ಆ್ಯಪ್ನಗರ

ಶಾಲೆ ಆರಂಭಕ್ಕೆ ಮಕ್ಕಳ, ಶಿಕ್ಷ ಕರ ಸಂಭ್ರಮ

ಮುಂಡರಗಿ :ತಾಲೂಕಿನ ನಾನಾ ಶಾಲೆಗಳಲ್ಲಿ ಮಂಗಳವಾರ ಪ್ರಾಥಮಿಕ ಶಾಲೆಯ ಆರಂಭವನ್ನು ಉತ್ಸಾಹದಿಂದ ಮಕ್ಕಳು, ಶಿಕ್ಷ ಕರು ಆರಂಭಿಸಿದ್ದು, ಮಕ್ಕಳು ಸಂಭ್ರಮ ಸಡಗರದಿಂದ ಶಾಲೆಗೆ ಬಂದಿದ್ದರು.

Vijaya Karnataka 30 May 2018, 5:00 am
ಮುಂಡರಗಿ :ತಾಲೂಕಿನ ನಾನಾ ಶಾಲೆಗಳಲ್ಲಿ ಮಂಗಳವಾರ ಪ್ರಾಥಮಿಕ ಶಾಲೆಯ ಆರಂಭವನ್ನು ಉತ್ಸಾಹದಿಂದ ಮಕ್ಕಳು, ಶಿಕ್ಷ ಕರು ಆರಂಭಿಸಿದ್ದು, ಮಕ್ಕಳು ಸಂಭ್ರಮ ಸಡಗರದಿಂದ ಶಾಲೆಗೆ ಬಂದಿದ್ದರು.
Vijaya Karnataka Web children start school and celebrate
ಶಾಲೆ ಆರಂಭಕ್ಕೆ ಮಕ್ಕಳ, ಶಿಕ್ಷ ಕರ ಸಂಭ್ರಮ


ತಾಲೂಕಿನ ಬಹುತೇಕ ಶಾಲೆಗಳಲ್ಲಿ ಮುಂಡರಗಿ, ಕಲಕೇರಿ, ಹೆಸರೂರು, ಬೂದಿಹಾಳ, ವಿರುಪಾಪೂರ, ಶಿಂಗಟಾಲೂರು, ಶೀರನಹಳ್ಳಿ, ಗಂಗಾಪೂರ, ಹಿರೇವಡ್ಡಟ್ಟಿ, ಹಳ್ಳಿಗುಡಿ, ಹಳ್ಳಿಕೇರಿ, ತಿಪ್ಪಾಪೂರ, ಬೀಡನಾಳ, ಜಾಲವಾಡಗಿ, ದಿಂಡೂರ,ಡೋಣಿ ಅತ್ತಿಕಟ್ಟಿ ಸೇರಿದಂತೆ ಅನೇಕ ಶಾಲೆಗಳಲ್ಲಿ ಮಕ್ಕಳು ಉತ್ಸಾಹದಿಂದ ಶಾಲೆಗೆ ಬಂದರೆ ಮಕ್ಕಳನ್ನು ಶಿಕ್ಷ ಕರು ಖುಷಿಯಿಂದ ಬರಮಾಡಿಕೊಂಡಿದ್ದು ಕಂಡು ಬಂದಿತು. ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ಗುಲಾಬಿ, ಹೂವು, ಚಾಕಲೇಟ್‌, ನೀಡಲಾಗಿದೆ.

ಮಧ್ಯಾಹ್ನ ಊಟಕ್ಕೆ ಹುಗ್ಗಿ, ಲಾಡು: ಮುಂಡರಗಿ ಕೋಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹುಗ್ಗಿ, ಅನ್ನ, ಸಾರು, ಮೇವುಂಡಿ ಶಾಲೆಯಲ್ಲಿ ಬೂಂದಿ ಲಾಡುಗಳನ್ನು ಊಟಕ್ಕೆ ಕೊಡಲಾಗಿದೆ.

ಕೆಲವು ಶಾಲೆಗಳಲ್ಲಿ ಆರಂಭೋತ್ಸವ ಕಾರ್ಯಕ್ರಮ ಏರ್ಪಡಿಸಿ ಎಸ್‌ಡಿಎಂಸಿ ಸದಸ್ಯರನ್ನು ಒಳಗೊಂಡು ಮಕ್ಕಳಿಗೆ ಪಠ್ಯಪುಸ್ತಕ ವಿತರಿಸಲಾಗಿದೆ. ಹಸಿರು ತೋರಣ ಸಿಂಗಾರ, ರಂಗೋಲಿ ಚಿತ್ತಾರ ಮಕ್ಕಳಲ್ಲಿ ಸಂಭ್ರಮ ಮನೆ ಮಾಡುವಂತೆ ಮಾಡಿದ್ದು, ಈ ಬಾರಿಯ ಶಾಲೆಯ ಆರಂಭೋತ್ಸವದ ವಿಶೇಷವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ