ಆ್ಯಪ್ನಗರ

ಪೌಷ್ಟಿಕ ಕೈತೋಟ ನಿರ್ಮಾಣ ಮಾಡಿ

ಗದಗ: ಗ್ರಾಮೀಣ ಮಹಿಳೆಯರು ಕುಟುಂಬದ ಪೌಷ್ಟಿಕ ಭದ್ರತೆಗಾಗಿ, ಮನೆಯ ಹಿತ್ತಲಿನಲ್ಲಿಅಥವಾ ಹೊಲಗಳಲ್ಲಿಸಾವಯವ ಪದ್ಧತಿ ಅನುಸರಿಸಿ ಪೌಷ್ಟಿಕ ಕೈತೋಟ ನಿರ್ಮಾಣ ಮಾಡಬೇಕೆಂದು ಜಿಪಂ ಉಪಾಧ್ಯಕ್ಷೆ ಶಕುಂತಲಾ ಮೂಲಿಮನಿ ಹೇಳಿದರು.

Vijaya Karnataka 17 Oct 2019, 5:00 am
ಗದಗ: ಗ್ರಾಮೀಣ ಮಹಿಳೆಯರು ಕುಟುಂಬದ ಪೌಷ್ಟಿಕ ಭದ್ರತೆಗಾಗಿ, ಮನೆಯ ಹಿತ್ತಲಿನಲ್ಲಿಅಥವಾ ಹೊಲಗಳಲ್ಲಿಸಾವಯವ ಪದ್ಧತಿ ಅನುಸರಿಸಿ ಪೌಷ್ಟಿಕ ಕೈತೋಟ ನಿರ್ಮಾಣ ಮಾಡಬೇಕೆಂದು ಜಿಪಂ ಉಪಾಧ್ಯಕ್ಷೆ ಶಕುಂತಲಾ ಮೂಲಿಮನಿ ಹೇಳಿದರು.
Vijaya Karnataka Web build a nutritious garden
ಪೌಷ್ಟಿಕ ಕೈತೋಟ ನಿರ್ಮಾಣ ಮಾಡಿ


ತಾಲೂಕಿನ ಹುಲಕೋಟಿಯ ಕೆವಿಕೆ ಸಭಾಂಗಣದಲ್ಲಿಕೆ.ಎಚ್‌.ಪಾಟೀಲ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ತಂತ್ರಜ್ಞಾನ ನಿರ್ವಹಣೆ ಸಂಸ್ಥೆ ಆಶ್ರಯದಲ್ಲಿವಿಶ್ವ ಆಹಾರ ದಿನಾಚರಣೆ ಹಾಗೂ ರಾಷ್ಟ್ರೀಯ ರೈತ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಪೌಷ್ಟಿಕ ಕೈತೋಟದಲ್ಲಿನಾನಾ ಜಾತಿಯ ಹಣ್ಣು ಹಾಗೂ ತರಕಾರಿಗಳನ್ನು ಹಂಗಾಮಿಗನುಸಾರವಾಗಿ ಬೆಳೆದು ಕುಟುಂಬದ ಪೌಷ್ಟಿಕ ಅವಶ್ಯಕತೆ ಪೂರೈಸುವುದರ ಜತೆಗೆ ಹೆಚ್ಚಿನ ಹಣ್ಣು ಹಾಗೂ ತರಕಾರಿ ಮಾರಾಟ ಮಾಡಿ ಆದಾಯ ಪಡೆಯಬಹುದು. ಕೃಷಿ ಉತ್ಪಾದನೆಯಲ್ಲಿರೈತ ಮಹಿಳೆಯರು ಅಪಾರ ಕೊಡುಗೆ ನೀಡುತ್ತಿದ್ದು, ಅವರಿಗೆ ಕೃಷಿ ತಂತ್ರಜ್ಞಾನ ನಿರ್ವಹಣೆ ಕುರಿತು ಹೆಚ್ಚಿನ ತರಬೇತಿ ಸಂಘಟಿಸುವ ಅವಶ್ಯಕತೆ ಇದೆ ಎಂದರು.

ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಟಿ.ಎಸ್‌.ರುದ್ರೇಶಪ್ಪ ಮಾತನಾಡಿ, ಕೃಷಿ ಇಲಾಖೆಯು ಆತ್ಮಾ ಯೋಜನೆಯಡಿ ರೈತ ಮಹಿಳೆಯರಿಗೆ ಸ್ವ-ಸಹಾಯ ಗುಂಪುಗಳನ್ನು ಸಂಘಟಿಸಲಾಗಿದೆ. ಗುಂಪುಗಳಿಗೆ ಕೃಷಿ ಹಾಗೂ ಕೃಷಿ ಪೂರಕ ಕ್ಷೇತ್ರಗಳಲ್ಲಿಕೃಷಿ ತಂತ್ರಜ್ಞಾನಗಳ ಹಾಗೂ ಉದ್ಯಮಶೀಲತೆ ತರಬೇತಿ ಸಂಘಟಿಸಲಾಗುತ್ತಿದೆ ಎಂದರು.

ಉಪ ಕೃಷಿ ನಿರ್ದೇಶಕರು ಹಾಗೂ ಯೋಜನಾ ನಿರ್ದೇಶಕರು, ಆತ್ಮಾ ಯೋಜನೆ, ಕೃಷಿ ಇಲಾಖೆ ವೀರೇಶ ಹುನಗುಂದ ಮಾತನಾಡಿದರು. ಹುಲಕೋಟಿ ಗ್ರಾಪಂ ಅಧ್ಯಕ್ಷೆ ರೇಣುಕಾ ಹಡಪದ ಅಧ್ಯಕ್ಷತೆ ವಹಿಸಿದ್ದರು. ಕೆವಿಕೆ ಮುಖ್ಯಸ್ಥ ಡಾ.ಎಲ್‌.ಜಿ.ಹಿರೇಗೌಡರ, ಕೃಷಿ ವಿಸ್ತರಣಾ ತಜ್ಞ ಎಸ್‌.ಎಚ್‌.ಆದಾಪೂರ ಮಾತನಾಡಿದರು.

ಡಾ.ಸುಧಾ ಮಂಕಣಿ, ವಿ.ಜಿ. ಹಿರೇಗೌಡರ ಫಣಿಕುಮಾರ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ