ಆ್ಯಪ್ನಗರ

ಮಕ್ಕಳಿಗೆ ವಿಶೇಷ ಶಿಕ್ಷಣ ಅವಶ್ಯ

ಗದಗ: ಮಾನಸಿಕ ಕುಂಠಿತವು ಒಂದು ಬೆಳವಣಿಗೆಯ ಅಂಗವೈಕಲ್ಯತೆಯಾಗಿದ್ದು, ಇದು ಹೆಚ್ಚಾಗಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿಕಂಡು ಬರುತ್ತದೆ ಎಂದು ಅರುಣೋದಯ ಶಾಲೆಯ ಮುಖ್ಯೋಪಾಧ್ಯಾಯ ಮಲ್ಲಪ್ಪ ಹಕ್ಕಿ ಹೇಳಿದರು.

Vijaya Karnataka 16 Feb 2020, 5:00 am
ಗದಗ: ಮಾನಸಿಕ ಕುಂಠಿತವು ಒಂದು ಬೆಳವಣಿಗೆಯ ಅಂಗವೈಕಲ್ಯತೆಯಾಗಿದ್ದು, ಇದು ಹೆಚ್ಚಾಗಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿಕಂಡು ಬರುತ್ತದೆ ಎಂದು ಅರುಣೋದಯ ಶಾಲೆಯ ಮುಖ್ಯೋಪಾಧ್ಯಾಯ ಮಲ್ಲಪ್ಪ ಹಕ್ಕಿ ಹೇಳಿದರು.
Vijaya Karnataka Web children need special education
ಮಕ್ಕಳಿಗೆ ವಿಶೇಷ ಶಿಕ್ಷಣ ಅವಶ್ಯ


ನಗರದ ಅರುಣೋದಯ ವಿಶೇಷ ಮಕ್ಕಳ ಶಾಲೆಗೆ ಭೇಟಿ ನೀಡಿದ ನಗರದ ಕೆಎಲ್‌ಇ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಬಿಎ ಅಂತಿಮ ವರ್ಷದ ಗೃಹ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಅಂಗವೈಕಲ್ಯ ನ್ಯೂನ್ಯತೆ ಹೊಂದಿದ ಮಕ್ಕಳಲ್ಲಿಐಕ್ಯೂ ಪ್ರಮಾಣ 70 ಕ್ಕಿಂತ ಕಡಿಮೆಯಿರುತ್ತದೆ. ಇಂತಹ ಮಕ್ಕಳಿಗೆ ಅತೀ ಕಾಳಜಿಯಿಂದ, ತಾಳ್ಮೆಯಿಂದ ಹಾಗೂ ಭಾವನಾತ್ಮಕವಾಗಿ ಬೆರೆತು ಮಕ್ಕಳಿಗೆ ವಿಶೇಷ ಶಿಕ್ಷಣವನ್ನು ನೀಡಬೇಕಾಗುತ್ತದೆ. ಇಂತಹ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಕುಟುಂಬದವರು, ಶಾಲೆಯಲ್ಲಿನ ಗುರುಗಳು ಹಾಗೂ ಸಮಾಜದವರು ಕೂಡಾ ಕೈಜೋಡಿಸಬೇಕಾಗಿದೆ. ಏಕೆಂದರೆ ಇಂತಹ ಮಕ್ಕಳು ಪರಾವಲಂಬಿಗಳಾಗಿರುತ್ತಾರೆ. ಅವರನ್ನು ಐಕ್ಯೂ ಪ್ರಕಾರ ಸೌಮ್ಯ, ಮಧ್ಯಮ, ತೀವ್ರ ಮತ್ತು ಆಳವಾದ ಎಂದು ನಾಲ್ಕು ವಿಭಿನ್ನ ಹಂತಗಳಲ್ಲಿವರ್ಗಿಕರಿಸಲಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿವಿದ್ಯಾರ್ಥಿಗಳು ಅರುಣೋದಯ ವಿಶೇಷ ಮಕ್ಕಳೊಂದಿಗೆ ಬೆರೆತು ರಚನಾತ್ಮಕ ಚಟುವಟಿಕೆಗಳಾದ ದಾರದ ಪೇಟಿಂಗ್‌, ತರಕಾರಿ ಪೇಟಿಂಗ್‌, ಎಲೆ ಪೇಟಿಂಗ್‌, ಬೆರಳಿನಿಂದ ಪೇಟಿಂಗ್‌ ಮತ್ತು ಕ್ರೇಯಾನ್‌ ಪೇಟಿಂಗ್‌ ಮಾಡಿಸಿ ಸಂತೋಷಪಟ್ಟರು.

ಗೃಹ ವಿಜ್ಞಾನ ವಿಭಾಗದ ಮುಖ್ಯಸ್ಥೆ ಪ್ರೊ.ವೀಣಾ ತಿರ್ಲಾಪುರ ಅವರ ನೇತೃತ್ವದಲ್ಲಿವಿಶೇಷ ವಿಸ್ತರಣಾ ಚಟುವಟಿಕೆಗಳು ನಡೆದವು. ಮುಖ್ಯೋಪಾಧ್ಯಾಯ ಮಲ್ಲಪ್ಪ ಹಕ್ಕಿ, ಜಯಶ್ರೀ ಭಾವರೆ, ದೀಪಾ ಹಳಗತ್ತಿ, ರೇಣುಕಾ ದಾಸರ, ಜಗದೀಶ ಹಡಪದ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ