ಆ್ಯಪ್ನಗರ

ಪ್ರಕೃತಿಯೊಂದಿಗೆ ಸಹಜೀವನ ಅನಿವಾರ‍್ಯ

ಗದಗ: ಪ್ರಕೃತಿ ನಿಯಮಗಳ ವಿರುದ್ಧ ಬಾಳುವುದು ಸಾಧ್ಯವಿಲ್ಲ. ಪ್ರಕೃತಿಯೊಂದಿಗೆ ಸಹಜೀವನ ಅನಿವಾರ್ಯ. ಪೂರ್ವಜರು ಆಯಾ ಕಾಲಮಾನಕ್ಕೆ ತಕ್ಕಂತೆ ಸೂಕ್ತ ಆಚರಣೆ ಮೂಲಕ ಹಬ್ಬ ಹರಿದಿನ ಆಚರಣೆಗೆ ತಂದಿದ್ದಾರೆ. ವೈಜ್ಞಾನಿಕ ದೃಷ್ಟಿ ಜೀವನಮುಖಿ ಚಿಂತನೆಯಿಂದ ಕೂಡಿದೆ. ಮನುಷ್ಯ ಕಾಲಮಾನಕ್ಕೆ ಹೊಂದಿಕೊಂಡು ಜೀವನ ಸಹನೀಯವಾಗಿಸಿಕೊಳ್ಳಬೇಕೆಂದು ನಿವೃತ್ತ ಶಿಕ್ಷಕ ಎಸ್‌.ಎಸ್‌.ಮಲ್ಲಾಪೂರ ಹೇಳಿದರು.

Vijaya Karnataka 21 Jan 2020, 5:00 am
ಗದಗ: ಪ್ರಕೃತಿ ನಿಯಮಗಳ ವಿರುದ್ಧ ಬಾಳುವುದು ಸಾಧ್ಯವಿಲ್ಲ. ಪ್ರಕೃತಿಯೊಂದಿಗೆ ಸಹಜೀವನ ಅನಿವಾರ್ಯ. ಪೂರ್ವಜರು ಆಯಾ ಕಾಲಮಾನಕ್ಕೆ ತಕ್ಕಂತೆ ಸೂಕ್ತ ಆಚರಣೆ ಮೂಲಕ ಹಬ್ಬ ಹರಿದಿನ ಆಚರಣೆಗೆ ತಂದಿದ್ದಾರೆ. ವೈಜ್ಞಾನಿಕ ದೃಷ್ಟಿ ಜೀವನಮುಖಿ ಚಿಂತನೆಯಿಂದ ಕೂಡಿದೆ. ಮನುಷ್ಯ ಕಾಲಮಾನಕ್ಕೆ ಹೊಂದಿಕೊಂಡು ಜೀವನ ಸಹನೀಯವಾಗಿಸಿಕೊಳ್ಳಬೇಕೆಂದು ನಿವೃತ್ತ ಶಿಕ್ಷಕ ಎಸ್‌.ಎಸ್‌.ಮಲ್ಲಾಪೂರ ಹೇಳಿದರು.
Vijaya Karnataka Web coexistence with nature is inevitable
ಪ್ರಕೃತಿಯೊಂದಿಗೆ ಸಹಜೀವನ ಅನಿವಾರ‍್ಯ


ಸ್ಥಳೀಯ ಕಬ್ಬಿಗರಕೂಟದ ಸಾಹಿತ್ಯ ಭವನದಲ್ಲಿಕಬ್ಬಿಗರಕೂಟ ಹಾಗೂ ಜಿಲ್ಲಾಚುಟುಕು ಸಾಹಿತ್ಯ ಪರಿಷತ್‌ ಸಹಯೋಗದಲ್ಲಿನಡೆದ ಸಂಕ್ರಾಂತಿ ಕವಿಗೋಷ್ಠಿ ಹಾಗೂ ಸುಗಮ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಂಕ್ರಾಂತಿ ಸಂದರ್ಭದಲ್ಲಿಎಳ್ಳು ಬೆಲ್ಲಸೇವನೆಗೆ ವಿಶೇಷ ಮಹತ್ವವಿದೆ. ಎಳ್ಳು ಸ್ನಿಗ್ಧ ಗುಣ ಹೊಂದಿದ್ದು ಇದರೊಂದಿಗೆ ಬೆಲ್ಲಸೇರಿಸಿ ಸವಿದಾಗ ದೇಹದ ಸಂಯಮ ಶಕ್ತಿ ಹೆಚ್ಚುತ್ತದೆ. ಸೂರ್ಯನ ಚಲನೆಗೆ ಅನುಗುಣವಾಗಿ ನಿಸರ್ಗದಲ್ಲಿಚಳಿ, ಮಳೆ, ಬಿಸಿಲು ಕಾಣಿಸಿಕೊಳ್ಳುತ್ತವೆ. ಉತ್ತರಾಯಣ ಪುಣ್ಯಕಾಲ ಸೂರ್ಯನ ಪಥ ಬದಲಾವಣೆ ಕ್ಷಣಮಾತ್ರವಲ್ಲ. ಅದು ಮನುಷ್ಯನ ಬದುಕಿನ ಬದಲಾವಣೆಗೂ ಕಾರಣವಾಗುತ್ತದೆ ಇದನ್ನೇ ಸಂಕ್ರಮಣ ಎಂದು ಕರೆಯುತ್ತಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಡಿ.ವಿ.ಬಡಿಗೇರ ಮಾತನಾಡಿ, ಸಂಕ್ರಮಣ ಎಂಬುದು ಮನುಷ್ಯನ ಬದುಕಿನಲ್ಲಿಬಂದು ಹೋಗುವ ಯುಗ ಧರ್ಮದ ಸ್ಥಿತ್ಯಂತರ. ಈ ಸ್ಥಿತ್ಯಂತರವನ್ನು ನಿರಾಕರಿಸುವಂತಿಲ್ಲ. ನಿರಾಕರಣೆ ನಿರಾಶೆಯ ಹತಾಶ ಭಾವದ ಪ್ರತೀಕ. ನೋವು ನಲಿವು ಸಮಚಿತ್ತದಿಂದ ಸ್ವೀಕರಿಸಿ ಬಾಳುವುದೇ ಜೀವನ ಕಲೆ. ಇದನ್ನೇ ಡಿವಿಯವರು ಬ್ರಹ್ಮಲೀಲೆಗೆ ಗೊತ್ತು ಗುರಿ ಇಲ್ಲ, ಬಂದುದನ್ನು ಅನುಭವಿಸುವುದೇ ನೆಮ್ಮದಿಗೆ ದಾರಿ ಎಂದಿದ್ದಾರೆಂದು ಹೇಳಿದರು. ಕವಿ, ಸಾಹಿತಿಗಳು ಕಲೆ, ಸಂಸ್ಕೃತಿಯ ರಕ್ಷಣೆಗಾಗಿ ಜನಮನದಲ್ಲಿಹಬ್ಬ ಹರಿದಿನಗಳು ಬಿಂಬಿಸುವ ಆದರ್ಶ ಜೀವನ ಸಂದೇಶ ಬಿತ್ತರಿಸಬೇಕೆಂದು ಕವಿಗಳಿಗೆ ಕಿವಿಮಾತು ಹೇಳಿದರು.

ಕಬ್ಬಿಗರ ಕೂಟದ ಅಧ್ಯಕ್ಷ ಮನೋಹರ ಮೇರವಾಡೆ ಮಾತನಾಡಿ, ಕಬ್ಬಿಗರಕೂಟ ಉದಯೋನ್ಮುಖ ಪ್ರತಿಭೆಗಳಿಗೆ ವೇದಿಕೆ ಒದಗಿಸುವ ಉದಾರ ಭಾವ ಹೊಂದಿದೆ ಎಂದರು.

ಲಕ್ಷೆತ್ರ್ಮೕಶ್ವರದ ಸಾಹಿತಿ ಪೂರ್ಣಾಜಿ ಕರಾಟೆ, ಕೊತ್ತಲ ಮಹಾದೇವಪ್ಪ, ಪತ್ರಕರ್ತ ಅಜಿತ್‌ ಘೋರ್ಪಡೆ, ಜಯಶ್ರೀ ಮೇರವಾಡೆ ಮಾತನಾಡಿದರು.

ಯಲ್ಲಮ್ಮ ಗೂಳರಡ್ಡಿ, ಭೂಮಿಕಾ ಅಡಕಿ, ಅನಸೂಯಾ ಮಿಟ್ಟಿ, ಮಲ್ಲಿಕಾರ್ಜುನ ಪೂಜಾರ, ಶ್ರೀದೇವಿ ಹಿರೇಮಠ, ವಿನೋದಾ ಕುಲಕರ್ಣಿ, ಗೀತಾ ಹೂಗಾರ, ಲಾಡಮಾ ನದಾಫ್‌, ನೀಲಮ್ಮ ಅಂಗಡಿ, ಜಯಶ್ರೀ ಅಂಗಡಿ, ಶಿವಾನಂದ ಗಡಾದ ಮುಂತಾದವರು ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ವಿಶಾಲ ಅಡಕಿ, ವೀರಣ್ಣ ಅಡಕಿ ಸಹ ವಾದ್ಯ ನುಡಿಸಿದರು.

ನಂತರ ನಡೆದ ಕವಿಗೋಷ್ಠಿಯಲ್ಲಿಕವಿಗಳು ಕವನ ಸಾದರ ಪಡಿಸಿದರು. ಅಜಿತ್‌ ಘೋರ್ಪಡೆ ಸ್ವಾಗತಿಸಿದರು. ಅಲ್ಲಾಸಾಬ ನದಾಫ್‌ ವಂದಿಸಿದರು. ಲಾಡಮಾ ನದಾಫ್‌ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ