ಆ್ಯಪ್ನಗರ

ಮೈಸೂರಿನ ದಂಪತಿ ಮಡಿಲಿಗೆ ಮಗು

ಗದಗ: ಪಾಲಕ ಪೋಷಕರಿಲ್ಲದೆ ಅನಾಥವಾಗಿರುವ ಮಕ್ಕಳು ದತ್ತು ಪೋಷಕ ಕೇಂದ್ರದಲ್ಲಿಪೋಷಣೆಗೊಳ್ಳುತ್ತಿರುವ ಮಕ್ಕಳು ದಂಪತಿಗಳ ಮಡಿಲು ಸೇರುತ್ತಿರುವುದು ಪುಣ್ಯದ ಕಾರ್ಯ ಎಂದು ಡಾ.ಸಂಜೀವ ಜೋಷಿ ಹೇಳಿದರು.

Vijaya Karnataka 28 Aug 2019, 5:00 am
ಗದಗ: ಪಾಲಕ ಪೋಷಕರಿಲ್ಲದೆ ಅನಾಥವಾಗಿರುವ ಮಕ್ಕಳು ದತ್ತು ಪೋಷಕ ಕೇಂದ್ರದಲ್ಲಿಪೋಷಣೆಗೊಳ್ಳುತ್ತಿರುವ ಮಕ್ಕಳು ದಂಪತಿಗಳ ಮಡಿಲು ಸೇರುತ್ತಿರುವುದು ಪುಣ್ಯದ ಕಾರ್ಯ ಎಂದು ಡಾ.ಸಂಜೀವ ಜೋಷಿ ಹೇಳಿದರು.
Vijaya Karnataka Web GDG-27RUDRAGOUD20
ಬೆಟಗೇರಿಯ ಸೇವಾಭಾರತಿ ಟ್ರಸ್ಟ್‌ನ ಅಮೂಲ್ಯ ವಿಶೇಷ ದತ್ತು ಸ್ವೀಕಾರ ಸಂಸ್ಥೆಯ ಹೆಣ್ಣು ಮಗುವನ್ನು ದತ್ತು ಪೂರ್ವ ಪೋಷಕತ್ವಕ್ಕೆ ಮೈಸೂರಿನ ದಂಪತಿ ಮಡಿಲಿಗೆ ಹಸ್ತಾಂತರ ಸಮಾರಂಭದಲ್ಲಿಡಾ.ಸಂಜೀವ ಜೋಷಿ ಮಾತನಾಡಿದರು.


ಮಂಗಳವಾರ ಬೆಟಗೇರಿಯ ಸೇವಾಭಾರತಿ ಟ್ರಸ್ಟ್‌ನ ಅಮೂಲ್ಯ ವಿಶೇಷ ದತ್ತು ಸ್ವೀಕಾರ ಸಂಸ್ಥೆಯ ಹೆಣ್ಣು ಮಗುವನ್ನು ದತ್ತು ಪೂರ್ವ ಪೋಷಕತ್ವಕ್ಕೆ ಮೈಸೂರಿನ ಮಕ್ಕಳಿಲ್ಲದ ದಂಪತಿ ಮಡಿಲಿಗೆ ಹಸ್ತಾಂತರಿಸಿ ಮಾತನಾಡಿದರು.

ಯಾವುದೇ ಆಡಂಬರವಿಲ್ಲದೆ ಸದ್ದುಗದ್ದಲವಿಲ್ಲದೆ ಸಾಮಾಜಿಕ ಕಾರ್ಯದಲ್ಲಿತೊಡಗಿರುವ ಅಮೂಲ್ಯ ವಿಶೇಷ ದತ್ತು ಸ್ವೀಕಾರ ಸಂಸ್ಥೆ ಇತರ ಅನಾಥ ಆಶ್ರಮಗಳಿಗೆ ಮಾದರಿಯಾಗಿದೆ. ಮಕ್ಕಳಿಲ್ಲದ ಕೊರಗಿನಲ್ಲಿಜೀವನ ನಡೆಸುವ ದಂಪತಿಗಳು ಒಂದೆಡೆಯಾದರೆ ಇನ್ನೊಂದೆಡೆ ಹೆತ್ತ ಮಗುವನ್ನು ಎಲ್ಲೊಬಿಟ್ಟು ಆ ಮಗುವನ್ನು ಅನಾಥರನ್ನಾಗಿಸುವ ಕಾರ್ಯವೂ ನಡೆದಿರುವುದು ದುರಂತ ಎಂದರು.

ರಜನಿ ಜೋಷಿ ಮಾತನಾಡಿ, ಮಕ್ಕಳಿಲ್ಲದ ಕೊರಗಿನಲ್ಲಿರುವ ದಂಪತಿ ಮಡಿಲಿಗೆ ಹಾಕಿರುವ ಈ ಮಗುವಿನಿಂದ ಅವರ ಮನೆ-ಮನ ಬೆಳಕಾಗಲಿ. ಅಮೂಲ್ಯ ಜೀವವನ್ನು ಯಾವುದೇ ಕಾರಣಕ್ಕೂ ದುರಂತದ ಅಂತ್ಯಕ್ಕೆ ಅವಕಾಶ ಕೊಡಬಾರದು. ಈ ಹಿರಿದಾದ ಉದ್ದೇಶದಿಂದ ಅನಾಥ ಮಕ್ಕಳ ಅಮೂಲ್ಯ ಜೀವ ಸಂರಕ್ಷಿಸಲು ಮುಂದಾಗಿರುವ ಅಮೂಲ್ಯ ಸಂಸ್ಥೆಯ ಕಾರ್ಯ ನೀಜಕ್ಕೂ ಅಮೂಲ್ಯವಾದದ್ದು ಎಂದರು.

ಸಂಸ್ಥೆಯ ಕಾರ್ಯದರ್ಶಿ ಸುಭಾಸ ಬಬಲಾದಿ ಅಧ್ಯಕ್ಷತೆ ವಹಿಸಿ, ಸಂಸ್ಥೆ ನಡೆದು ಬಂದ ದಾರಿ, ಮುಂದಿನ ಯೋಜನೆ ಗುರಿಗಳನ್ನು ವಿವರಿಸಿ ಎಲ್ಲರ ಸಹಕಾರ ಕೋರಿದರು.ಮಗುವನ್ನು ಕಾನೂನು ಪ್ರಕಾರ ದತ್ತು ನೀಡಲಾಗುತ್ತಿದ್ದು ಕೇಂದ್ರದಿಂದ 29 ನೇ ಹೆಣ್ಣು ಮಗುವನ್ನು ನೀಡಲಾಗುತ್ತಿದೆ ಎಂದರು.

ಧಾರವಾಡ ವಿಭಾಗದ ಸಂಘ ಪ್ರಚಾರಕ ವಿಜಯಮಹಾಂತೇಶ, ಶ್ರೀಧರ ಉಡುಪಿ, ಪ್ರಹ್ಲಾದರಾಜ ಕಾರ್ಕಳ, ಲಲಿತಾಬಾಯಿ ಮೇರವಾಡೆ, ಬಸವರಾಜ ನಾಗಲಾಪೂರ, ಗುರುನಾಥ ಕಾಮಾರ್ತಿ, ಲಿಂಗರಾಜ ಅಮಾತ್ಯೆ, ಅಶ್ವಿನಿ ಖಟವಟೆ, ಪುಷ್ಪಲತಾ ಕಾಮಾರ್ತಿ, ಅಶ್ವಿನಿ ಜಗತಾಪ, ಹೇಮಾ ಪೊಂಗಾಲಿಯಾ ಇದ್ದರು.

ಗುರುಸಿದ್ದಪ್ಪ ಕೊಣ್ಣೂರ ಸ್ವಾಗತಿಸಿದರು. ಚೇತನ ಮೇರವಾಡೆ ನಿರೂಪಿಸಿದರು. ರಾಜೇಶ ಖಟವಟೆ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ