ಆ್ಯಪ್ನಗರ

ವೃಂದಾವನ ಧ್ವಂಸ ಕೃತ್ಯಕ್ಕೆ ಖಂಡನೆ

ಲಕ್ಷ್ಮೇಶ್ವರ : ಗಂಗಾವತಿ ಸಮೀಪದ ನವವೃಂದಾವನ ನಡುಗಡ್ಡೆಯಲ್ಲಿ ಶ್ರೀ ವ್ಯಾಸರಾಜ ತೀರ್ಥ ಸ್ವಾಮಿಗಳ ಮೂಲ ವೃಂದಾವನ ಧ್ವಂಸಗೊಳಿಸಿದ್ದನ್ನು ಖಂಡಿಸಿ ಪಟ್ಟಣದ ಬ್ರಾಹ್ಮಣ ಸಮಾಜದವರು ಸಭೆ ಸೇರಿ ಖಂಡನಾ ನಿರ್ಣಯ ಕೈಗೊಂಡರು. ಬ್ರಾಹ್ಮಣ ಸಮಾಜದ ಬ್ರಹ್ಮವೃಂದದ ಅಧ್ಯಕ್ಷ ಗೋಪಾಲ ಪಡ್ನೀಸ್‌ ಅಧ್ಯಕ್ಷ ತೆಯನ್ನು ಶಂಕರಭಾರತಿಮಠದಲ್ಲಿ ಸಭೆ ನಡೆಯಿತು.

Vijaya Karnataka 22 Jul 2019, 5:00 am
ಲಕ್ಷ್ಮೇಶ್ವರ : ಗಂಗಾವತಿ ಸಮೀಪದ ನವವೃಂದಾವನ ನಡುಗಡ್ಡೆಯಲ್ಲಿ ಶ್ರೀ ವ್ಯಾಸರಾಜ ತೀರ್ಥ ಸ್ವಾಮಿಗಳ ಮೂಲ ವೃಂದಾವನ ಧ್ವಂಸಗೊಳಿಸಿದ್ದನ್ನು ಖಂಡಿಸಿ ಪಟ್ಟಣದ ಬ್ರಾಹ್ಮಣ ಸಮಾಜದವರು ಸಭೆ ಸೇರಿ ಖಂಡನಾ ನಿರ್ಣಯ ಕೈಗೊಂಡರು. ಬ್ರಾಹ್ಮಣ ಸಮಾಜದ ಬ್ರಹ್ಮವೃಂದದ ಅಧ್ಯಕ್ಷ ಗೋಪಾಲ ಪಡ್ನೀಸ್‌ ಅಧ್ಯಕ್ಷ ತೆಯನ್ನು ಶಂಕರಭಾರತಿಮಠದಲ್ಲಿ ಸಭೆ ನಡೆಯಿತು.
Vijaya Karnataka Web condemnation for varndavan
ವೃಂದಾವನ ಧ್ವಂಸ ಕೃತ್ಯಕ್ಕೆ ಖಂಡನೆ


ಶಂಕರ ಸೇವಾ ಸಮಿತಿ ಅಧ್ಯಕ್ಷ ವಿ.ಎಲ್‌.ಪೂಜಾರ ಮಾತನಾಡಿ,ವ್ಯಾಸರಾಜ ತೀರ್ಥ ಸ್ವಾಮಿಗಳ ಮೂಲ ವೃಂದಾವನನ್ನು ದುಷ್ಕರ್ಮಿಗಳು ಸಂಪೂರ್ಣವಾಗಿ ದ್ವಂಸಗೊಳಿಸಿರುವುದು ಸಮುದಾಯಕ್ಕೆ ಮಾಡಿದ ಅಪಮಾನವಾಗಿದೆ. ಇಂತಹ ಹೇಯ ಕೃತ್ಯವನ್ನು ಕೈಗೊಳ್ಳುವವರ ವಿರುದ್ದ ಸರಕಾರ ಕಠಿಣ ಕ್ರಮಕ್ಕೆ ಮುಂದಾಗಬೇಕು. ಆನೆಗುಂದಿ ಶ್ರೀ ವ್ಯಾಸರಾಜ ತೀರ್ಥರ ನವವೃಂದಾವನ ಗಡ್ಡೆಯು ಐತಿಹಾಸಿಕ ಹಾಗೂ ಸಮಾಜ ಬಾಂಧವರ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದೆ. ಅಪರಾಧಿಗಳಿಗೆ ಶಿಕ್ಷೆಯಾಗುವವರೆಗೂ ಹೋರಾಟ ನಡೆಸಬೇಕಾಗಿದೆ ಎಂದು ಎಚ್ಚರಿಸಿದರು.

ಸಮಾಜದ ಅಧ್ಯಕ್ಷ ಗೋಪಾಲ ಪಡ್ನೀಸ್‌ ಮಾತನಾಡಿ, ದುಷ್ಕರ್ಮಿಗಳ ಹೇಯ ಕೃತ್ಯ ಕ್ಷ ಮಾರ್ಹವಲ್ಲ, ಅವರು ಯಾರೆ ಆಗಿರಲಿ, ಎಷ್ಟೇ ಪ್ರಭಲರಾಗಿರಲಿ ಅವರನ್ನು ಬಂಧಿಸಿ ಉಗ್ರ ಶಿಕ್ಷೆ ನೀಡಬೇಕು ಎಂದರು.

ಶ್ರೀನಿವಾಸ ಕುಲಕರ್ಣಿ(ತಂಗೋಡ), ಪ್ರಹ್ಲಾದ್‌ರಾವ್‌ ಕುಲಕರ್ಣಿ, ಶ್ರೀಪಾದರಾಜ ಹೊಂಬಳ, ಕೃಷ್ಣ ಕುಲಕರ್ಣಿ, ಎ.ಪಿ.ಕುಲಕರ್ಣಿ, ಆರ್‌,ಎನ್‌.ಪಂಚಭಾವಿ, ವೆಂಕಟೇಶ ಗುಡಿ, ಬಿ.ಕೆ.ಕುಲಕರ್ಣಿ, ಕೆ.ಎಸ್‌.ಕುಲಕರ್ಣಿ, ನಾರಾಯಣಭಟ್‌ ಪುರಾಣಿಕ, ಪ್ರಭಾಕರ ಪಾಟೀಲಕುಲಕರ್ಣಿ, ರಾಘವೇಂದ್ರ ಪೂಜಾರ, ಡಿ.ಪಿ.ಹೇಮಾದ್ರಿ, ಕೆ.ಜಿ.ದೇಶಪಾಂಡೆ, ಶ್ರೀಕಾಂತ ಪೂಜಾರ, ರಾಜು ಹುಲಮನಿ, ವಿ.ಕೆ.ಪುರೋಹಿತ, ಕೃಷ್ಣಕುಮಾರ ಕುಲಕರ್ಣಿ ಇತರರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ