ಆ್ಯಪ್ನಗರ

ಯಶಸ್ಸಿಗೆ ಸ್ವಯೋಜನೆ ಪಾತ್ರ ಮುಖ್ಯ

ಗದಗ :ಸಾಧಕರು ತಾವು ಕೈಗೊಂಡ ಯಾವುದೇ ಕಾರ್ಯಗಳನ್ನು ತಮ್ಮದೆ ನಿರ್ದಿಷ್ಟವಾದ ಯೋಜನೆಗಳ ಹಿನ್ನೆಲೆಯಲ್ಲಿ ಸಾಧಿಸಿಕೊಳ್ಳುತ್ತಾರೆ. ಹೀಗೆ ಸಾಧಿಸಿಕೊಳ್ಳುವಲ್ಲಿ ದೃಢವಾದ ಸಂಕಲ್ಪ ಹೊಂದಿರುತ್ತಾರೆ ಎಂದು ಯುಪಿಎಸ್‌ಸಿ ಪರೀಕ್ಷೆಯಲ್ಲಿ ದೇಶಕ್ಕೆ 17 ಮತ್ತು ರಾಜ್ಯಕ್ಕೆ ಪ್ರಥಮ ರಾರ‍ಯಂಕ್‌ ಪಡೆದ ರಾಹುಲ್‌ ಸಂಕನೂರ ಹೇಳಿದರು.

Vijaya Karnataka 21 Apr 2019, 5:00 am
ಗದಗ :ಸಾಧಕರು ತಾವು ಕೈಗೊಂಡ ಯಾವುದೇ ಕಾರ್ಯಗಳನ್ನು ತಮ್ಮದೆ ನಿರ್ದಿಷ್ಟವಾದ ಯೋಜನೆಗಳ ಹಿನ್ನೆಲೆಯಲ್ಲಿ ಸಾಧಿಸಿಕೊಳ್ಳುತ್ತಾರೆ. ಹೀಗೆ ಸಾಧಿಸಿಕೊಳ್ಳುವಲ್ಲಿ ದೃಢವಾದ ಸಂಕಲ್ಪ ಹೊಂದಿರುತ್ತಾರೆ ಎಂದು ಯುಪಿಎಸ್‌ಸಿ ಪರೀಕ್ಷೆಯಲ್ಲಿ ದೇಶಕ್ಕೆ 17 ಮತ್ತು ರಾಜ್ಯಕ್ಕೆ ಪ್ರಥಮ ರಾರ‍ಯಂಕ್‌ ಪಡೆದ ರಾಹುಲ್‌ ಸಂಕನೂರ ಹೇಳಿದರು.
Vijaya Karnataka Web GDG-20RUDRAGOUD5
ಗದಗನ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೊತ್ತರ ಅಧ್ಯಯನ ಕೇಂದ್ರದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ದೇಶಕ್ಕೆ 17ನೇ ರಾರ‍ಯಂಕ್‌ ಪಡೆದ ರಾಹುಲ್‌ ಸಂಕನೂರ ಅವರನ್ನು ಸನ್ಮಾನಿಸಲಾಯಿತು.


ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೊತ್ತರ ಅಧ್ಯಯನ ಕೇಂದ್ರದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಸಣ್ಣ ಕನಸುಗಳನ್ನು ಕಾಣಬಾರದು. ತಾವು ಕಾಣುವ ದೊಡ್ಡ ಕನಸುಗಳನ್ನು ಈಡೇರಿಸಿಕೊಳ್ಳುವಲ್ಲಿ ಸರಿಯಾದ ಮಾರ್ಗದರ್ಶನ ಮತ್ತು ಸಾಧಿಸಲೇಬೇಕು ಎಂಬ ಅಚಲ ಮನಸ್ಸಿನಿಂದ ಮುನ್ನುಗ್ಗಬೇಕು. ಅನೇಕ ಸಾಧಕರ ಸಾಧನೆಗಳನ್ನು ಕಣ್ಣ ಮುಂದಿನ ಪ್ರೇರಣೆಗಳನ್ನಾಗಿ ಇಟ್ಟುಕೊಳ್ಳಬೇಕು. ಸಾಧಿಸುವ ದಾರಿಯಲ್ಲಿ ಬರುವ ಎಡರು-ತೊಡರು ನಿವಾರಿಸಿಕೊಳ್ಳುವ ಗಟ್ಟಿ ಮನಸ್ಸು ಹೊಂದಿರಬೇಕು. ಬಾಹ್ಯವಾಗಿ ನಮ್ಮನ್ನು ಸೆಳೆಯುವ ಅನಗತ್ಯವಾದ ಅಂಶಗಳಿಂದ ಅಂತರ ಸಾಧಿಸಿಕೊಳ್ಳಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳ ಅನೇಕ ಪ್ರಶ್ನೆಗಳಿಗೆ ಸಮರ್ಪಕ ಉತ್ತರಗಳನ್ನು ಕೊಡುವುದರ ಮೂಲಕ ಮಾರ್ಗದರ್ಶನ ಮಾಡಿದರು.

ಅಧ್ಯಕ್ಷ ತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಎಸ್‌.ಎಫ್‌. ಸಿದ್ನೆಕೊಪ್ಪ ಮಾತನಾಡಿ, ರಾಹುಲ್‌ ಸಂಕನೂರ ಅವರು ಗದಗ ಜಿಲ್ಲೆಗೆ ಮತ್ತು ಉತ್ತರ ಕರ್ನಾಟಕದ ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ. ವಿದ್ಯಾರ್ಥಿ ಸಮೂಹಕ್ಕೆ ಆದರ್ಶವಾದ ವ್ಯಕ್ತಿತ್ವ ಹೊಂದಿದ್ದಾರೆ. ಕೇವಲ ವಿದ್ಯಾರ್ಥಿಗಳು ಕುರುಡು ಮಾದರಿಯಲ್ಲಿ ಪದವಿ ಪಡೆದು ನನಗೆ ಸರ್ಕಾರಿ ಉದ್ಯೋಗ ದೊರೆಯಲಿಲ್ಲವೆಂದು ಕೊರಗುವುದಕಿಂತ ಸಾಧಿಸುವ ಛಲದಂಕ ಮಲ್ಲರಾಗಬೇಕು. ಸಾಧನೆ ಮರೆಯಬಲ್ಲ ಯುವ ಸಮುದಾಯಕ್ಕೆ ರಾಹುಲ ಅವರು ಸ್ಫೂರ್ತಿಯಾಗಿದ್ದಾರೆ ಎಂದು ಹೇಳಿದರು.

ವಿಭಾಗದ ಮುಖ್ಯಸ್ಥ ಪ್ರೊ.ಬಿ.ಬಿ.ಅಯ್ಯಪ್ಪನವರ, ಡಾ.ರಮೇಶ ಕಲ್ಲನಗೌಡರ, ಪ್ರಾಧ್ಯಾಪಕರು, ಉಪನ್ಯಾಸಕರು, ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ