ಆ್ಯಪ್ನಗರ

ಪ್ಲಾಸ್ಟಿಕ್‌ ನಿಷೇಧಿಸಿ, ಆರೋಗ್ಯಕ ಸಮಾಜ ನಿರ್ಮಿಸಿ

ನರೇಗಲ್ಲ: ಪ್ಲಾಸ್ಟಿಕ್‌ ಮುಕ್ತ ದೇಶವಾದಲ್ಲಿಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಸ್ಥಳೀಯ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಹೇಳಿದರು.

Vijaya Karnataka 28 Sep 2019, 5:00 am
ನರೇಗಲ್ಲ: ಪ್ಲಾಸ್ಟಿಕ್‌ ಮುಕ್ತ ದೇಶವಾದಲ್ಲಿಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಸ್ಥಳೀಯ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
Vijaya Karnataka Web 27NRGL2_25
ನರೇಗಲ್ಲನ ಶ್ರೀ ರೇಣುಕಾಚಾರ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿಮಹಾತ್ಮಾ ಗಾಂಧಿಜಿಯವರ 150ನೇ ಜನ್ಮ ದಿನಾಚರಣೆ ಅಂಗವಾಗಿ ನಡೆದ ಪ್ಲಾಸ್ಟಿಕ್‌ ಬಳಕೆ ವಿರೋಧಿ ಜಾಥಾಕ್ಕೆ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಡ್ರಮಸೆಟ್‌ ಬಾರಿಸುವದರೊಂದಿಗೆ ಚಾಲನೆ ನೀಡಿದರು.


ಸ್ಥಳೀಯ ಶ್ರೀ ಜಗದ್ಗುರು ಪಂಚಾಚಾರ್ಯ ಗ್ರಾಮಿಣಾಭಿವೃದ್ದಿ ಶಿಕ್ಷಣ ಸಂಸ್ಥೆಯ ಶ್ರೀ ರೇಣುಕಾಚಾರ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿಶುಕ್ರವಾರ ಮಹಾತ್ಮಾ ಗಾಂಧಿಜಿಯವರ 150ನೇ ಜನ್ಮ ದಿನಾಚರಣೆ ಅಂಗವಾಗಿ ಪ್ಲಾಸ್ಟಿಕ್‌ ಬಳಕೆ ವಿರೋಧಿ ಜಾಥಾಕ್ಕೆ ಡ್ರಮಸೆಟ್‌ ಬಾರಿಸುವುದರೊಂದಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಸಕಲ ಜೀವರಾಶಿಗಳಿಗೆ ಪ್ಲಾಸ್ಟಿಕ್‌ ವಿಷಯುಕ್ತವಾಗಿದ್ದು ಪ್ಲಾಸ್ಟಿಕ್‌ ಈ ನಾಡಿನ ಫಲವತ್ತಾದ ಮಣ್ಣಿನಲ್ಲಿಸೇರುವದರಿಂದ ಇಡಿ ಭೂಮಿಯೆ ವಿಷಕಾರಿಯಾಗುತ್ತಿದೆ. ಪ್ಲಾಸ್ಟಿಕ್‌ನಿಂದ ಇಡಿ ಪರಿಸರ ವಿಷಕಾರಿಯಾಗುತ್ತಿದ್ದು ಮುಂದಿನ ದಿನಮಾನಗಳಲ್ಲಿಇದರಿಂದ ಹಲವಾರು ಸಾಕ್ರಾಮಿಕ ರೋಗಗಳು ಉಲ್ಬಣಗೊಳ್ಳುವ ಸಾಧ್ಯತೆ ಇದೆ. ಇಂದಿನಿಂದಲೇ ಸರಕಾರ ಇದರ ಬಳಕೆಯನ್ನಷ್ಟೆ ಅಲ್ಲದೆ ಉತ್ಪಾದನೆಗೆ ನಿಷೇಧ ಹೇರುವ ಕಠಿಣ ನಿರ್ಧಾರಕೈಗೊಳ್ಳುವದು ಸೂಕ್ತ ಎಂದರು. ನಮ್ಮ ಪೂರ್ವಜರು ದಿನನಿತ್ಯದ ಜೀವನದ ಬಳಕೆಗಾಗಿ ಮನೆಯಲ್ಲಿನ ಬಟ್ಟೆ ಚೀಲ ಉಪಯೋಗಿಸುತ್ತಿದ್ದರು. ಆದರೆ ಇಂದು ನಾವು ಬಳಕೆಗಳ ಸಾಮಗ್ರಿ ತರಲು ಪ್ಲಾಸ್ಟಿಕ್‌ ಚೀಲ ಬಳಸುತ್ತಿದ್ದೇವೆ. ಇದು ಬದಲಾಗಬೇಕು. ಅಂದಾಗಮಾತ್ರ ಪ್ಲಾಸ್ಟಿಕ್‌ ನಿಷೇದ ತನ್ನಿಂದತಾನೆ ಆಗುತ್ತದೆ ಎಂದರು. ಮಹಾತ್ಮ ಗಾಂಧಿಜಿಯರ ಕನಸು ನನಸಾಗಿಸಿ ಅವರ ಜನ್ಮದಿನಾಚರಣೆಯನ್ನು ಮಹತ್ವದ ದಿನವನ್ನಾಗಿಸೋಣ ಎಂದು ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಕರೆ ನೀಡಿದರು. ಈ ಸಂದರ್ಭದಲ್ಲಿಸಂಸ್ಥೆ ಕಾರ್ಯದರ್ಶಿ ಈಶ್ವರ ಬೆಟಗೇರಿ, ಮುಖ್ಯ ಶಿಕ್ಷಕಿ ಎನ್‌. ಎಸ್‌. ಹಿರೇಮಠ, ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ