಯಲ್ಲಿಕಾಯಂ ಪಿಡಿಒ ಇಲ್ಲದೇ ರೈತರ, ಬಡವರ ಕೆಲಸ ಆಗುತ್ತಿಲ್ಲ. ಈಗಿರುವ ಪಿಡಿಒ ಎರಡು ಪಂಚಾಯಿತಿಗೆ ಇದ್ದು, ನಮ್ಮ ಸಮಯಕ್ಕೆ ಸಿಗುತ್ತಿಲ್ಲ. ಆದ್ದರಿಂದ ಗ್ರಾಮ ಸಭೆ ಮುಂದೂಡಬೇಕೆಂದು ರುದ್ರಪ್ಪ ಮುಸ್ಕಿನಬಾವಿ, ಬಸಪ್ಪ ರೇವಡಿ ಒತ್ತಾಯಿಸಿದರು.

ಗ್ರಾಮಸಭೆ ಮುಂದೂಡಲು ಅಧಿಕಾರಿ ವರ್ಗವೇ ಮುಖ್ಯ ಕಾರಣವಾಗುತ್ತಿದ್ದು, ಜನರಿಗೆ ತಪ್ಪು ಮಾಹಿತಿ ನೀಡುತ್ತಾರೆ. ಸಮಸ್ಯೆಗಳಿಗೆ ಸ್ಪಂದಿಸಿ ಎಂದು ಪ್ರಸ್ತಾಪಿಸಿದಾಗ ಜನರು ಗಲಾಟೆ ಮಾಡಿದರೂ ಮೇಲಿನ ಅಧಿಕಾರಿಗಳಿಗೆ ತಿಳಿಸಿ ಗ್ರಾಮ ಸಭೆ ರದ್ದುಗೊಳಿಸುತ್ತಾರೆ. ಗ್ರಾಮದ ಹಲವಾರು ಸಮಸ್ಯೆ ಇತ್ಯರ್ಥವಾಗದೇ ಸಮಸ್ಯೆಗಳಾಗಿ ಉಳಿದಿವೆ. ಜಿಲ್ಲೆಯಲ್ಲಿಯೇ ದೊಡ್ಡ ಗ್ರಾಮ ಪಂಚಾಯಿತಿಗೆ ಕಾಯಂ ಅಧಿಕಾರಿಗಳನ್ನು ನೇಮಿಸಬೇಕೆಂದು ಅಂಬರೀಶ ಕರೆಕಲ್ಲ, ಉಸ್ಮಾನ ನಮಾಜಿ, ನಾಗಮ್ಮ ಹಾಲಿನವರ ಇತರರು ಆಗ್ರಹಿಸಿದರು.

ನೋಡಲ್‌ ಅಧಿಕಾರಿಯಾಗಿ ತಾಪಂ ಸಹಾಯಕ ನಿರ್ದೇಶಕ ತಿಪ್ಪಣ್ಣ ತಳಕಲ್ಲಆಗಮಿಸಿದ್ದರು. ಸಾಮಾಜಿಕ ಲೆಕ್ಕ ಪರಿಶೋಧನೆಯ ಸಂಯೋಜಕ ಸಂತೋಷ ಪಾಟೀಲ, ಕೃಷಿ ಅಧಿಕಾರಿ ಅಶೋಕ ಇಂಗಳಗಿ ಸಭೆಯಲ್ಲಿಇದ್ದರು.

ಆಡಳಿತ ಅಧಿಕಾರಿ ತರಾಟೆಗೆ
ಗ್ರಾಮ ಸಭೆಯ ಸ್ವಾಗತ ಕಾರ್ಯಕ್ರಮ ಮುಗಿದ ತಕ್ಷಣವೇ ಆಡಳಿತ ಅಧಿಕಾರಿ ಶೈಲೇಂದ್ರ ಬಿರಾದಾರ, ನಾನು ತಿಮ್ಮಾಪೂರ ಗ್ರಾಮ ಪಂಚಾಯಿತಿ ಗ್ರಾಮ ಸಭೆಯಲ್ಲಿಭಾಗವಹಿಸಬೇಕು ಎಂದು ಹೊರಡಲು ಮುಂದಾದಾಗ ತರಾಟೆಗೆ ತೆಗದುಕೊಂಡ ಗ್ರಾಮಸ್ಥರು ನಿಮ್ಮ ಅಧ್ಯಕ್ಷತೆಯಲ್ಲಿಯೇ ನಡೆಯುವ ಗ್ರಾಮ ಸಭೆ ನೀವೇ ಇಲ್ಲದ ಮೇಲೆ ಈ ಗ್ರಾಮ ಸಭೆ ಯಾಕೆ ನಡೆಸಬೇಕು ಎಂದು ಗಲಾಟೆ ಮಾಡಿದ ಪ್ರಸಂಗ ನಡೆಯಿತು. ಆಗ ಅಧಿಕಾರಿ ಸಭೆಗೆ ವಾಪಸ್‌ ಬಂದರು. ಕಾಯಂ ಪಿಡಿಒ ಹಾಗೂ ಕುಡಿಯುವ ನೀರಿನ ಸಮಸ್ಯೆಗಳ ಇತ್ಯರ್ಥದ ನಂತರ ಗ್ರಾಮ ಸಭೆ ನಡೆಸಲಾಗುವುದು. ಗ್ರಾಮ ಸಭೆ ಮುಂದೂಡಲಾಗಿದೆ ಎಂದು ಪಿಡಿಒ ರಾಜಕುಮಾರ ಭಜಂತ್ರಿ ಘೋಷಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ