ಆ್ಯಪ್ನಗರ

ಸಮಾಜಸೇವೆ ವಿದ್ಯಾರ್ಥಿಗಳ ಗುರಿಯಾಗಲಿ

ಗದಗ : ಇಂದಿನ ಯುವಜನತೆ ದುಶ್ಚಟಗಳಿಂದ ದೂರವಿರಬೇಕು. ನಾಡಿನ ದಾರ್ಶನಿಕ ವ್ಯಕ್ತಿಗಳ ಜೀವನದ ಮೌಲ್ಯಗಳನ್ನು ರೂಢಿಸಿಕೊಂಡು ಸಮಾಜಮುಖಿ ಕೆಲಸ ಮಾಡಬೇಕೆಂದು ಕನಕದಾಸ ಶಿಕ್ಷ ಣ ಸಮಿತಿ ಸಂಸ್ಥಾಪಕ ಅಧ್ಯಕ್ಷ ಡಾ.ಬಿ.ಎಫ್‌.ದಂಡಿನ ಹೇಳಿದರು.

Vijaya Karnataka 26 Jul 2019, 5:00 am
ಗದಗ : ಇಂದಿನ ಯುವಜನತೆ ದುಶ್ಚಟಗಳಿಂದ ದೂರವಿರಬೇಕು. ನಾಡಿನ ದಾರ್ಶನಿಕ ವ್ಯಕ್ತಿಗಳ ಜೀವನದ ಮೌಲ್ಯಗಳನ್ನು ರೂಢಿಸಿಕೊಂಡು ಸಮಾಜಮುಖಿ ಕೆಲಸ ಮಾಡಬೇಕೆಂದು ಕನಕದಾಸ ಶಿಕ್ಷ ಣ ಸಮಿತಿ ಸಂಸ್ಥಾಪಕ ಅಧ್ಯಕ್ಷ ಡಾ.ಬಿ.ಎಫ್‌.ದಂಡಿನ ಹೇಳಿದರು.
Vijaya Karnataka Web be the target of social service students
ಸಮಾಜಸೇವೆ ವಿದ್ಯಾರ್ಥಿಗಳ ಗುರಿಯಾಗಲಿ


ನಗರದ ಕೆ.ಎಸ್‌.ಎಸ್‌.ಮಹಾವಿದ್ಯಾಲಯದಲ್ಲಿ ಭಾರತ ಸ್ಕೌಟ್‌ ಗೈಡ್‌, ಕರ್ನಾಟಕ ಸಂಗೊಳ್ಳಿ ರಾಯಣ್ಣ ರೋವರ್ಸ್‌ ಕ್ರೊ ಹಾಗೂ ಕಿತ್ತೂರ ರಾಣಿ ಚೆನ್ನಮ್ಮ ರೇಂಜರ್ಸ್‌ ಟೀಂ ಸಂಯುಕ್ತ ಆಶ್ರಯದಲ್ಲಿ ನಡೆದ ರಾಜ್ಯ ಪುರಸ್ಕಾರ ವಿಜೇತ ರೋವರ್ಸ್‌ ವಿದ್ಯಾರ್ಥಿಗಳ ಪಾರಿತೋಷಕ ವಿತರಣೆ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ನಾಡಿನ ಕೀರ್ತಿ ಹೆಚ್ಚಿಸಬೇಕೆಂದು ಕರೆಕೊಟ್ಟರು.

ಡಾ.ಬಿ.ಸಿ.ರಾಯ್‌ ಪ್ರಶಸ್ತಿ ಪಡೆದ ಡಾ.ಜಿ.ಬಿ.ಬಿಡನಾಳ ಮಾತನಾಡಿ, ಇಂದಿನ ಜಾಗತೀಕರಣದ ಕಾಲದಲ್ಲಿ ಯುವ ಸಮುದಾಯ ಮೋಜು-ಮಸ್ತಿಯಲ್ಲಿ ಕಾಲಹರಣ ಮಾಡುವುದು ಸರಿಯಲ್ಲ. ಭಾರತ ದೇಶ ನಶೆ ಮುಕ್ತವಾಗಬೇಕು ಎಂದರು. ಮದ್ಯಪಾನ ಮತ್ತು ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಿದರು. ರೋಗ ಮುಕ್ತ ಜೀವನಕ್ಕೆ ಸಿರಿಧಾನ್ಯಗಳನ್ನು ಬಳಸಲು ಸಲಹೆ ನೀಡಿದರು.

ಭಾರತ್‌ ಸ್ಕೌಟ್‌ ಗೈಡ್‌ ಜಿಲ್ಲಾ ಕಾರ್ಯದರ್ಶಿ ಜಿ.ಎಚ್‌.ಪೂಜಾರ ಮಾತನಾಡಿ, ವಿದ್ಯಾರ್ಥಿಗಳು ದೇಶಪ್ರೇಮ ಬೆಳೆಸಿಕೊಳ್ಳಬೇಕು. ಹಾಗೆಯೇ ವೇಳೆ ಮತ್ತು ಕರ್ತವ್ಯಕ್ಕೆ ಹೆಚ್ಚು ಗಮನ ಕೊಡಬೇಕೆಂದು ತಿಳಿಸಿದರು.

ಪ್ರೊ.ಶಾಂತಕುಮಾರ ಮಲ್ಲಾಪೂರ ಅವರು ವಿದ್ಯಾರ್ಥಿಗಳಿಗೆ ಸಮಾಜ ಸೇವೆ ಮಾಡುವ ಮೂಲಕ ಮಾದರಿ ವ್ಯಕ್ತಿಗಳಾಗಲು ತಿಳಿಸಿದರು. ಪರಿಶ್ರಮ ಮತ್ತು ಶ್ರದ್ಧೆಯಿಂದ ಜೀವನ ರೂಪಿಸಿಕೊಳ್ಳಬೇಕೆಂದರು.

ರಾಜ್ಯ ಪುರಸ್ಕಾರ ಪಡೆದ ಪ್ರಶಾಂತ ಮಲ್ಲಾರಿ, ಸಚೀನ್‌ ತಳಕಲ್‌, ಮಹೇಶ ಪೊಲೀಸ್‌, ವಿನಾಯಕ ಒಂಟಿ, ಚಿಕ್ಕಪ್ಪ ಗೋಡಿ ಅವರು ಸ್ಕೌಟ್‌ ರೋವರ್ಸ್‌ ವಿದ್ಯಾರ್ಥಿಗಳಿಗೆ ಪಾರಿತೋಷಕ ವಿತರಿಸಿದರು. ಬಿ.ಸಿ.ರಾಯ್‌ ಪ್ರಶಸ್ತಿ ಪಡೆದ ಡಾ.ಜಿ.ಬಿ.ಬಿಡನಾಳ ಅವರನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯ ಡಾ.ಎನ್‌.ಎಂ.ಅಂಬಲಿ, ಪ್ರೊ.ಎಂ.ಬಿ.ಹಳ್ಳಿ, ಸ್ಕೌಟ್‌ ರೋವರ್ಸ್‌ ಲೀಡರ್‌ ಡಾ.ಅರವಿಂದ ಪೂಜಾರ, ಎಸ್‌.ಅರಹುಣಸಿ, ಎ.ಎಸ್‌.ಶಿವಕುಮಾರ, ಭಾವನಾ ಕೋರಿಶೆಟ್ಟರ, ಪೂಜಾ ಪತ್ತಾರ, ಸೋನಿಯಾ ಬೇವಿನಕಟ್ಟಿ, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ