ಆ್ಯಪ್ನಗರ

ಬಿಎಸ್‌ವೈ ಭ್ರಷ್ಟಾಚಾರದ ಜನಕ: ಇಬ್ರಾಹಿಂ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭ್ರಷ್ಟಾಚಾರದ ಜನಕ ಎಂದು ರಾಜ್ಯ ಯೋಜನಾ ಆಯೋಗದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ವಾಗ್ದಾಳಿ ನಡೆಸಿದರು.

ವಿಕ ಸುದ್ದಿಲೋಕ 29 Apr 2017, 4:17 pm
ಗದಗ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭ್ರಷ್ಟಾಚಾರದ ಜನಕ ಎಂದು ರಾಜ್ಯ ಯೋಜನಾ ಆಯೋಗದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ವಾಗ್ದಾಳಿ ನಡೆಸಿದರು.
Vijaya Karnataka Web bsy is father of corruption c m ibrahim
ಬಿಎಸ್‌ವೈ ಭ್ರಷ್ಟಾಚಾರದ ಜನಕ: ಇಬ್ರಾಹಿಂ


ಗದಗನಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ ಜಾರಿಗೆ ತಂದವರೇ, ಇಂದು ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ರಾಜ್ಯ ಬಿಜೆಪಿ ಪಕ್ಷದ ಆಂತರಿಕ ಕಲಹದ ಕುರಿತು ಪ್ರತಿಕ್ರಿಯೆ ನೀಡಿರುವ ಸಿ.ಎಂ.ಇಬ್ರಾಹಿಂ ಅವರು, ಬಿಜೆಪಿ ಪಕ್ಷದ ಬೀಜವೇ ಸರಿಯಿಲ್ಲ. ಬೀಜ ಸರಿಯಿಲ್ಲದ ಪಕ್ಷದಲ್ಲಿ ಎಂಥ ಸಸಿ ಹುಟ್ಟಲು ಸಾಧ್ಯ ಎಂದಿದ್ದಾರೆ.

ಬಿಜೆಪಿಯದ್ದು ತಾತ್ವಿಕ ಸಿದ್ಧಾಂತದ ಮೇಲೆ ಹಾಕಿದ ಬೀಜವಲ್ಲ. ಭಾವನಾತ್ಮಕ ವಿಚಾರದ ಮೂಲಕ ಜನರನ್ನು ಕೆರಳಿಸೋ ಬೀಜ. ಹೀಗಾಗಿ ಅಂತಹ ಪಕ್ಷದಲ್ಲಿ ಆಂತರಿಕ ಕಲಹ ಸಾಮಾನ್ಯ ಎಂದು ಲೇವಡಿ ಮಾಡಿದರು.

ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್ 1 ಸಮೀಕ್ಷೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಹಾದಿ ಬೀದಿಯ ಸಮೀಕ್ಷೆ ನಮಗೆ ಬೇಕಿಲ್ಲ. ಈಗಾಗಲೇ ರಾಜ್ಯದ ಜನ ಉಪಚುನಾವಣೆಯಲ್ಲಿ ಉತ್ತರ ನೀಡಿದ್ದಾರೆ. ನಾವು ಬಿಜೆಪಿ ಪಕ್ಷದಂತೆ ಯಾರಿಗೋ ಹುಟ್ಟಿದ ಮಕ್ಕಳನ್ನು ಆಪರೇಷನ್ ಕಮಲದ ನೆಪದಲ್ಲಿ ಕರೆತಂದಿಲ್ಲ ಎಂದು ಕಿಡಿಕಾರಿದರು.

ಬಸವಣ್ಣ ಹಾಗೂ ಸೂಫಿ ಸಂತರ ತತ್ವದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡು ಜ್ಯಾತ್ಯಾತೀತ ಪಕ್ಷಗಳು ಸಾಗಿವೆ. ಜೆಡಿಎಸ್ ಪಕ್ಷ ಸೇರ್ಪಡೆ ಕುರಿತು ಸಮಯ ಬಂದಾಗ ನೋಡ್ತಿನಿ ಎಂದು ಸಿ.ಎಂ.ಇಬ್ರಾಹಿಂ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ