ಆ್ಯಪ್ನಗರ

ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ಕಲಿಸಿರಿ

ನರಗುಂದ: ಸಮಾಜದಲ್ಲಿಇಂದು ಅಹಿತಕರ ಘಟನೆಗಳು ಹೆಚ್ಚಾಗುತ್ತಿದ್ದು ಇದಕ್ಕೆ ಇಂದಿನ ಮಕ್ಕಳಿಗೆ ಸಿಗಬೇಕಾದ ಸಂಸ್ಕಾರದ ಕೊರತೆ ಕಾರಣ. ಇಂದಿನ ಮಕ್ಕಳಲ್ಲಿಹಿರಿಯರ ಬಗ್ಗೆ ಗೌರವ ನೀಡುವ ಸೌಜನ್ಯ ಇಲ್ಲ. ಹೀಗಾಗಿ ದೇಶದ ಅಭಿವೃದ್ಧಿಗೆ ಶಿಕ್ಷಣ ಕೊಡುವುದರ ಜತೆಗೆ ನಾಡಿನ ಸಂಸ್ಕೃತಿ, ಸಂಸ್ಕಾರ, ದೇಶ ಪ್ರೇಮ

Vijaya Karnataka 26 Jan 2020, 5:00 am
ನರಗುಂದ: ಸಮಾಜದಲ್ಲಿಇಂದು ಅಹಿತಕರ ಘಟನೆಗಳು ಹೆಚ್ಚಾಗುತ್ತಿದ್ದು ಇದಕ್ಕೆ ಇಂದಿನ ಮಕ್ಕಳಿಗೆ ಸಿಗಬೇಕಾದ ಸಂಸ್ಕಾರದ ಕೊರತೆ ಕಾರಣ. ಇಂದಿನ ಮಕ್ಕಳಲ್ಲಿಹಿರಿಯರ ಬಗ್ಗೆ ಗೌರವ ನೀಡುವ ಸೌಜನ್ಯ ಇಲ್ಲ. ಹೀಗಾಗಿ ದೇಶದ ಅಭಿವೃದ್ಧಿಗೆ ಶಿಕ್ಷಣ ಕೊಡುವುದರ ಜತೆಗೆ ನಾಡಿನ ಸಂಸ್ಕೃತಿ, ಸಂಸ್ಕಾರ, ದೇಶ ಪ್ರೇಮ ಕಲಿಸಿಕೊಡುವ ಜವಾಬ್ದಾರಿ ಪಾಲಕರ ಮೇಲಿದೆ ಎಂದು ನವೋದಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಿ.ವಿ.ಸೋಮಾಪೂರ ಹೇಳಿದರು.
Vijaya Karnataka Web children learn culture and culture
ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ಕಲಿಸಿರಿ


ಇಲ್ಲಿನ ನವೋದಯ ಶಿಕ್ಷಣ ಸಂಸ್ಥೆಯ ಕನ್ನಡ ಮತ್ತು ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜು ವಾರ್ಷಿಕ ಸ್ನೇಹ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಕ್ಕಳು ಶಾಲೆಗಿಂತ ಹೆಚ್ಚು ಸಮಯ ಮನೆಯಲ್ಲಿಕಳೆಯುವುದರಿಂದ ಅವರ ಗುರಿ ಏನು ಎಂಬುದನ್ನು ಅರಿತು ಅವರಿಗೆ ಪ್ರೋತ್ಸಾಹಿಸುವುದರ ಜತೆಗೆ ಸಂಸ್ಕಾರ, ಸಂಸ್ಕೃತಿ ಕಲಿಸಿಕೊಡುವುದು ಅವಶ್ಯವಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ತಹಸೀಲ್ದಾರ ಎ.ಎಚ್‌.ಮಹೇಂದ್ರ ಮಾತನಾಡಿ, ಐಎಎಸ್‌, ಐಪಿಎಸ್‌, ಕೆಎಎಸ್‌ ಆಗಿ, ದೇಶ ಕಾಯುವ ಸೈನಿಕರಾಗಲು ಪ್ರಾಥಮಿಕ ಶಿಕ್ಷಣ ಭದ್ರ ಬುನಾದಿಯಾಗಿದೆ. ಭವಿಷ್ಯದ ಭಾರತದ ಅಡಿಪಾಯವಾಗಿರುವ ಪ್ರಾಥಮಿಕ ಹಂತದಲ್ಲಿಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರು ಶ್ರಮಿಸುತ್ತಿದ್ದಾರೆ ಎಂದರು.

ನವೋದಯ ಪದವಿ ಪೂರ್ವ ಕಾಲೇಜು ಅಧ್ಯಕ್ಷ ವಿ.ಕೆ.ಗುಡಿಸಾಗರ ಮಾತನಾಡಿದರು. ಪ್ರಾಚಾರ್ಯ ಆರ್‌.ಎಸ್‌.ಪವಾರ ವಾರ್ಷಿಕ ವರದಿ ನೀಡಿದರು. ಎಸ್‌ಎಸ್‌ಎಲ್‌ಸಿಯಲ್ಲಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಎಸ್‌.ವಿ.ಸೋಮಾಪೂರ, ಹೋರಾಟಗಾರ ಎಸ್‌.ಬಿ.ಜೋಗಣ್ಣವರ ಹಾಗೂ ಶಿಕ್ಷಕ ಬಳಗ ಪಾಲ್ಗೊಂಡಿದ್ದರು. ವಿಶಾಲಾಕ್ಷಿ ಸಂಗಡಿಗರಿಂದ ಪ್ರಾರ್ಥನೆ, ಕುಮಾರೇಶ್ವರಿ ಸಂಗಡಿಗರಿಂದ ಸ್ವಾಗತ ಗೀತೆ, ಐ.ಎಂ.ತಹಸೀಲ್ದಾರ ಸ್ವಾಗತಿಸಿ ನಿರೂಪಿಸಿದರು. ಎಚ್‌.ಎಂ.ಕುಂಬಾರ ವಂದಿಸಿದರು. ನಂತರ ಮಕ್ಕಳಿಂದ ನಡೆದ ಸಂಸ್ಕೃತಿಕ ಕಾರ್ಯಕ್ರಮಗಳು ಮನಸೊರೆಗೊಂಡವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ