ಆ್ಯಪ್ನಗರ

ಕುಲಕರ್ಣಿ ಇಮೇಜ್‌ ಕೆಡಿಸುತ್ತಿರುವ ಬಿಎಸ್‌ವೈ: ಸಿಎಂ

ಸಚಿವ ವಿನಯ್ ಕುಲಕರ್ಣಿ ಅವರ ಇಮೇಜ್ ಕೆಡಿಸುವ ಕುತಂತ್ರವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾಡುತ್ತಿದ್ದಾರೆ.

Vijaya Karnataka Web 27 Nov 2017, 3:22 pm
ಗದಗ: 'ಸಚಿವ ವಿನಯ್ ಕುಲಕರ್ಣಿ ಅವರ ಇಮೇಜ್ ಕೆಡಿಸುವ ಕುತಂತ್ರವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾಡುತ್ತಿದ್ದಾರೆ. ಬಿಜೆಪಿಗೆ ಸುಳ್ಳು ಹೇಳುವುದೇ ಕಸುಬು. ಬಿಜೆಪಿಯ ಹಲವು ಮುಖಂಡರು ನನ್ನ ಸಂಪರ್ಕದಲ್ಲಿದ್ದಾರೆ. ಅವರಲ್ಲಿ ಕೆಲವರು ಕಾಂಗ್ರೆಸ್ ಸೇರುವ ಇಚ್ಛೆ ವ್ಯಕ್ತ ಪಡಿಸಿದ್ದಾರೆ,' ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
Vijaya Karnataka Web bsys allegations baseless cm siddaramaiah
ಕುಲಕರ್ಣಿ ಇಮೇಜ್‌ ಕೆಡಿಸುತ್ತಿರುವ ಬಿಎಸ್‌ವೈ: ಸಿಎಂ


ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ಹೋರಾಟ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ಕುತಂತ್ರ ಮಾಡುತ್ತಿದೆ. ಲಿಂಗಾಯತ ಹೋರಾಟದಲ್ಲಿ ಭಾಗವಹಿಸಿದ್ದಕ್ಕೆ ಸಚಿವ ವಿನಯ್ ಕುಲಕರ್ಣಿ ಅವರ ವಿರುದ್ಧ ಬಿಎಸ್‌ವೈ ಕುತಂತ್ರ ನಡೆಸಿದ್ದಾರೆ ಎಂದರು.

ನರಗುಂದ ಪಟ್ಟಣದಲ್ಲಿ ಮಾತನಾಡಿದ ಸಿದ್ದರಾಮಯ್ಯ, ತಿಂಗಳೊಳಗೆ ಮಹದಾಯಿ ವಿವಾದ ಇತ್ಯರ್ಥದ ಭರವಸೆ ನೀಡಿದ ಬಿಜೆಪಿ ನಡೆ ಸ್ವಾಗತಾರ್ಹ. ಬಿ.ಎಸ್.ಯಡಿಯೂರಪ್ಪ ಅವರಿಂದ ಮಹದಾಯಿ ವಿವಾದ ಇತ್ಯರ್ಥ ಅಸಾಧ್ಯ. ಪ್ರಧಾನಿ ನರೇಂದ್ರ ಮೋದಿ ಅವರಿಂದ ಮಾತ್ರ ಮಹದಾಯಿ ಸಮಸ್ಯೆ ಪರಿಹಾರ ಸಾಧ್ಯ ಎಂದರು.

ಮಹದಾಯಿ ಕುರಿತು ರಾಜ್ಯ ಬಿಜೆಪಿ ನಾಯಕರು ಮನೆಪಾಠದ ಮೂಲಕ ಪ್ರಧಾನಿಯ ಹಾದಿ ತಪ್ಪಿಸಿದ್ದಾರೆ ಎಂದು ಸಚಿವ ಎಂ.ಬಿ.ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಜಲದ ಸಮಸ್ಯೆ ಪರಿಹರಿಸಿದ್ದರು. ತೆಲಗು ಗಂಗಾ, ನರ್ಮದಾ ವಿಚಾರದಲ್ಲಿ ಸ್ವತಂತ್ರ ನಿರ್ಧಾರ ಕೈಗೊಂಡಿದ್ದರು. ಬಿಜೆಪಿ ಪಕ್ಷದ ಹಾಗೆ ನಿಮ್ಮ ಪಕ್ಷದವರನ್ನು ನೀವು ಮನವೊಲಿಸಿ ಅಂತ ಹೇಳಲಿಲ್ಲ. ವಿವಾದ ಇತ್ಯರ್ಥದಲ್ಲಿ ಬಿಜೆಪಿ ಕುಂಟುನೆಪ ಹೇಳುತ್ತಿದೆ. ಕುಣಿಯೋಕೆ ಬರದಿದ್ದರೆ ನೆಲ ಡೊಂಕು ಅನ್ನುವ ಪ್ರವೃತ್ತಿ ಬೇಡ . ಡಿಸೆಂಬರ್‌ 15ರೊಳಗೆ ಮಹದಾಯಿ ವಿವಾದ ಇತ್ಯರ್ಥಗೊಳಿಸಿದರೆ ಬಿಜೆಪಿಯವರನ್ನು ಅಭಿನಂದಿಸುತ್ತೇನೆ ಎಂದು ಪಾಟೀಲ್‌ ಹೇಳಿದರು.

ಸಚಿವ ವಿನಯ ಕುಲಕರ್ಣಿ ಅವರ ವಿರುದ್ಧ ಏನು ಆರೋಪವಿದೆ, ಬಿಜೆಪಿಯವರು ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ವಿನಯ್ ಕುಲಕರ್ಣಿ ಜತೆ ಕೆಂಪಯ್ಯ ಅವರನ್ನೂ ತಳಕು ಹಾಕಿಕೊಂಡಿದ್ದಾರೆ. ಕೆಂಪಯ್ಯನವರಿಗೂ ಇದಕ್ಕೂ ಸಂಬಂಧವೇ ಇಲ್ಲ ಎಂದು ಮುಖ್ಯಮಂತ್ರಿ ಹೇಳಿದರು.

ಮಹದಾಯಿ, ಕಳಸಾ ಬಂಡೂರಿ ವಿಚಾರದಲ್ಲಿ ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕು. ನಾನು ಗೋವಾ, ಮಹಾರಾಷ್ಟ್ರ ಮುಖ್ಯಮಂತ್ರಿಗೆ ಸಾಕಷ್ಟು ಪತ್ರ ಬರೆದಿದ್ದೇನೆ. ಸಂಧಾನಕ್ಕೆ ಬಿಜೆಪಿಯವರು ಮುಂದೆ ಬರುತ್ತಿಲ್ಲ. ಮೂರು ವರ್ಷದಿಂದ ಯಡಿಯೂರಪ್ಪ ಸುಮ್ಮನಿದ್ದು ಒಂದು ತಿಂಗಳಲ್ಲಿ ಬಗೆಹರಿಸುವುದಾಗಿ ಹೇಳಿದ್ದಾರೆ. ಅದನ್ನು ಸ್ವಾಗತಿಸುತ್ತೇನೆ. ಯಡಿಯೂರಪ್ಪ ಏನೇ ಭರವಸೆ ನೀಡಿದರೂ ಪ್ರಧಾನಿ ಎಂಟ್ರಿ ಆದರೆ ಮಾತ್ರ ಸಮಸ್ಯೆ ಬಗೆಹರಿಯಲಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಮುಖ್ಯಮಂತ್ರಿ ನರಗುಂದ ಹಾಗೂ ರೋಣ ವಿಧಾನಸಭಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಎಂಜಿನಿಯರಿಂಗ್ ಮಹಾವಿದ್ಯಾಲಯದ ಅಡಿಗಲ್ಲು ಸಮಾರಂಭ ನೆರವೇರಿಸಿದರು. ಕೃಷಿಭಾಗ್ಯ ಯೋಜನೆಯಡಿ ನಿರ್ಮಾಣಗೊಂಡ 5111 ಕೃಷಿ ಹೊಂಡಗಳಿಗೆ ಸಾಂಕೇತಿಕವಾಗಿ ಬಾಗಿನ ಅರ್ಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ