ಆ್ಯಪ್ನಗರ

ಅನುದಾನ ರಹಿತ ಶಿಕ್ಷಕರಿಗೆ ನೆರವಾಗಿ

ಗದಗ: ಅನುದಾನ ರಹಿತ ಶಾಲಾ ಶಿಕ್ಷಕರು ಕೊರೊನಾದಿಂದ ಸಂಕಷ್ಟ ಎದುರಿಸುವಂತಾಗಿದ್ದು, ಸರಕಾರ ಕೂಡಲೇ ಅಂಥ ಶಿಕ್ಷಕರ ನೆರವಿಗೆ ಮುಂದಾಗಬೇಕು ಎಂದು ಯಂಗ್‌ ಇಂಡಿಯಾ ಪರಿವಾರದ ಸಂಸ್ಥಾಪಕ ವೆಂಕನಗೌಡ ಗೋವಿಂದಗೌಡ್ರ ಒತ್ತಾಯಿಸಿದ್ದಾರೆ.

Vijaya Karnataka 16 Jul 2020, 5:00 am
ಗದಗ: ಅನುದಾನ ರಹಿತ ಶಾಲಾ ಶಿಕ್ಷಕರು ಕೊರೊನಾದಿಂದ ಸಂಕಷ್ಟ ಎದುರಿಸುವಂತಾಗಿದ್ದು, ಸರಕಾರ ಕೂಡಲೇ ಅಂಥ ಶಿಕ್ಷಕರ ನೆರವಿಗೆ ಮುಂದಾಗಬೇಕು ಎಂದು ಯಂಗ್‌ ಇಂಡಿಯಾ ಪರಿವಾರದ ಸಂಸ್ಥಾಪಕ ವೆಂಕನಗೌಡ ಗೋವಿಂದಗೌಡ್ರ ಒತ್ತಾಯಿಸಿದ್ದಾರೆ.
Vijaya Karnataka Web assistance to non graded teachers
ಅನುದಾನ ರಹಿತ ಶಿಕ್ಷಕರಿಗೆ ನೆರವಾಗಿ


ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೊರೊನಾ ಲಾಕ್‌ಡೌನ್‌ನಿಂದ ಖಾಸಗಿ ಶಾಲೆಗಳು ಬಾಗಿಲು ತೆರೆಯುತ್ತಿಲ್ಲ. ಆಡಳಿತ ಮಂಡಳಿಗೆ ಆದಾಯ ಇಲ್ಲದೇ ಶಿಕ್ಷಕರ ಸಂಬಳ ನೀಡುತ್ತಿಲ್ಲ. ಹೀಗಾಗಿ ಸರಕಾರ ಈ ಕೂಡಲೇ ಇಂಥ ಶಿಕ್ಷಣ ಸಂಸ್ಥೆಗಳ ಹಾಗೂ ಅಲ್ಲಿದುಡಿಯುತ್ತಿರುವ ಶಿಕ್ಷಕರಿಗೆ ಆರ್ಥಿಕ ನೆರವು ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯ ಸರಕಾರ ಅಸಂಘಟತ ವಲಯದ ಕಾರ್ಮಿಕರು ಸೇರಿದಂತೆ ಎಲ್ಲವರ್ಗದ ಜನರಿಗೆ ಆರ್ಥಿಕ ನೆರವಿನ ಪ್ಯಾಕೇಜ್‌ ಘೋಷಣೆ ಮಾಡಿದೆ. ಅದೇ ರೀತಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿಕಡಿಮೆ ವೇತನಕ್ಕೆ ಕೆಲಸ ಮಾಡುತ್ತಿರುವ ಶಿಕ್ಷಕರಿಗೆ ನೆರವಾಗಬೇಕು ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ