ಆ್ಯಪ್ನಗರ

ಕಲಾವಿದನ ಕೈಯಲ್ಲಿ ಅರಳಲಿದೆ ಚಿತ್ತಾರ

ಲಕ್ಷ್ಮೇಶ್ವರ : ಐತಿಹಾಸಿಕ ಪ್ರಸಿದ್ದವಾದ ಹಿಂದಿನ ಪುಲಗೆರೆ ಇಂದಿನ ಲಕ್ಷ್ಮೇಶ್ವರದಲ್ಲಿ ಅನೇಕ ಸುಂದರ ಕಲ್ಲಿನ ಕೆತ್ತನೆ ದೇವಾಲಯ, ಮಸೀದಿಗಳು ಇಲ್ಲಿವೆ. ಈ ಪ್ರದೇಶ ಸುತ್ತಮುತ್ತ ಎಲ್ಲಿಯೇ ಭೂಮಿ ಅಗೆದರೂ ಶಿಲಾಶಾಸನಗಳು ಭಿನ್ನಗೊಂಡ ಮೂರ್ತಿಗಳು ಇಲ್ಲಿ ಸಿಗುತ್ತವೆ.

Vijaya Karnataka 3 Jan 2019, 5:00 am
ಲಕ್ಷ್ಮೇಶ್ವರ : ಐತಿಹಾಸಿಕ ಪ್ರಸಿದ್ದವಾದ ಹಿಂದಿನ ಪುಲಗೆರೆ ಇಂದಿನ ಲಕ್ಷ್ಮೇಶ್ವರದಲ್ಲಿ ಅನೇಕ ಸುಂದರ ಕಲ್ಲಿನ ಕೆತ್ತನೆ ದೇವಾಲಯ, ಮಸೀದಿಗಳು ಇಲ್ಲಿವೆ. ಈ ಪ್ರದೇಶ ಸುತ್ತಮುತ್ತ ಎಲ್ಲಿಯೇ ಭೂಮಿ ಅಗೆದರೂ ಶಿಲಾಶಾಸನಗಳು ಭಿನ್ನಗೊಂಡ ಮೂರ್ತಿಗಳು ಇಲ್ಲಿ ಸಿಗುತ್ತವೆ.
Vijaya Karnataka Web chitra is coming out of the hands of the artist
ಕಲಾವಿದನ ಕೈಯಲ್ಲಿ ಅರಳಲಿದೆ ಚಿತ್ತಾರ


ಪಟ್ಟಣದಲ್ಲಿ ಸೋಮೇಶ್ವರ ದೇವಸ್ಥಾನ ಸೇರಿದಂತೆ ಶಂಖ ಬಸದಿ, ಕಲ್ಲಿನ ಸರಪಳಿ ಮಸೀದಿ ಸಹಸ್ರಲಿಂಗ ದೇವಸ್ಥಾನ, ಅಗಸ್ತ್ಯ ತೀರ್ಥ, ಪಾಶ್ವನಾಥ ಬಸದಿ, ಮಾಹಂತಿನಮಠ, ಲಕ್ಷ್ಮೀಲಿಂಗ ದೇವಸ್ಥಾನ, ಬಾಳೇಶ್ವರಮಠ ಸೇರಿದಂತೆ ಅನೇಕ ಪುರಾತನ ಬಾದಾಮಿ ಚಾಲುಕ್ಯರ ಕಾಲದ ದೇವಾಲಯ ಇಲ್ಲಿವೆ.

ಕಲಾಶಿಬಿರದಲ್ಲಿ ಪಾಲ್ಗೊಂಡ ನಾಡಿನ ಹೆಸರಾಂತ ಚಿತ್ರಕಲಾವಿದರು ಈ ಎಲ್ಲ ದೇವಾಲಯಗಳು, ಮಸೀದಿ, ಬಸದಿ ಇವೆಲ್ಲವುಗಳನ್ನು ತಮ್ಮ ಕುಂಚದ ಮುಖಾಂತರ ಸುಂದರ ಕಲಾಕೃತಿ ಬಿಡಿಸಿ ಪುಲಿಗೆರೆ ಉತ್ಸವದ ಕೊನೆ ದಿನ ಜ. 6 ರಂದು ಸಾರ್ವಜನಿಕ ಪ್ರದರ್ಶನಕ್ಕೆ ಇಡುತ್ತಾರೆ. ಇನ್ಫೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷ ಸುಧಾಮೂರ್ತಿಯವರು ಸೋಮೇಶ್ವರ ದೇವಸ್ಥಾನವನ್ನು ಜೀರ್ಣೋದ್ದಾರಗೊಳಿಸಿ ಭಕ್ತರಿಗೆ 2016 ಸಮರ್ಪನೆ ಮಾಡುವುದರೊಂದಿಗೆ ಸಂಗೀತ, ನೃತ್ಯ, ಜನಪದ ವೈವಿಧ್ಯ ಜತೆಗೆ ಕಲೆ ಪ್ರೋತ್ಸಾಹಿಸಬೇಕು ಎಂಬ ವಿಶಾಲ ಮನೋಭಾವದಿಂದ ಕಲಾವಿದರಿಗೆ ವೇದಿಕೆ ಕಲ್ಪಿಸುವ ದೃಷ್ಟಿಯಿಂದ ಕಲಾ ಶಿಬಿರದ ಮೂಲಕ ಚಿತ್ರಸಂಭ್ರಮ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ