ಆ್ಯಪ್ನಗರ

ಬಸ್‌ನಲ್ಲಿ ಶುದ್ಧ ಕುಡಿಯುವ ನೀರು!

ಮುಳಗುಂದ : ಬೇಸಿಗೆ ದಿನದಲ್ಲಿ ನೀರು ಸಿಗುವುದು ವಿರಳ ಇಂಥ ಸಮಯದಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರೊದಗಿಸುತ್ತಿರುವ ಈ ಚಾಲಕ ಹಾಗೂ ನಿರ್ವಾಹಕರ ಸೇವೆ ಶ್ಲಾಘನೀಯ.

Vijaya Karnataka 11 May 2019, 5:00 am
ಮುಳಗುಂದ : ಬೇಸಿಗೆ ದಿನದಲ್ಲಿ ನೀರು ಸಿಗುವುದು ವಿರಳ ಇಂಥ ಸಮಯದಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರೊದಗಿಸುತ್ತಿರುವ ಈ ಚಾಲಕ ಹಾಗೂ ನಿರ್ವಾಹಕರ ಸೇವೆ ಶ್ಲಾಘನೀಯ.
Vijaya Karnataka Web GDG-3MUL1
ಬಸ್‌ನಲ್ಲಿ ಕುಡಿಯಲು ಶುದ್ಧ ನೀರು ಇರಿಸಲಾಗಿದೆ


ಹುಬ್ಬಳ್ಳಿ -ಶಿರಹಟ್ಟಿ ರೂಟ್‌ ಬಸ್‌ ನಂ. ಕೆಎ 42 ಎಫ್‌ 1644ರಲ್ಲಿ ಹತ್ತಿದರೆ ಶುದ್ಧ ನೀರು ಲಭ್ಯ. ಹುಬ್ಬಳ್ಳಿ ಡಿಪೋಗೆ ಸೇರಿದ ಬಸ್‌ನಲ್ಲಿ ಚಾಲಕ ವಿ.ಎಸ್‌. ಬಡಿಗೇರ ಹಾಗೂ ನಿರ್ವಾಹಕ ವಿ.ಎಂ. ಹಾದಿಮನಿ ಅವರು ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರನ್ನು ಪ್ರಯಾಣಿಕರಿಗೆ ನೀಡುತ್ತಿದ್ದಾರೆ

ಇವರಿಬ್ಬರೂ ಹಲವು ವರ್ಷಗಳಿಂದ ಇದೇ ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಈ ಮಾರ್ಗದ ಪ್ರತಿ ಪ್ರಯಾಣಿಕರಿಗೂ ಇವರು ಚಿರಪರಿಚಿತರು.

ಶುದ್ಧ ಕುಡಿಯುವ ನೀರು ಬಸ್‌ನಲ್ಲಿ ಕಾಲಿಯಾದ ತಕ್ಷ ಣ ಮಾರ್ಗದಲ್ಲಿರುವ ಯಾವುದಾದರೂ ನೀರಿನ ಘಟಕಕ್ಕೆ ಓಡಿ ಹೋಗಿ ನೀರು ತುಂಬಿಸಿಕೊಂಡು ಹೆಗಲ ಮೇಲಿಟ್ಟುಕೊಂಡು ಬಂದು ಬಸ್‌ನಲ್ಲಿಡುತ್ತಾರೆ.

ಇವರಬ್ಬರು ನೀರಿನ ವ್ಯವಸ್ಥೆ ಮಾಡಿರುವುದನ್ನು ನೋಡಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಎಲ್ಲ ಬಸ್‌ಗಳಲ್ಲಿ ಈ ತೆರನಾದ ವ್ಯವಸ್ಥೆ ಮಾಡಿದರೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂಬುದು ಪ್ರಯಾಣಿಕರ ಒತ್ತಾಸೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ