ಆ್ಯಪ್ನಗರ

ಪ್ರವಾಹ ಪೀಡಿತರಿಗೆ ರೊಟ್ಟಿ, ಆಹಾರ ಪದಾರ್ಥ

ಮುಂಡರಗಿ : ನರಗುಂದ ತಾಲೂಕು ಮತ್ತು ಕೊಣ್ಣೂರ ಭಾಗದಲ್ಲಿ ಪ್ರವಾಹದಿಂದ ತೊಂದರೆಗೀಡಾದ ಜನತೆಗೆ ಮುಂಡರಗಿಯಿಂದ ರೈತ ಸಂಘ ಮತ್ತು ಹಸಿರು ಸೇನೆಯ ರೈತರು ಶುಕ್ರವಾರ ರೊಟ್ಟಿ, ಇತರ ಆಹಾರ ಪದಾರ್ಥಗಳನ್ನು ವಾಹನದಲ್ಲಿ ತೆಗೆದುಕೊಂಡು ಹೋದರು.

Vijaya Karnataka 10 Aug 2019, 5:00 am
ಮುಂಡರಗಿ : ನರಗುಂದ ತಾಲೂಕು ಮತ್ತು ಕೊಣ್ಣೂರ ಭಾಗದಲ್ಲಿ ಪ್ರವಾಹದಿಂದ ತೊಂದರೆಗೀಡಾದ ಜನತೆಗೆ ಮುಂಡರಗಿಯಿಂದ ರೈತ ಸಂಘ ಮತ್ತು ಹಸಿರು ಸೇನೆಯ ರೈತರು ಶುಕ್ರವಾರ ರೊಟ್ಟಿ, ಇತರ ಆಹಾರ ಪದಾರ್ಥಗಳನ್ನು ವಾಹನದಲ್ಲಿ ತೆಗೆದುಕೊಂಡು ಹೋದರು.
Vijaya Karnataka Web GDG-9MDR1 SANTRROTTI
ಮುಂಡರಗಿ ರೈತ ಸಂಘದ ಕಾರ್ಯಕರ್ತರು, ಹಸಿರು ಸೇನೆ ರೈತರು ನರಗುಂದ ತಾಲೂಕು ಮತ್ತು ಕೊಣ್ಣೂರು ಗ್ರಾಮದ ಪ್ರವಾಹದಿಂದ ತೊಂದರೆಗೀಡಾದ ಜನತೆಗೆ ರೊಟ್ಟಿ ಇತರ ಪಡಿತರ ಆಹಾರ ಕೊಡಲು ಶುಕ್ರವಾರ ತೆರಳಿದರು.


ಕೋಟೆ ಭಾಗದ ರೈತರು ಸೇರಿದಂತೆ ಪಟ್ಟಣದ ರೈತರು 4 ಸಾವಿರ ಬಿಳಿಜೋಳದ ರೊಟ್ಟಿ, ಅಕ್ಕಿ, ಬೆಲ್ಲ, ಸಕ್ಕರೆ, ಉಂಡಿ, ಉಪ್ಪಿನಕಾಯಿ, ತರಕಾರಿ ಸಂಗ್ರಹಿಸಿದರು.

ಪಟ್ಟಣದ ನಾನಾ ಭಾಗಗಳಲ್ಲಿ ಬೈಕ್‌ ಮೂಲಕ ಪ್ರಚಾರಕೈಗೊಂಡು ಧನ ಸಂಗ್ರಹ, ತರಕಾರಿ, ಅಕ್ಕಿ ಬೇಳೆ, ಸಕ್ಕರೆ, ಬಿಸ್ಕಿಟ್‌, ಬ್ರೆಡ್‌, ತರಕಾರಿ ಪಡೆದು ವಾಹನದಲ್ಲಿ ಸಂಗ್ರಹಿಸಿದರು.ಪಟ್ಟಣದ ಜನತೆ ಮುಕ್ತವಾಗಿ ಪ್ರವಾಹ ಪೀಡಿತ ಜನರಿಗೆ ಸಹಾಯ ಮಾಡಿದರು.

ಜಿಲ್ಲಾ ಹಸಿರು ಸೇನೆ ಅಧ್ಯಕ್ಷ ಶಿವಾನಂದ ಇಟಗಿ ಮಾತನಾಡಿ, ಮಾನವೀಯತೆ ದೃಷ್ಟಿಯಿಂದ ಸಂತ್ರಸ್ತರಿಗೆ ಅಲ್ಪಮಟ್ಟದಲ್ಲಾದರೂ ಸಹಾಯವಾಗಲಿ ಎಂಬ ಉದ್ದೇಶದಿಂದ ರೊಟ್ಟಿ ಸಂಗ್ರಹಿಸಲಾಗಿದೆ. ರೈತ ಕುಟುಂದವರು ತಮ್ಮ ಮನೆಯಲ್ಲಿ ರೊಟ್ಟಿ ಮಾಡಿ ಕೊಟ್ಟಿದ್ದಾರೆ. ನಿಸರ್ಗ ಮುನಿಸಿಕೊಂಡು ಈ ರೀತಿಯ ತೊಂದರೆಯಾಗಿದೆ. ಹೀಗಾಗಿ ಅವರ ಕಷ್ಟಗಳಿಗೆ ಸರಕಾರ ಸ್ಪಂದಿಸುವುದರ ಜತೆಗೆ ರೈತರು ಕೂಡಾ ಸಹಾಯ ಮಾಡುತ್ತಿದ್ದಾರೆ ಎಂದರು.

ರಾಮಣ್ಣ ಇಲ್ಲೂರ, ಈಶ್ವರಪ್ಪ ಉಳ್ಳಾಗಡ್ಡಿ, ಪ್ರಕಾಶ ದಳವಾಯಿ, ಬೀರಪ್ಪ ಮಲ್ಲಾರ್ಜಿ, ಬಸವರಾಜ ಪೂಜಾರ, ರುದ್ರಪ್ಪ ಲದ್ದಿ, ಹನುಮಂತಪ್ಪ ಕುರಿ, ಹನುಮಂತಗೌಡ ಪಾಟೀಲ, ಮೆಹರುಂಬಿ ಹಮ್ಮಸಾಗರ, ಮಂಜುನಾಥ ಇತರರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ