ಆ್ಯಪ್ನಗರ

ಪಾಲಕರ ಪತ್ರದೊಂದಿಗೆ ಕಾಲೇಜು ಆರಂಭ

ನರಗುಂದ: ಕೊರೊನಾ ಮಹಾಮಾರಿಯಿಂದ 8 ತಿಂಗಳಿಂದ ಬಾಗಿಲು ಮುಚ್ಚಿದ್ದ ಕಾಲೇಜುಗಳು ಒಂದೊಂದಾಗಿ ಆರಂಭಿಸಿದ್ದು ತರಗತಿ ಆರಂಭಿಸಲು ಪಾಲಕರ ಒಪ್ಪಿಗೆ ಪತ್ರ ಕಡ್ಡಾಯಗೊಳಿಸಿದ ಹಿನ್ನಲೆಯಲ್ಲಿಪಾಲಕರ ಒಪ್ಪಿಗೆ ಪತ್ರ ಪಡೆದು ಕಾಲೇಜು ಆರಂಭಿಸಿದ ಇಲ್ಲಿನ ವಿಶ್ವೇಶ್ವರಯ್ಯ ಪಾಲಿಟೆಕ್ನಿಕ್‌(ಡಿಪೊ್ಲೕಮಾ) ಕಾಲೇಜು ಆಡಳಿತ ಮಂಡಳಿ 26ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಕೋವಿಡ್‌ ತಪಾಸಣೆಗೆ ಒಳಪಡಿಸಲಾಯಿತು.

Vijaya Karnataka 19 Dec 2022, 2:01 pm
ನರಗುಂದ: ಕೊರೊನಾ ಮಹಾಮಾರಿಯಿಂದ 8 ತಿಂಗಳಿಂದ ಬಾಗಿಲು ಮುಚ್ಚಿದ್ದ ಕಾಲೇಜುಗಳು ಒಂದೊಂದಾಗಿ ಆರಂಭಿಸಿದ್ದು ತರಗತಿ ಆರಂಭಿಸಲು ಪಾಲಕರ ಒಪ್ಪಿಗೆ ಪತ್ರ ಕಡ್ಡಾಯಗೊಳಿಸಿದ ಹಿನ್ನಲೆಯಲ್ಲಿಪಾಲಕರ ಒಪ್ಪಿಗೆ ಪತ್ರ ಪಡೆದು ಕಾಲೇಜು ಆರಂಭಿಸಿದ ಇಲ್ಲಿನ ವಿಶ್ವೇಶ್ವರಯ್ಯ ಪಾಲಿಟೆಕ್ನಿಕ್‌(ಡಿಪೊ್ಲೕಮಾ) ಕಾಲೇಜು ಆಡಳಿತ ಮಂಡಳಿ 26ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಕೋವಿಡ್‌ ತಪಾಸಣೆಗೆ ಒಳಪಡಿಸಲಾಯಿತು.
Vijaya Karnataka Web gadaga (1)

ಸರಕಾರ ಮತ್ತು ತಾಂತ್ರಿಕ ಪರೀಕ್ಷಾ ಮಮಡಳಿ ಆದೇಶದಂತೆ ಕಾಲೇಜು ಸಿಬ್ಬಂದಿ, ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸುವ ಮೂಲಕ 2020-21ನೆ ಸಾಲಿನ ಶೈಕ್ಷಣಿಕ ಪ್ರವೇಶವನ್ನು ಆರಂಭಿಸಿದ ವಿಶ್ವೇಶ್ವರಯ್ಯ ಡಿಪೊ್ಲೕಮಾ ಕಾಲೇಜು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಯನ್ನು ಹಾಗೂ ಉಳಿದ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿಗಳನ್ನು ನ.23 ರಿಂದ ಅರಂಭಿಸುವುದಾಗಿ ಪ್ರಾಚಾರ್ಯ ಉಮೇಶ ಅರಕೇರಿ ತಿಳಿಸಿದರು.

ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ ಧರಿಸಿ ರಾರ‍ಯಪಿಡ್‌ ಟೆಸ್ಟ್‌ ಮಾಡಿಸಿಕೊಂಡರು. ಆರೋಗ್ಯ ಅಧಿಕಾರಿ ನಾಗರಾಜ ವಿಠಪ್ಪನವರ, ಮಂಜುಳಾ ತಳಕೇರಿ ಅವರು ತಪಾಸಣೆ ನಡೆಸಿದರು. ಈ ಸಂದರ್ಭದಲ್ಲಿ12 ಜನ ಸಿಬ್ಬಂದಿಗಳು,23 ಜನ ವಿದ್ಯಾರ್ಥಿಗಳನ್ನು ತಪಾಸಣೆಗೆ ಒಳಪಡಿಸಿದ್ದು ನೆಗಟಿವ್‌ ವರದಿಯಾಗಿದೆ. ಈ ಸಂದರ್ಭದಲ್ಲಿಉಪನ್ಯಾಸಕರಾದ ಬಿ.ಕೆ.ಕಿತ್ತಲಿ, ಬಿ.ಕೆ.ಕೋಳುರಮಠ, ಸಿವಾನಂದ ಹೋಳಿ, ಸಿ.ಎಲ್‌.ಪಲ್ಲೇದ, ಸವಿತಾ ಭರಮಗೌಡ್ರ, ದೀಪಾ ಅಡೂರ, ನಾಗರಾಜ ಕರಮುಡಿ, ಪ್ರಮೋದ ಚುಳಕಿ, ಎಚ್‌.ಎಸ್‌.ಬದಾಮಿ, ಎಸ್‌.ಬಿ.ನಲವಡಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ