ಆ್ಯಪ್ನಗರ

ಸಂಭ್ರಮದ ರಂಜಾನ್‌ ಆಚರಣೆ

ನರೇಗಲ್ಲ: ಮುಸ್ಲಿಂ ಸಮಾಜದವರು ರಂಜಾನ್‌ ಹಬ್ಬ ಆಚರಿಸಿದರು. ನರೇಗಲ್ಲ ಪೊಲೀಸ್‌ ಸಿಬ್ಬಂದಿ ಹಾಗೂ ನಾಗರಿಗರ ಸಹಯೋಗದಲ್ಲಿ ರಂಜಾನ್‌ ಹಾಗೂ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಟ್ಟು ನೀರು ಹಾಕಿ ಹಸಿರು ಸಂರಕ್ಷ ಣೆಗೆ ಸಲಹೆ ನೀಡಿದರು.

Vijaya Karnataka 7 Jun 2019, 5:00 am
ನರೇಗಲ್ಲ: ಮುಸ್ಲಿಂ ಸಮಾಜದವರು ರಂಜಾನ್‌ ಹಬ್ಬ ಆಚರಿಸಿದರು. ನರೇಗಲ್ಲ ಪೊಲೀಸ್‌ ಸಿಬ್ಬಂದಿ ಹಾಗೂ ನಾಗರಿಗರ ಸಹಯೋಗದಲ್ಲಿ ರಂಜಾನ್‌ ಹಾಗೂ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಟ್ಟು ನೀರು ಹಾಕಿ ಹಸಿರು ಸಂರಕ್ಷ ಣೆಗೆ ಸಲಹೆ ನೀಡಿದರು.
Vijaya Karnataka Web celebration of ramzan
ಸಂಭ್ರಮದ ರಂಜಾನ್‌ ಆಚರಣೆ


ನರೇಗಲ್ಲ ಹೋಬಳಿಯ ಅಬ್ಬಿಗೇರಿ, ಯರೇಬೇಲೇರಿ, ಕುರುಡಗಿ, ಡಿ.ಎಸ್‌.ಹಡಗಲಿ, ನಿಡಗುಂದಿ, ಜಕ್ಕಲಿ, ಮಾರನಬಸರಿ, ಗುಜಮಾಗಡಿ, ಹೊಸಳ್ಳಿ, ಹಾಲಕೇರಿ, ಕೋಚಲಾಪುರ ಮೊದಲಾದ ಕಡೆಗಳಲ್ಲಿ ಹಬ್ಬದ ಖುಷಿ ಮನೆ ಮಾಡಿತ್ತು. ಮುಸ್ಲಿಂ ಸಮಾಜದವರು ಹಿಂದುಗಳನ್ನು ತಮ್ಮ ಮನೆಗೆ ಕರೆದು ರಂಜಾನ್‌ ಹಬ್ಬದ ವಿಶೇಷ ಸುರ್‌ ಕುಂಬಾ ಕೊಟ್ಟು ಸ್ನೇಹತ್ವ ಮೆರೆದರು.

ಮಸೀದಿ, ಈದ್ಗಾಗಳಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ತಮ್ಮ ಶಕ್ತಿಗನುಸಾರವಾಗಿ ಮಸ್ಲಿಂ ಸಮುದಾಯದವರು ದಾನ ದಾನ ಮಾಡಿದರು.

ನಿವೃತ್ತ ಶಿಕ್ಷ ಕ ಎ. ಆರ್‌. ರಾಹುತ್‌ , ಎ.ಎ.ನವಲಗುಂದ, ದಾವುದಲಿ ಕುದರಿ ಅನೇಕರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ಪೊಲೀಸ್‌ ಠಾಣೆಯಲ್ಲಿ ಸಸಿನೆಟ್ಟ ನಿವೃತ್ತ ಶಿಕ್ಷ ಕ ಎಂ. ಎಸ್‌. ಧಡೇಸೂರಮಠ, ಕುಬೇರ ಜೋಗಿ, ಶೇಖಪ್ಪ ಲಕ್ಕನಗೌಡ್ರ, ಶರಣಪ್ಪ ಗುಡ್ಲಾನೂರ ಪಾಲ್ಗೊಂಡಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ