ಆ್ಯಪ್ನಗರ

ನವಗ್ರಾಮದಲ್ಲಿ ಒಂದೇ ಕಡೆ ಮನೆಗಾಗಿ ವಾಗ್ವಾದ

ಹೊಳೆಆಲೂರ: ಸಮೀಪದ ಬಿ.ಎಸ್‌.ಬೆಲೇರಿ ನವಗ್ರಾಮದಲ್ಲಿ ಸವರ್ಣಿಯರಿಗೆ ಮತ್ತು ದಲಿತರಿಗೆ ಪ್ರತ್ಯೇಕವಾಗಿ ವಿಭಾಗ ಮಾಡಿ ಮನೆ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಸೋಮವಾರ ಮಾತಿಗೆ ಮಾತು ಬೆಳೆದು ವಾಗ್ವಾದ ನಡೆದಿದೆ.

Vijaya Karnataka 11 Sep 2019, 5:00 am
ಹೊಳೆಆಲೂರ: ಸಮೀಪದ ಬಿ.ಎಸ್‌.ಬೆಲೇರಿ ನವಗ್ರಾಮದಲ್ಲಿ ಸವರ್ಣಿಯರಿಗೆ ಮತ್ತು ದಲಿತರಿಗೆ ಪ್ರತ್ಯೇಕವಾಗಿ ವಿಭಾಗ ಮಾಡಿ ಮನೆ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಸೋಮವಾರ ಮಾತಿಗೆ ಮಾತು ಬೆಳೆದು ವಾಗ್ವಾದ ನಡೆದಿದೆ.
Vijaya Karnataka Web argument for one sided house in navagrama
ನವಗ್ರಾಮದಲ್ಲಿ ಒಂದೇ ಕಡೆ ಮನೆಗಾಗಿ ವಾಗ್ವಾದ


ಈ ಹಿಂದೆ ಆಗಸ್ಟ್‌ ತಿಂಗಳಿನಲ್ಲಿ ನೆರೆ ಬರುವ ಎರಡು ದಿನ ಮೊದಲು ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭ ಸವರ್ಣಿಯರು ತಮಗೆ ಪ್ರತ್ಯೇಕವಾಗಿ ಮನೆಗಳನ್ನು ನೀಡುವಂತೆ ಮನವಿ ಮಾಡಿದ್ದರು. ಆಗ ಸಚಿವರು ನೋಡೋಣ ಎಂದಷ್ಟೇ ಹೇಳಿದ್ದರು.

ಆಸರೆ ಮನೆಗಳ ಹಂಚಿಕೆ ಸಮಯದಲ್ಲಿ ಏರಿಯಾಗಳನ್ನು ಬೇರೆ ಬೇರೆ ಮಾಡಬೇಕಿತ್ತು ಎಂಬ ವಾದ ಸೋಮವಾರ ಕೆಲವರಿಂದ ಕೇಳಿಬಂದಿದೆ. ಇದರಿಂದ ಕುಪಿತವಾದ ಕೆಲವರು ನೀವೊಂದು ಬದಿಯಲ್ಲಿ ಮನೆ ಮಾಡಿಕೊಳ್ಳಿ, ನಾವೊಂದು ಬದಿ ಒಟ್ಟಿಗೆ ಇರುತ್ತೇವೆ ಎನ್ನುತ್ತಿದ್ದಂತೆ ಎರಡೂ ಸಮುದಾಯಗಳ ನಡುವೆ ವಾಗ್ವಾದ ನಡೆಯಿತು. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಆರಂಭಿಕ ಹಂತದಲ್ಲೇ ಈ ಜಗಳವನ್ನು ಬಗೆಹರಿಸಬೇಕೆಂದು ಪ್ರಜ್ಞಾವಂತರು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ