ಆ್ಯಪ್ನಗರ

ಶ್ರೀ ಕೃಷ್ಣ ಗೊಲ್ಲ ಸಮಾಜದಿಂದ ಕೃಷ್ಣ ಜನ್ಮಾಷ್ಠಮಿ ಆಚರಣೆ

ಲಕ್ಕುಂಡಿ : ಇಲ್ಲಿಯ ಶ್ರೀ ಕೃಷ್ಣಗೊಲ್ಲ ಸಮಾಜದ ವತಿಯಿಂದ ಕೃಷ್ಣ ಜನ್ಮಾಷ್ಟಮಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಶನಿವಾರ ಮುಂಜಾನೆ ಶ್ರೀ ಕೃಷ್ಣ ಮಂದಿರದಲ್ಲಿ ಕೃಷ್ಣ ಮೂರ್ತಿಗೆ ವಿಶೇಷ ಹೂವುಗಳಿಂದ ಅಲಂಕರಿಸಿ ರುದ್ರಾಭಿಷೇಕ ನೆರವೇರಿಸಲಾಯಿತು. ನಂತರ

Vijaya Karnataka 25 Aug 2019, 5:00 am
ಲಕ್ಕುಂಡಿ : ಇಲ್ಲಿಯ ಶ್ರೀ ಕೃಷ್ಣಗೊಲ್ಲ ಸಮಾಜದ ವತಿಯಿಂದ ಕೃಷ್ಣ ಜನ್ಮಾಷ್ಟಮಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
Vijaya Karnataka Web GDG-24LKD3A
ಲಕ್ಕುಂಡಿಯಲ್ಲಿ ಕೃಷ್ಣ ಹಾಗೂ ರಾಧೆ ವೇಷ ಧರಿಸಿದ ಮಕ್ಕಳನ್ನು ಮೆರವಣಿಗೆ ಮೂಲಕ ಕರೆ ತರಲಾಯಿತು.

ಶನಿವಾರ ಮುಂಜಾನೆ ಶ್ರೀ ಕೃಷ್ಣ ಮಂದಿರದಲ್ಲಿ ಕೃಷ್ಣ ಮೂರ್ತಿಗೆ ವಿಶೇಷ ಹೂವುಗಳಿಂದ ಅಲಂಕರಿಸಿ ರುದ್ರಾಭಿಷೇಕ ನೆರವೇರಿಸಲಾಯಿತು. ನಂತರ ಮೂರ್ತಿಯನ್ನು ಮುತ್ತೈದೆಯರ ಪೂರ್ಣ ಕುಂಭದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ನಾಗನಾಥ ಭಜನಾ ಸಂಘದಿಂದ ವಿವಿಧ ಕೃಷ್ಣ ಪದಗಳೊಂದಿಗೆ ಮೆರವಣೆಗೆ ನಡೆಯಿತು. ಈ ಸಂದರ್ಭದಲ್ಲಿ ಪುಟ್ಟ ಮಕ್ಕಳು ಕೃಷ್ಣನ ವೇಷ ಧರಿಸಿದ್ದು ಅಕರ್ಷಿಸಿತು.

ದೇವಸ್ಥಾನ ತಲುಪಿದ ಮೆರವಣೆಗೆ ಶ್ರೀ ಕೃಷ್ಣ ವೇಷ ಧರಿಸಿದ ವಿಶ್ವಾಸ ಬೆಂತೂರ ಮತ್ತು ರಾಧೆಯ ವೇಷ ಧರಿಸಿದ ರೇವತಿ ಹೊಸಮನಿ ಎಂಬ ಮಕ್ಕಳನ್ನು ಪೂರ್ಣ ಕುಂಭದೊಂದಿಗೆ ಅವರ ಮನೆಯಿಂದ ದೇವಸ್ಥಾನದವರೆಗೂ ಮೆರವಣಿಗೆ ಮುಖಾಂತರ ಕರೆ ತರಲಾಯಿತು.

ನಂತರ ಮೇಲೆ ಕಟ್ಟಿದ ಮೊಸರು ಗಡಿಗೆಯನ್ನು ಕೃಷ್ಣ ತನ್ನ ಕೊಳಲಿನಿಂದ ಹೊಡೆದು ಹಾಕಿದನು. ಇದರ ಪ್ರಸಾದವನ್ನು ಭಕ್ತಾದಿಗಳು ತೆಗೆದುಕೊಂಡರು. ನಂತರ ಅನ್ನಸಂತರ್ಪಣೆ ಜರುಗಿತು.

ಇದಕ್ಕೂ ಪೂರ್ವ ಹಿಂದಿನ ರಾತ್ರಿ ಶ್ರೀ ಕೃಷ್ಣನನ್ನು ತೊಟ್ಟಿಲಿಗೆ ಹಾಕಿ ತೊಟ್ಟಲೋತ್ಸವ ಕಾರ್ಯಕ್ರಮವು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು. ಈ ಸಂದರ್ಭದಲ್ಲಿ ಮುತೈದೆಯರು ಸಂಪ್ರದಾಯದಂತೆ ಜೋಗುಳ ಪದ ಹಾಡಿ ಸಂಭ್ರಮಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ