ಆ್ಯಪ್ನಗರ

ಮುಗಿಯದ ಚಳಿ !

ನರಗುಂದ: ಈ ವರ್ಷ ಹೇಳಿಕೊಳ್ಳುವಷ್ಟು ಚಳಿಗಾಲ ಇಲ್ಲ, ಚಳಿಯಲ್ಲೂ30ಡಿಗ್ರಿಯಷ್ಟು ಬಿಸಿಲು, ಹೀಗಿರುವಾಗ ಚಳಿಗಾಲ ಮುಗಿತೂ ಅಂದುಕೊಳ್ಳುವ ಮುನ್ನವೆ ಮೈ ನಡುಗಿಸುವಂತ ಚಳಿ ಆರಂಭವಾಗಿದೆ.

Vijaya Karnataka 3 Feb 2020, 5:00 am
ನರಗುಂದ: ಈ ವರ್ಷ ಹೇಳಿಕೊಳ್ಳುವಷ್ಟು ಚಳಿಗಾಲ ಇಲ್ಲ, ಚಳಿಯಲ್ಲೂ30ಡಿಗ್ರಿಯಷ್ಟು ಬಿಸಿಲು, ಹೀಗಿರುವಾಗ ಚಳಿಗಾಲ ಮುಗಿತೂ ಅಂದುಕೊಳ್ಳುವ ಮುನ್ನವೆ ಮೈ ನಡುಗಿಸುವಂತ ಚಳಿ ಆರಂಭವಾಗಿದೆ.
Vijaya Karnataka Web cold cold
ಮುಗಿಯದ ಚಳಿ !


ಸಂಕ್ರಮನದ ನಂತರ ಚಳಿ ಸರಿದು ಬೇಸಿಗೆ ಆರಂಭವಾಗುವ ಬದಲು ಚಳಿಗಾಲ ಮುಂದುವರಿದಿರುವುದನ್ನು ಕಂಡ ಜನ ಕಾಲ ಬದಲಾಗೈತ್ರಿ ಎನ್ನುತ್ತಿದ್ದಾರೆ.

ಕಳೆದ ಒಂದು ವಾರದಿಂದ ರಾತ್ರಿ ತನ್ನನೆ ಗಾಳಿ, ಚಳಿ ಹೆಚ್ಚಾಗಿದೆ. ಮೂರು ದಿನದಿಂದ ಮಂಜು ಬೀಳುತ್ತಿದೆ. ಇದರಿಂದ ಜನರು ಚಳಿಗೆ ನಡುಗುತ್ತಿದ್ದಾರೆ. ಯಾವಾಗ ಬಿಸಿಲು ಬಿದ್ದೀತೋ ಎಂದು ಕಾಯುವಂತೆ ಮಾಡಿದೆ.

ಬೆಳಗಿನ ಜಾವ ದಟ್ಟವಾಗಿ ಬಿದ್ದ ಮಂಜು ಬೀಳುತ್ತಿದೆ. ದಟ್ಟವಾದ ಮಂಜಿನಿಂದ ದಾರಿ ಕಾಣದಂತಾಗಿದ್ದರಿಂದ ಲೈಟ್‌ಗಳನ್ನು ಹಚ್ಚಿಕೊಂಡು ವಾಹನಗಳು ಸಂಚರಿಸುವಂತಾಗಿದೆ. ವಾಹನ ಸವಾರರು ಮಂಜಿನಿಂದ ಆವರಿಸಿದ ವಾಹನಗಳ ಗ್ಲಾಸ್‌ಗಳನ್ನು ಆಗಾಗ ಒರೆಸಿಕೊಂಡು ಹೋಗುತ್ತಿರುವುದು ಕಂಡು ಬಂದಿತು.

ಮೈ ಕೊರೆಯುವ ಚಳಿಯಿಂದ ತಪ್ಪಿಸಿಕೊಳ್ಳಲು ಬಸ್‌ ನಿಲ್ದಾಣದ ಸುತ್ತಮುತ್ತ ಅಲ್ಲಲ್ಲಿಬೆಂಕಿ ಹೊತ್ತಿಸಿ ಮೈ ಕಾಯಿಸಿಕೊಳ್ಳುತ್ತಿರುವುದು ಕಂಡು ಬರುತ್ತಿದೆ.

ದಟ್ಟವಾದ ಮಂಜು, ಮೈ ನುಡುಗಿಸುವ ಚಳಿ ಹಿನ್ನೆಲೆಯಲ್ಲಿಜನ ಸಂಚಾರ ವಿರಳವಾಗಿತ್ತು. ಬೆಳಗಿನ ಜಾವ ವಾಯು ವಿವಾರಕ್ಕೆ ಬರುವವರ ಸಂಖ್ಯೆಯಲ್ಲೂಕಡಿಮೆಯಾಗಿತ್ತು. ಬಾಗಿಲುಗಳನ್ನು ಬದ್ರವಾಗಿ ಮುಚ್ಚಿಕೊಂಡು ಮನೆಯಲ್ಲಿಬೆಚ್ಚಗೆ ಮಲಗಿದ್ದರೆ ಶನಿವಾರ ಬೆಳಗ್ಗೆ ಶಾಲೆಗೆ ಹೋಗುವ ಮಕ್ಕಳಿಗೆ ಬೆಚ್ಚನೆ ಉಡುಪು ಹಾಕಿ, ತಾವು ಬೆಚ್ಚನೆ ಉಡುಪು ಧರಿಸಿ ಪಾಲಕರು ಶಾಲೆಗೆ ಬಿಟ್ಟಬರುವ ದೃಶ್ಯ ಕಂಡು ಬಂದಿತು.

ಚಳಿಗಾಲ ಮುಗಿದರೂ ಚಳಿ ಮುಂದುವರಿದಿರುವುದು ಜನರಲ್ಲಿಆಶ್ಚರ್ಯ ಮುಡಿಸಿದೆ. ಸಾಮಾನ್ಯವಾಗಿ ಡಿಸೆಂಬರ್‌ ತಿಂಗಳ ಕೊನೆಗೆ ಆರಂಭವಾಗಿ ಜ.15ಸಂಕ್ರಮಣಕ್ಕೆ ಮುಗಿಯಬೇದಾದ ಚಳಿ ಸಂಕ್ರಮಣದ ನಂತರವೆ ಹೆಚ್ಚಾಗುತ್ತಿರುವುದನ್ನು ಕಂಡ ಜನ ವಾತಾವರಣಕ್ಕೆ ಹೊಂದಿಕೊಳ್ಳಲು ಪರದಾಡುತ್ತಿದ್ದಾರೆ. ಮಳೆಗಾಲದಲ್ಲಿಬಾರದ ಮಳೆ, ಚಳಿಗಾಲದಲ್ಲಿಮಳೆ, ಸುಡು ಬಿಸಿಲು, ಬೇಸಿಗೆಯಲ್ಲಿಚಳಿ ಅನುಭವಿಸಿದ ಜನರನ್ನು ಹೀಗೆ ಕಾಲಗಳು ಬದಲಾಗಿವೆ ಎಂಬ ಪ್ರಶ್ನೆ ಕಾಡುವಂತೆ ಮಾಡಿದೆ.

ಜಾನುವಾರುಗಳಿಗೆ ರಕ್ಷಣೆ:
ಮೈ ಕೊರೆಯುವ ಚಳಿ ಹಿನ್ನೆಲೆಯಲ್ಲಿಜಾನುವಾರುಗಳ ಬೆನ್ನ ಮೇಲೆ ತಟ್ಟಿನ ಚೀಲಗಳನ್ನು ಹಾಕಿ ರಕ್ಷಣೆ ಮಾಡಿರುವುದು ದೃಶ್ಯ ಕಂಡು ಬಂದಿತು. ರೈತರು ಮನೆ ಹೊರಗಿನ ಶೆಡ್‌ನಲ್ಲಿ, ಮನೆ ಮುಂದೆ ಕಟ್ಟಿದ ತಮ್ಮ ಜಾನುವಾರುಗಳು ಚಳಿಗೆ ಆಗಬಾರದು ಎಂದು ರೈತರು ತಟ್ಟಿನ ಚೀಲವನ್ನು ಹೊದಿಸಿ ರಕ್ಷಣೆ ನೀಡುವಲ್ಲಿಮುಂದಾಗಿದ್ದರು. ಬೀದಿ ನಾಯಿಗಳು ಚಳಿಗೆ ಮೂಲೆಯಲ್ಲಿ,ಮನೆಯಲ್ಲಿಬೆಚ್ಚಗೆ ಮಲಗಿದ್ದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ