ಆ್ಯಪ್ನಗರ

ಶೈಕ್ಷಣಿಕ ಸಾಮಗ್ರಿ ಖರೀದಿ ಭರಾಟೆ ಜೋರು

ಗದಗ : ಕಳೆದೆ ಒಂದು ತಿಂಗಳಿಂದ ಬಣಗುಡುತ್ತಿದ್ದ ಶಾಲೆಗಳ ಆವರಣಗಳಿಗೆ ಮತ್ತೇ ಜೀವಕಳೆ ಬಂದಿದೆ. ಶೈಕ್ಷಣಿಕ ವರ್ಷಾರಂಭದ ಹಿನ್ನೆಲೆ ಶಾಲೆಗಳು ಸುಣ್ಣ ಬಣ್ಣದೊಂದಿಗೆ ಅಲಂಕಾರ ಮಾಡಲಾಗಿದೆ. ರಜೆ ಮೂಡ್‌ನಲ್ಲಿದ್ದ ವಿದ್ಯಾರ್ಥಿ ಸಮೂಹ ಹೊಸ ತರಗತಿಗೆ ಹೋಗುವ ಸಂಭ್ರಮದಲ್ಲಿದ್ದರೇ, ಪಾಲಕರು ಅವರಿಗೆ ಅಗತ್ಯವಾದ ಶೈಕ್ಷಣಿಕ ಸಾಮಗ್ರಿ ಖರೀದಿಯಲ್ಲಿ ಮಗ್ನರಾಗಿದ್ದಾರೆ.

Vijaya Karnataka 29 May 2019, 5:00 am
ಗದಗ : ಕಳೆದೆ ಒಂದು ತಿಂಗಳಿಂದ ಬಣಗುಡುತ್ತಿದ್ದ ಶಾಲೆಗಳ ಆವರಣಗಳಿಗೆ ಮತ್ತೇ ಜೀವಕಳೆ ಬಂದಿದೆ. ಶೈಕ್ಷಣಿಕ ವರ್ಷಾರಂಭದ ಹಿನ್ನೆಲೆ ಶಾಲೆಗಳು ಸುಣ್ಣ ಬಣ್ಣದೊಂದಿಗೆ ಅಲಂಕಾರ ಮಾಡಲಾಗಿದೆ. ರಜೆ ಮೂಡ್‌ನಲ್ಲಿದ್ದ ವಿದ್ಯಾರ್ಥಿ ಸಮೂಹ ಹೊಸ ತರಗತಿಗೆ ಹೋಗುವ ಸಂಭ್ರಮದಲ್ಲಿದ್ದರೇ, ಪಾಲಕರು ಅವರಿಗೆ ಅಗತ್ಯವಾದ ಶೈಕ್ಷಣಿಕ ಸಾಮಗ್ರಿ ಖರೀದಿಯಲ್ಲಿ ಮಗ್ನರಾಗಿದ್ದಾರೆ.
Vijaya Karnataka Web GDG-28RUDRAGOUD10D
ಗದಗನ ಪುಸ್ತಕ ಅಂಗಡಿಯಲ್ಲಿ ಶೈಕ್ಷಣಿಕ ಸಾಮಗ್ರಿ ಖರೀದಿಯಲ್ಲಿ ಪಾಲಕರು ಮತ್ತು ಮಕ್ಕಳು ಭಾಗವಹಿಸಿದ್ದರು.


ಬೇಸಿಗೆ ರಜೆ ಮೋಜಿಗಾಗಿ ಸಂಬಂಧಿಕರು, ಬಂಧುಗಳ ಊರುಗಳಿಗೆ ತೆರಳಿದ್ದ ವಿದ್ಯಾರ್ಥಿಗಳು ಇದೀಗ ಪುನಃ ತವರಿಗೆ ಹಿಂದಿರುಗುತ್ತಿದ್ದಾರೆ. ಶಾಲೆ ಆರಂಭ ಆಗುವ ಮುನ್ನವೇ ಮಕ್ಕಳ ಓದಿಗೆ ಬೇಕಿರುವ ಪಠ್ಯಪುಸ್ತಕ, ನೋಟ್‌ಬುಕ್‌, ಸಮವಸ್ತ್ರಗÜಳನ್ನು ಹೊಂದಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಪಾಲಕರು ತೊಡಗಿದ್ದಾರೆ.

ಶಾಲೆಗೆ ಸಾಮಗ್ರಿ ಖರೀದಿ ಭರಾಟೆ

ಮುದ್ರಣ ಕಾಶಿ ಎಂದೇ ಕರೆಯಲಾಗುವ ಗದಗನ ಪುಸ್ತಕ ಅಂಗಡಿಕಾರರು ಅಗತ್ಯ ಸಾಮಗ್ರಿಯನ್ನು ಅದಾಗಲೇ ದಾಸ್ತಾನು ಮಾಡಿಕೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ಬೇಕಾದ ನೋಟ್‌ ಬುಕ್‌, ಪೆನ್‌, ಸ್ಕೂಲ್‌ ಬ್ಯಾಗ್‌, ಕಂಪಾಸ್‌, ಪುಸ್ತಕದ ರಕ್ಷಾ ಕವಚ ಒಳಗೊಂಡಂತೆ ಎಲ್ಲ ಬಗೆಯ ವಸ್ತುಗಳನ್ನು ಜೋಡಿಸಿಕೊಂಡಿದ್ದಾರೆ. ಕಳೆದ ಒಂದು ವಾರದಿಂದ ಪಾಲಕರು ಮಕ್ಕಳಿಗೆ ಬೇಕಾದ ವಸ್ತುಗಳ ಖರೀದಿಯಲ್ಲಿ ಮಗ್ನರಾಗಿದ್ದಾರೆ. ಅತ್ತ ಬಟ್ಟೆ ಅಂಗಡಿಕಾರರು ಕೂಡ ವಿವಿಧ ಶಾಲೆಗಳ ಸಮವಸ್ತ್ರಗಳನ್ನು ಸಂಗ್ರಹಿಸಿಕೊಂಡಿದ್ದಾರೆ. ಬಿಸಿಲು ಕಳೆದು ಸಂಜೆಯಾಗುತ್ತಿದ್ದಂತೆಯೇ ನಗರದ ಪ್ರಮುಖ ಮಾರುಕಟ್ಟೆಯಲ್ಲಿ ಪಾಲಕರು ಹಾಗೂ ಮಕ್ಕಳ ದಂಡು ನೆರೆಯುತ್ತಿದೆ. ಎತ್ತ ಕಣ್ಣು ಹಾಯಿಸಿದರೂ ಪುಸ್ತಕ, ಸಮವಸ್ತ್ರ, ಶೂ ಖರೀದಿಸುವ ನೋಟವೇ ಕಂಡುಬರುತ್ತಿದೆ. ಮಳಿಗೆಗಳಲ್ಲಿ ಅಗತ್ಯ ವಸ್ತುಗಳ ಖರೀದಿ ಭರಾಟೆ ಜೋರಾಗಿದೆ.

ಚಾಲಕರ ಉತ್ಸಾಹ

ಎರಡು ತಿಂಗಳಿನಿಂದ ಶಾಲೆಗೆ ರಜೆ ಇದ್ದ ಕಾರಣ ಶಾಲಾ ವಾಹನಗಳ ಚಾಲಕರು ಶೈಕ್ಷಣಿಕ ವರ್ಷಾರಂಭದ ಉತ್ಸಾಹದಲ್ಲಿದ್ದಾರೆ. ಮಕ್ಕಳನ್ನು ಸುರಕ್ಷಿತವಾಗಿ ಕರೆದೊಯ್ಯಲು ಆಟೋ ಸೇರಿದಂತೆ ತಮ್ಮ ವಾಹನಗಳನ್ನು ಸಿದ್ಧಗೊಳಿಸುತ್ತಿದ್ದಾರೆ. ಹೊಸ ವಿದ್ಯಾರ್ಥಿಗಳ ಪಾಲಕರ ವಿಶ್ವಾಸ ಗಳಿಸಿಕೊಳ್ಳಲು ತವಕಿಸುತ್ತಿದ್ದಾರೆ. ಕೆಲವು ಖಾಸಗಿ ಶಾಲೆಗಳು ತಮ್ಮ ವಾಹನಗಳ ದರವನ್ನು ಈಗಾಗಲೇ ಹೆಚ್ಚಿಸುವ ನಿಟ್ಟಿನಲ್ಲಿ ಆಲೋಚಿಸುತ್ತಿವೆ. ಇದರಿಂದ ಪಾಲಕರು ಖಾಸಗಿ ವಾಹನಗಳನ್ನೇ ಅವಲಂಬಿಸಲು ಚಿಂತನೆ ನಡೆಸಿದ್ದಾರೆ. ಒಟ್ಟಿನಲ್ಲಿ ಕಳೆದೆರಡು ತಿಂಗಳ ಶಾಲಾ ರಜೆ ಕಳೆದು ಶೈಕ್ಷಣಿಕ ಚಟುವಟಿಕೆ ಮತ್ತೇ ಗರಿಗೆದರುವ ಕಾಲ ಸನ್ನಿಹಿತಿವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ