ಆ್ಯಪ್ನಗರ

ಶಿಕ್ಷಣವಂತರಾಗಿ ಸಾಧನೆ ಮಾಡಿ

ಶಿರಹಟ್ಟಿ: ದಲಿತರ ಅಭಿವೃದ್ಧಿಗಾಗಿ ಭಾರತದ ಸಂವಿಧಾನದಲ್ಲಿಹಲವು ಯೋಜನೆ ಹಾಗೂ ಸೌಲಭ್ಯ ಒದಗಿಸಿಕೊಟ್ಟಿದ್ದರೂ ತುಳಿತಕ್ಕೊಳಗಾದ ಜನಾಂಗ ಶಿಕ್ಷಣವಂತರಾಗಿ ಸಮಾಜದಲ್ಲಿಮುಂದೆ ಬರದಿರುವುದು ನೋವಿನ ಸಂಗತಿ ಎಂದು ಸಿಪಿಐ ಆರ್‌.ಎಚ್‌. ಕಟ್ಟಿಮನಿ ಕಳವಳ ವ್ಯಕ್ತಪಡಿಸಿದರು.

Vijaya Karnataka 19 Nov 2019, 5:00 am
ಶಿರಹಟ್ಟಿ: ದಲಿತರ ಅಭಿವೃದ್ಧಿಗಾಗಿ ಭಾರತದ ಸಂವಿಧಾನದಲ್ಲಿಹಲವು ಯೋಜನೆ ಹಾಗೂ ಸೌಲಭ್ಯ ಒದಗಿಸಿಕೊಟ್ಟಿದ್ದರೂ ತುಳಿತಕ್ಕೊಳಗಾದ ಜನಾಂಗ ಶಿಕ್ಷಣವಂತರಾಗಿ ಸಮಾಜದಲ್ಲಿಮುಂದೆ ಬರದಿರುವುದು ನೋವಿನ ಸಂಗತಿ ಎಂದು ಸಿಪಿಐ ಆರ್‌.ಎಚ್‌. ಕಟ್ಟಿಮನಿ ಕಳವಳ ವ್ಯಕ್ತಪಡಿಸಿದರು.
Vijaya Karnataka Web become educated
ಶಿಕ್ಷಣವಂತರಾಗಿ ಸಾಧನೆ ಮಾಡಿ


ತಾಲೂಕಿನ ಮಜ್ಜೂರ ಗ್ರಾಮದಲ್ಲಿಏರ್ಪಡಿಸಿದ್ದ ದಲಿತರ ಕುಂದು ಕೊರತೆ ಹಾಗೂ ಕಾನೂನು ಅರಿವು ಕಾರ್ಯಕ್ರಮದಲ್ಲಿಪಾಲ್ಗೊಂಡು ಮಾತನಾಡಿದರು. ಸಂವಿಧಾನ ನಮಗೆ ನೀಡಿರುವ ಹಕ್ಕುಗಳನ್ನು ದುರ್ಬಳಕೆ ಮಾಡದೇ ಸದುಪಯೋಗಪಡಿಸಿಕೊಂಡು ಶಿಕ್ಷಣವಂತರಾಗಿ ಮುಖ್ಯವಾಹಿನಿಗೆ ಬರಬೇಕು. ಎಲ್ಲರಂತೆ ಸಮಾಜದಲ್ಲಿಬಾಳಬೇಕು. ಕಾನೂನನ್ನು ಸರಿಯಾಗಿ ಅಥೈರ್‍ಸಿಕೊಳ್ಳದೆ ಸಮಾಜದ ಯುವಕರು ತಪ್ಪುದಾರಿಯಲ್ಲಿನಡೆಯುತ್ತಿದ್ದಾರೆ. ಎಲ್ಲರೂ ಮೊದಲು ಶೈಕ್ಷಣಿಕವಾಗಿ ಮುಂದೆ ಬರಲು ಶ್ರಮಿಸಿಬೇಕು ಎಂದರು.

ಪಿಎಸ್‌ಐ ಬಸವರಾಜ ತಿಪರಡ್ಡಿ ಮಾತನಾಡಿ, ವಾಹನ ಸವಾರರು ಕಡ್ಡಾಯವಾಗಿ ವಾಹನ ಚಾಲನಾ ಪರವಾನಗಿ, ಇನ್ಸೂರನ್ಸ್‌, ಹೆಲ್ಮೇಟ್‌ ಹೊಂದಬೇಕು. ಸಮಯಕ್ಕೆ ಸರಿಯಾಗಿ ನವೀಕರಣಗೊಳಿಸಿಕೊಂಡು ರಸ್ತೆ ನಿಯಮಗಳನ್ನು ಚಾಚು ತಪ್ಪದೇ ಪಾಲಿಸಬೇಕು ಎಂದರು.

ಮುತ್ತುರಾಜ ಭಾವಿಮನಿ, ನಾಗರಾಜ ಪೋತರಾಜ ಮಾತನಾಡಿದರು. ಹಾಲಪ್ಪ ಬಡ್ಡೆಪ್ಪನವರ, ಯಲ್ಲಪ್ಪ ಗೋಡೆಣ್ಣವರ, ರಾಜು ಶೇಶಣ್ಣವರ, ಚಂದ್ರು ಗುಡಿಮನಿ, ಪರಮೇಶ ಗುಡಿಮನಿ, ಸುರೇಶ ಗೋಡೆಣ್ಣವರ ಮಾಂತೇಶ ಗುಡಿಮನಿ ಮತ್ತಿತರರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ